Advertisement
ಮೇಷ: ಹೆಚ್ಚಿನ ವ್ಯವಹಾರಗಳೆಲ್ಲಾ ಸ್ಥಗಿತಗೊಂಡಿದ್ದು ಆರ್ಥಿಕವಾಗಿ ಕಂಗಾಲಾದ ನಿಮಗೆ ಈಗ ವೆಚ್ಚಗಿಂತ ಆದಾಯವು ಹೆಚ್ಚಾಗಿದ್ದು ಸ್ವಲ್ಪ ಸಮಾಧಾನ ತರಲಿದೆ. ಅರ್ಧಕ್ಕೆ ನಿಂತುಹೋದ ಕೆಲಸ ಪುನಾರಂಭವಾಗಲಿದೆ.
Related Articles
Advertisement
ಸಿಂಹ: ಸ್ವಾಭಿಮಾನಿಗಳೂ, ಶೂರರೂ, ಸಾಹಸ ಶೂರರೂ ಆದ ನಿಮಗೆ ಈ ವರ್ಷ ಶುಭದ ಹೆಗ್ಗಳಿಕೆಯ ಕಾಲವೆನ್ನಬಹುದು. ಗೃಹ ಬದಲಿಯೋ ಪಿಠೊಪಕರಣಗಳ ಖರೀದಿಯಿಂದ ಖರ್ಚು ತಂದೀತು. ಮನದ ಇಚ್ಛೆ ನಡೆದೀತು.
ಕನ್ಯಾ: ಮಕ್ಕಳೇ ಶತ್ರುಗಳಂತಾದಾರು. ವಿಧಿಯು ಇತ್ತ ಕೈಕೊಟ್ಟೀತು. ಅನ್ಯ ಕಾರ್ಯ ನಿಮಿತ್ತ ದೂರ ಪ್ರಯಾಣ ಕಂಡುಬರಬಹುದು. ಆರ್ಥಿಕ ನಷ್ಟದೊಂದಿಗೆ ನ್ಯಾಯಾಲಯದ ದರ್ಶನವೂ ಆದೀತು. ಆರೋಗ್ಯದಲ್ಲಿ ಏರುಪೇರು.
ತುಲಾ: ನಿಮ್ಮ ಮನಸ್ಸು ತಕ್ಕಡಿಯಂತೆ ಡೋಲಾಯಮಾನವಾದೀತು. ಸಂದೇಹಗಳು ಹೆಚ್ಚೇ ಆದಾವು. ನೀವು ಹಾಕಿದ ಯೋಜನೆಗಳೆಲ್ಲ ಉತ್ತಮ ಆದರೆ ಅದಕ್ಕೆ ತಗಲುವ ಖರ್ಚು ಅತೀ ಹೆಚ್ಚು ಅದರ ಬಗ್ಗೆ ಆಲೋಚಿಸಿರಿ.
ವೃಶ್ಚಿಕ: ಆರಂಭದಲ್ಲಿರುವ ಧೈರ್ಯವು ನಿಧಾನವಾಗಿ ಮರೆಯಾಗಬಹುದು. ಆದರೂ ಶತ್ರು ನಿವಾರಣೆ, ಗೃಹ ಸುಖ ಶಾಂತಿಯನ್ನು ಆಗಾಗ ಪಡೆದು ನೆಮ್ಮದಿ ತಾಳುವಿರಿ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿರಿ.
ಧನು: ರಾಜಕೀಯವಾಗಿ ಸ್ಥಾನಲಾಭವಿದೆ. ಪ್ರೇಮ ಪ್ರಕರಣದ ಬಗ್ಗೆ ಮನೆಯಲ್ಲಿ ರಾದ್ದಾಂತ ಎಬ್ಬಿಸಲಿದೆ. ಬಂಧುಗಳ ಸಮಾಗಮ ಸಂತಸ ತರಲಿದೆ. ಮನೆಯಲ್ಲಿ ಮಕ್ಕಳ ಆರೋಗ್ಯ ಹಾನಿ. ವೈದ್ಯ ಸಂದರ್ಶನದಿಂದ ಖರ್ಚು.
ಮಕರ: ಧನ ಸಂಪತ್ತಿನಿಂದ ಎಲ್ಲವನ್ನೂ ಪಡೆಯಬಹುದು ಎಂಬುದು ನಿಮ್ಮ ಭ್ರಮೆ. ಉಷ್ಣವಾಯುಪೀಡೆ ಎಂದು ಅಲಕ್ಷ್ಯ ಬೇಡ. ಕಾರ್ಯಸಾಧನೆ ಉತ್ತಮವಿದ್ದರೂ ದೇಹಾಯಾಸ ಹೆಚ್ಚು. ಮನೆಯಲ್ಲಿ ಸ್ವಲ್ಪ ರಂಪಾಟವಿದ್ದೀತು.
ಕುಂಭ: ಗೃಹ-ವಾಹನಾದಿಗಳಿಂದ ಖರ್ಚು ಬಂದೀತು. ನೀರಿನಂತೆ ಹಣ ವ್ಯಯವಾದರೂ ನೆಮ್ಮದಿ ಕಾಣದು. ನಿರಂತರ ಆರ್ಥಿಕ ದುಃಸ್ಥಿತಿಯನ್ನು ಅನುಭವಿಸಿದ ನಿಮಗೆ ಬೇಸರ ತರಲಿದೆ. ಕಿರು ಪ್ರಯಾಣ ಮಾಡಬೇಕಾದೀತು.
ಮೀನ: ಹಳೇ ಮನೆ ರಿಪೇರಿಗೆಂದು ಹೋದ ನಿಮಗೆ ಹೊಸ ಮನೆ ಕಟ್ಟಿದಷ್ಟು ಹಣ ಪೋಲಾಗಲಿದೆ. ಆದರೂ ಮುಗಿಸಿದ ಸಂತೃಪ್ತಿ ನಿಮಗೆ ಸಿಗಲಿದೆ. ಕೈಗೆ ಬಂದ ಹಣವನ್ನು ಆದಷ್ಟು ಜಾಗ್ರತೆಯಿಂದ ಇಟ್ಟುಬಿಡಿರಿ.
ಎನ್.ಎಸ್ ಭಟ್