Advertisement

ಗ್ರಹಬಲ: ಅತೀ ಮಹತ್ವದ ವಿಚಾರದಲ್ಲಿ ದುಡುಕದೆ ವಿವೇಚನೆಯಿಂದ ಹೆಜ್ಜೆ ಇಡಿ, ಜಯ ನಿಮ್ಮದೆ

06:36 AM May 21, 2021 | Team Udayavani |

21-05-2021

Advertisement

ಮೇಷ: ಆಕಸ್ಮಿಕವಾಗಿ ಧನಾಗಮನದಿಂದ ಕಾರ್ಯಸಿದ್ಧಿ ಎನಿಸಿ ಮನೆಯಲ್ಲಿ ಧಾರ್ಮಿಕ ಹಾಗೂ ಶುಭಮಂಗಲ ಕಾರ್ಯಗಳಿಂದ ಮನಸ್ಸು ಉಲ್ಲಸಿತಗೊಳ್ಳಲಿದೆ. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿ ಬರುವುದು.

ವೃಷಭ: ಎಲ್ಲದಕ್ಕೂ ಹಿರಿಯರ ಮಾರ್ಗದರ್ಶನ ಪಡೆದರೆ ಉತ್ತಮ ಎನಿಸಲಿದೆ. ಮಕ್ಕಳ ಆರೋಗ್ಯದತ್ತ ಗಮನಹರಿಸುವುದು ಅಗತ್ಯ. ದುಡುಕಿನಿಂದ ಕೆಟ್ಟ ಪರಿಣಾಮಗಳಿಗೆ ಕಾರಣರಾಗದಿರಿ. ಮನೆಯಲ್ಲಿ ಸಮಾಧಾನ ನೆಲೆಸಲಿದೆ.

ಮಿಥುನ: ಪ್ರೀತಿ ಪಾತ್ರರ ಸಮಾಗಮದಿಂದ ಉತ್ಸಾಹ ತೋರಿಬರಲಿದೆ. ವಾಹನ ಖರೀದಿ ಯಾ ಗೃಹ ಯಾ ಭೂಮಿ ಖರೀದಿದಾರರಿಗೆ ಅಧಿಕ ಧನವ್ಯಯವಾದರೂ ಸಮಾಧಾನವೆನಿಸಲಿದೆ. ವ್ಯಾಪಾರ, ವ್ಯವಹಾರದಲ್ಲಿ ಚೇತರಿಕೆ ಇದೆ.

ಕರ್ಕ: ಆರ್ಥಿಕವಾಗಿ ಅಭಿವೃದ್ಧಿಯು ಕಂಡು ಬರುವುದು. ಉದ್ಯೋಗಾಪೇಕ್ಷಿಗಳಿಗೆ ಆಕಸ್ಮಿಕ ಉದ್ಯೋಗ ಲಾಭ ಒದಗಿ ಬರಲಿದೆ. ಹಿಂದಿನ ಕೆಲಸಕಾರ್ಯಗಳ ಬಗ್ಗೆ ಸಿಂಹಾವಲೋಕನ ಅಗತ್ಯವಿದೆ. ಆಪ್ತ ಸ್ನೇಹಿತರಿಂದ ನೆರವು ಕಂಡುಬಂದೀತು.

Advertisement

ಸಿಂಹ: ಕೃಷಿಕರಿಗೆ ಆಗಾಗ ಆರಂಭದ ಮಳೆಯಿಂದ ತುಸು ನೆಮ್ಮದಿ ಎನಿಸಿ ಸಾಧಕವಾಗಲಿದೆ. ಆಚಾರವಂತರಿಗೆ ದೂರದ ಕ್ಷೇತ್ರಗಳ ದರ್ಶನ ಭಾಗ್ಯ ದೊರೆತು ನೆಮ್ಮದಿ ತರಲಿದೆ. ಕೂಡಿಟ್ಟ ಹಣದ ವ್ಯಯದಿಂದ ಸದುಪಯೋಗವಾಗಲಿದೆ.

ಕನ್ಯಾ: ನಿಮ್ಮ ಕಾರ್ಯವೈಖರಿಗೆ ಸಹೋದ್ಯೋಗಿಗಳಿಂದ ಪ್ರಶಂಸೆಗೆ ಒಳಗಾಗುವಿರಿ. ನಿರುದ್ಯೋಗಿಗಳು ಉದ್ಯೋಗದ ಲಾಭವನ್ನು ಪಡೆದಾರು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ರೀತಿಯಲ್ಲಿ ಫ‌ಲಿತಾಂಶ ದೊರೆಯಲಿದೆ. ಮುಂದಾಳತ್ವ ವಹಿಸುವಿರಿ.

ತುಲಾ: ಉದ್ಯೋಗಿಗಳಿಗೆ ಕಚೇರಿಯ ಕೆಲಸಗಳು ನಿಮ್ಮ ಪರವಾಗಿ ಕಾರ್ಯ ಮಾಡಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ರೀತಿಯಲ್ಲಿ ಫ‌ಲಿತಾಂಶ ದೊರಕಲಿದೆ. ನಿರುದ್ಯೋಗಿಗಳಿಗೆ ಅವರ ಇಚ್ಛೆಗೆ ಅನುಗುಣವಾಗಿ ಉದ್ಯೋಗವು ಲಭಿಸಲಿದೆ. ಶುಭವಿದೆ.

ವೃಶ್ಚಿಕ: ಆರೋಗ್ಯ ಭಾಗ್ಯವು ಸಾವಕಾಶವಾಗಿ ಸುಧಾರಿಸಿ ತೃಪ್ತಿ ಎನಿಸಲಿದೆ. ವ್ಯಾಪಾರಿಗಳಿಗೆ ತಕ್ಕಮಟ್ಟಿನ ಲಾಭವು ಸಿಗಲಿದೆ. ಆಕಸ್ಮಿಕ ವಿದೇಶ ಯಾನದ ಯೋಗದಿಂದ ವಿದ್ಯಾರ್ಥಿಗಳಿಗೆ ಪೂರಕವಾದ ವಾತಾವರಣ ದೊರಕಲಿದೆ.

ಧನು: ಅತೀ ಮಹತ್ವದ ವಿಚಾರದಲ್ಲಿ ದುಡುಕದೆ ವಿವೇಚನೆಯಿಂದ ಹೆಜ್ಜೆ ಇಟ್ಟಲ್ಲಿ ಜಯವು ನಿಮ್ಮ ಪಾಲಿಗಿರುತ್ತದೆ. ಬಹುದಿನಗಳಿಂದ ಕಾದು ಸೋತವರಿಗೆ ಕಂಕಣಬಲ ಕೂಡಿ ಬರಲಿದೆ. ಸಾಂಸಾರಿಕವಾಗಿ ಸ್ವಲ್ಪ ಕಿರಿಕಿರಿ ಕಂಡುಬಂದೀತು.

ಮಕರ: ಆತ್ಮವಿಶ್ವಾಸ, ಸ್ವಪ್ರಯತ್ನದಲ್ಲಿ ನಂಬಿಕೆ ಇಟ್ಟಲ್ಲಿ ಕಾರ್ಯಸಿದ್ಧಿಯಾಗಲಿದೆ. ಸಾಂಸಾರಿಕವಾಗಿ ಸಮಾಧಾನದಿಂದ ಸುಧಾರಿಸಿಕೊಂಡು ಹೋಗುವುದು ಒಳಿತು. ಮಹಿಳೆಯರಿಗೆ ಅನಾವಶ್ಯಕವಾಗಿ ಋಣಾತ್ಮಕ ಚಿಂತನೆಗಳು ಕಾಡಲಿದೆ.

ಕುಂಭ: ಪುರುಷರಿಗೆ ವ್ಯಾಪಾರ, ವ್ಯವಹಾರದಲ್ಲಿ ವಂಚನೆ ತೋರಿಬಂದು ವಿಶ್ವಾಸದ ದುರುಪಯೋಗವಾಗಲಿದೆ. ಮಾತಿಗೆ ಮಾತು ಬೆಳೆಸದೆ ಮೌನದಿಂದ ಕಾರ್ಯಸಾಧಿಸಬೇಕು. ನಿಷ್ಠೂರ ಕಟ್ಟಿಕೊಳ್ಳುವುದು ಒಳ್ಳೆಯದಲ್ಲ.

ಮೀನ: ಸಾಂಸಾರಿಕವಾಗಿ ಸಮಾಧಾನವಿದ್ದರೂ ಹಿತಶತ್ರುಗಳ ಉಪಟಳ ಹಾಗೂ ದಾಯಾದಿಗಳ ಕಿರಿಕಿರಿಯು ತಪ್ಪಿದಲ್ಲಿ ದೂರ ಸಂಚಾರದ ಸಾಧ್ಯತೆ ಇದ್ದು ಸಾಧಕ ಬಾಧಕಗಳ ಬಗ್ಗೆ ಯೋಚಿಸಿ ಮುನ್ನಡೆಯಿರಿ. ಧನವ್ಯಯವು ಹೆಚ್ಚಾಗಲಿದೆ

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next