Advertisement

ಈ ರಾಶಿಯವರಿಗಿಂದು ನೀವು ಎಣಿಸಿದ ಕೆಲಸ ಕಾರ್ಯಗಳು ಜರಗಿ ಸಂತಸ ದೊರಕಲಿದೆ

06:35 AM May 31, 2021 | Team Udayavani |

31-05-2021

Advertisement

ಮೇಷ: ಸದಾ ಕಾಲವೂ ಕಾರ್ಯಪ್ರವೃತ್ತರಾಗಿ ದುಡಿಯುತ್ತಿರುವ ನಿಮಗೆ ಉತ್ತಮ ಫ‌ಲಗಳು ಗೋಚರಕ್ಕೆ ಬರುತ್ತವೆ. ದೈಹಿಕ ಆರೋಗ್ಯವು ತೃಪ್ತಿಕರವಾಗಿದ್ದರೂ ಜಾಗ್ರತೆ ಮಾಡಲೇ ಬೇಕಾದೀತು. ಮುನ್ನಡೆಯಿರಿ.

ವೃಷಭ: ಉದ್ಯೋಗರಂಗದಲ್ಲಿ ಪದೇ ಪದೇ ಅನೇಕ ಎಡರುತೊಡರುಗಳು ಉಂಟಾಗಿ ಎಷ್ಟೇ ಕಿರಿಕಿರಿ ಉಂಟಾದರೂ ನಿಮ್ಮ ಅಭಿವೃದ್ಧಿಗೆ ಎನೂ ಅಡ್ಡ ಬರಲಾರದು. ಮನೆಮಂದಿಗಳ ಸಹಕಾರ ನಿಮಗೆ ಸದಾಕಾಲ ಇದೆ.

ಮಿಥುನ: ಸಾಂಸಾರಿಕವಾಗಿ ಪತ್ನಿ, ಪುತ್ರರು ನಿಮ್ಮೊಂದಿಗೆ ಇದ್ದುದೇ ನಿಮಗೆ ಸಂತಸವಾಗಲಿದೆ. ಸದಾ ಉದ್ವೇಗಕ್ಕೆ ಒಳಗಾಗುವ ನೀವು ಸ್ವಲ್ಪ ಸಮಾಧಾನ ತಂದುಕೊಳ್ಳಬೇಕು. ಮನೆಮಂದಿಯೊಡನೆ ಸರಸದ ಸಮಯ.

ಕರ್ಕ: ಉದ್ಯೋಗದ ಬದಲಾವಣೆ ಕುರಿತು ಆಲೋಚಿಸುವಿರಿ. ಆದರೆ ಈ ಸಮಯ ಸರಿಯಲ್ಲ. ನೀವು ಎಣಿಸಿದ ಕೆಲಸ ಕಾರ್ಯಗಳು ಜರಗಿ ಸಂತಸ, ಸಮಾಧಾನ ದೊರಕಲಿದೆ. ಬಂಧುಗಳ ಸಹಕಾರ ನಿಮಗಿದೆ.

Advertisement

ಸಿಂಹ: ಕಾರ್ಯಕ್ಷೇತ್ರದಲ್ಲಿ ಚೇತರಿಕೆಯ ವಾತಾವರಣ ಗೋಚರಕ್ಕೆ ಬರುವುದು. ದೂರ ಸಂಚಾರದಲ್ಲಿ ಉತ್ತಮ ಫ‌ಲಗಳು ಅನುಭವಕ್ಕೆ ಬರುತ್ತವೆ. ಕೆಲವು ವಿಷಯಗಳಲ್ಲಿ  ಗೊಂದಲಗಳು ಸೃಷ್ಟಿಯಾಗಿ ಮನ ಕೆಡಿಸಲಿದೆ.

ಕನ್ಯಾ: ಉದ್ಯೋಗರಂಗದಲ್ಲಿ ಭಿನ್ನಮತ ಕರಗಿ ಸೌಹಾರ್ದವು ಮೂಡಿ ಬರಲಿದೆ. ಪ್ರೇಮಿಗಳು ಪ್ರೀತಿ ಪ್ರಣಯದಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡು ಬರುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ ನೆಮ್ಮದಿ ತರಲಿದೆ.

ತುಲಾ: ವಿದ್ಯಾರ್ಥಿಗಳು ಮುನ್ನಡೆಯನ್ನು ಸಾಧಿಸಲಿದ್ದಾರೆ. ಹಾಗೆಂದು ಉದಾಸೀನತೆ ಸಲ್ಲದು. ನಿಮ್ಮ ಸುತ್ತಮುತ್ತಲಿನ ವಾತಾವರಣ ಉದ್ವಿಗ್ನತೆಯಿಂದ ಕೂಡಿರುತ್ತದೆ. ಖರ್ಚುಗಳನ್ನು  ಹೆಚ್ಚಿಸುವ ಕಾರ್ಯಕ್ಕೆ ಕೈಹಾಕದಿರಿ.

ವೃಶ್ಚಿಕ: ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆತರೆ ಉತ್ತಮ. ಹಂತಹಂತವಾಗಿ ಆರೋಗ್ಯ ಹಾಗೂ ಆರ್ಥಿಕ ಸ್ಥಿತಿಯು ಅಭಿವೃದ್ಧಿಯಾಗುತ್ತಲೇ ಹೋಗುತ್ತದೆ. ತಾಳ್ಮೆ ಸಮಾದಾನವು ಮುಂದಿನ ಭವಿಷ್ಯಕ್ಕೆ ಪೂರಕವಾಗಲಿದೆ.

ಧನು: ಆತ್ಮವಿಶ್ವಾಸ ಹೆಚ್ಚಿದೆ ಎಂದು ಮನಸ್ಸಿಗೆ ತೋಚಿದನ್ನು ಮಾಡದಿರಿ. ಯಾವ ಕಾರ್ಯಕ್ಕೂ ಮುನ್ನ ಚಿಂತಿಸಿ, ಯೋಚಿಸಿ ಮುನ್ನಡೆಯಿರಿ. ವೃತ್ತಿರಂಗದಲ್ಲಿ ಕೆಲಸದ ಒತ್ತಡಗಳು ಹೆಚ್ಚಾದೀತು. ತಲೆ ಕೆಡಿಸದಿರಿ.

ಮಕರ: ನಿಮ್ಮಿಂದ ತಪ್ಪುಗಳಾಗದಂತೆ ಎಚ್ಚರಿಕೆಯ ನಡೆ ನಿಮ್ಮದಾಗಲಿ. ಆಪೆ¤àಷ್ಟರ ಕುರಿತಂತೆ ಮನದಲ್ಲಿ ಚಿಂತಿಸಲಿದ್ದೀರಿ. ಗೆಳೆತನವು ಹೊಸದಾಗಿ ಆಗಿದ್ದರೆ ಜಾಗ್ರತೆ ಮಾಡಿರಿ. ಪರಿಸ್ಥಿತಿ ಸುದಾರಿಸಲಿದೆ.

ಕುಂಭ: ಹಂತಹಂತವಾಗಿ ಅಭಿವೃದ್ಧಿಯು ಕಂಡು ಬಂದೀತು. ನಿಮ್ಮ ವ್ಯಕ್ತಿತ್ವವು ಇತರರನ್ನು ಆಕರ್ಷಣೆ  ಮಾಡಲಿದೆ. ಇತರರ ಸಲಹೆಗಳನ್ನು ಕುರುಡಾಗಿ ಒಪ್ಪದಿರಿ. ನಿಮ್ಮ ಕರ್ತವ್ಯ ಮಾಡಿರಿ.

ಮೀನ: ಕರ್ತವ್ಯಗಳಿಂದ ವಿಮುಖರಾಗದಿರಿ. ಅವಿವಾಹಿತರಿಗೆ ವೈವಾಹಿಕ ಸಂಬಂಧಗಳು ಅಡೆತಡೆಗಳಿಂದಲೇ ಮುಂದುವರಿಯಲಿದೆ. ಕುಟುಂಬಿಕವಾಗಿ ಅನಿರೀಕ್ಷಿತ ವರ್ತನೆಯಿಂದ ಅಸಹನೆ ಮೂಡಿಸಲಿದ್ದೀರಿ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next