Advertisement

ನಿಮ್ಮ ಇಂದಿನ ಗ್ರಹಬಲ: ಹಿರಿಯರ ಉಪದೇಶಗಳಿಗೆ ಅಸಡ್ಡೆ ತೋರಿಸದೆ ಸ್ಪಂದಿಸಿರಿ

08:28 AM Apr 21, 2021 | Team Udayavani |

21-04-2021

Advertisement

ಮೇಷ: ಹಲವು ಎಡರು ತೊಡರುಗಳು ಕಂಡು ಬಂದರೂ ಹಂತ ಹಂತವಾಗಿ ಅಭಿವೃದ್ಧಿಯು ಕಂಡುಬಂದು ನವಚೈತನ್ಯ ಮೂಡಿ ಬರುವುದು. ಮನೆಯಲ್ಲಿ ಅತಿಥಿ ಅಭ್ಯಾಗತರ ಆಗಮನದಿಂದ ಸಂತಸವು ಮೂಡಿ ಬರುವುದು.

ವೃಷಭ: ನೂತನ ಬಾಂಧವ್ಯದಿಂದ ವೃದ್ಧಿ ಕಂಡುಬಂದು ನೆಮ್ಮದಿ ದೊರಕಲಿದೆ. ಸತ್ಕಾರಾದಿಗಳಿಗೆ ಧನವ್ಯಯ ಕಂಡು ಬಂದರೂ ಸಂತೃಪ್ತಿ ದೊರಕಲಿದೆ. ಆಗಾಗ ವ್ಯಯವು ಅಧಿಕವಾಗಿ ವ್ಯಾಪಾರ, ವ್ಯವಹಾರಗಳಲ್ಲಿ ಆದಾಯವು ವರ್ಧಿಸಲಿದೆ.

ಮಿಥುನ: ಶ್ರೀ ದೇವರ ದರ್ಶನದಿಂದ ಮನೋಕಾಮನೆಗಳೆಲ್ಲಾ ಪೂರೈಸಲಿದೆ. ನಾನಾ ರೀತಿಯಲ್ಲಿ ಕೆಲಸಕಾರ್ಯಗಳು ಪೂರ್ಣತೆಯನ್ನು ಪಡೆಯಲಿದೆ. ಆರ್ಥಿಕವಾಗಿ ಹೆಚ್ಚಿನ ಸಮಸ್ಯೆಯು ಕಂಡುಬರಲಾರದು. ಗೃಹಿಣಿಯ ಬೇಡಿಕೆಗೆ ಸ್ಪಂದಿಸಿರಿ.

ಕರ್ಕ: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರೆತು ಸಮಾಧಾನವಾಗಲಿದೆ. ವಿದ್ಯಾರ್ಥಿಗಳು ಸಮಸ್ಯೆಗಳಿಂದ ಪಾರಾಗಿ ನೆಮ್ಮದಿ ಹೊಂದಲಿದ್ದಾರೆ. ಹಿರಿಯರ ಉಪದೇಶಗಳಿಗೆ ಅಸಡ್ಡೆ ತೋರಿಸದೆ ಸ್ಪಂದಿಸಿರಿ. ಅತಿಥಿಗಳು ಬಂದಾರು.

Advertisement

ಸಿಂಹ: ಕೌಟುಂಬಿಕವಾಗಿ ಆಗಾಗ ಆಕ್ಷೇಪ, ಮನಸ್ತಾಪಗಳಿಂದ ಮನೋವ್ಯಾಕುಲತೆ ಹೆಚ್ಚಲಿದೆ. ಆಗಾಗ ಅನಾರೋಗ್ಯದಿಂದ ದೇಹರುಜೆ ತಂದೀತು. ಆಗಾಗ ತೋರಿಬರುವ ಕಾರ್ಯಸಾಧನೆಯ ಅಡ್ಡಿಯನ್ನು ಪ್ರಯತ್ನಬಲದಿಂದ ನಿವಾರಿಸಿ.

ಕನ್ಯಾ: ಆಗಾಗ ಮನಸ್ಸಿನ ನೆಮ್ಮದಿ ಕೆಡಲಿದೆ. ಸ್ವತಂತ್ರ ಉದ್ಯೋಗಿಗಳು, ವ್ಯಾಪಾರಸ್ಥರು, ಹೆಚ್ಚಿನ ಎಚ್ಚರಿಕೆಯಿಂದ ಮುಂದುವರಿದ್ದಲ್ಲಿ ಮೂಲಧನ ಇಮ್ಮಡಿಯಾಗಲಿದೆ. ವ್ಯಾಪಾರ, ವ್ಯವಹಾರವು ಸುಸ್ಥಿತಿಯಲ್ಲಿದ್ದು ಸಮಾಧಾನವಾಗಲಿದೆ.

ತುಲಾ: ಉದ್ಯೋಗದಲ್ಲಿ ಮುಂಭಡ್ತಿ, ಬದಲಾವಣೆ, ವರ್ಗಾವಣೆ ಇತ್ಯಾದಿಗಳು ತೋರಿಬಂದಾವು. ಇಷ್ಟಮಿತ್ರರ ಪ್ರೀತಿ ವಿಶ್ವಾಸ, ಸಹಕಾರ ಮನೋಭಾವಗಳಿಂದ ನೀವು ಕೈಗೊಳ್ಳುವ ಕಾರ್ಯಕಲಾಪಗಳು ಪೂರ್ತಿಗೊಳ್ಳುವುವು. ಶುಭವಿದೆ.

ವೃಶ್ಚಿಕ: ಶುಭಮಂಗಲ ಕಾರ್ಯಗಳು ನೀವು ಇಚ್ಛಿಸಿದ ರೀತಿಯಲ್ಲಿ ನಡೆಯಲಿದೆ. ಮನೆಯಲ್ಲಿ ಸಮಾಧಾನವು ನೆಲೆಸಲಿದೆ. ಕುಟುಂಬದ ಹಿತಶತ್ರುಗಳ ಕಾಟದಿಂದ ಕಿರಿಕಿರಿ ಕಂಡುಬರಲಿದೆ. ಇಚ್ಛಿಸಿದ ಕಾರ್ಯದಲ್ಲಿ ಸಿದ್ಧಿ.

ಧನು: ಒಳ್ಳೆಯ ಮನೋಭಾವ, ಧೀರತನವೂ ಕಾರ್ಯಭಾಗದಲ್ಲಿ ಉತ್ಸಾಹವೂ ನೆಲೆಗೊಳ್ಳಲಿರುವುದು. ಅವಿರತ ಚಟುವಟಿಕೆಗಳು ದೇಹಾರೋಗ್ಯದಲ್ಲಿ ಪರಿಣಾಮ ಬೀರದಂತೆ ಜಾಗ್ರತೆ ವಹಿಸಿರಿ. ಉದ್ವೇಗ, ಸಿಟ್ಟು ಬಿಟ್ಟು ಬಿಡಿರಿ.

ಮಕರ: ನ್ಯಾಯಾಲಯದ ವಾದವಿವಾದಗಳು ಸದ್ಯಕ್ಕೆ ಮುಕ್ತಾಯಗೊಳ್ಳುವ ಲಕ್ಷಣ ತೋರಿಬಾರದು. ಅನಿರೀಕ್ಷಿತ ರೀತಿಯಲ್ಲಿ ಕೆಲಸ ಕಾರ್ಯಗಳು ನಡೆದು ಅಚ್ಚರಿ ತರಲಿದೆ. ಸಹೋದ್ಯೋಗಿಗಳ ದುವ್ಯìವಹಾರಗಳು ಗೋಚರಕ್ಕೆ ಬಂದೀತು.

ಕುಂಭ:ಎಚ್ಚರಿಕೆಯಿಂದ ಹೆಜ್ಜೆ ಇಟ್ಟಲ್ಲಿ ಮುನ್ನಡೆಗೆ ಸಾಧಕವಾಗಲಿದೆ. ಸಾಂಸಾರಿಕವಾಗಿ ತುಸು ನೆಮ್ಮದಿ ಗೋಚರಕ್ಕೆ ಬರಲಿದೆ. ಕಾರ್ಯರಂಗದಲ್ಲಿ ದುಡಿಮೆ ಹೆಚ್ಚಿ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕಾದೀತು. ಶುಭವಿದೆ.

ಮೀನ: ಆರ್ಥಿಕ ದುರಿತಗಳು ಕಡಿಮೆಯಾಗಿ ಕಾರ್ಯಾನುಕೂಲಕ್ಕೆ ಸಾಧಕವಾಗಲಿದೆ. ಆದರೂ ಖರ್ಚುವೆಚ್ಚಗಳ ಬಗ್ಗೆ ಹಿಡಿತ ಗಟ್ಟಿಯಾಗಿರಲಿ. ಸಮಾಜ ಕಾರ್ಯ, ಜನೋಪಕಾರ ಬುದ್ಧಿಯಿಂದ ಶ್ಲಾಘನೆ, ಮೆಚ್ಚುನುಡಿ ಸಿಗಲಿದೆ.

ಎನ್.ಎಸ್.ಭಟ್

Advertisement

Udayavani is now on Telegram. Click here to join our channel and stay updated with the latest news.

Next