Advertisement
ಮೇಷ: ಆಗಾಗ ಇಷ್ಟಮಿತ್ರರ ಆಗಮನದಿಂದ ಹರುಷ ತರಲಿದೆ. ಮುಖ್ಯವಾಗಿ ಉದರ ಸಂಬಂಧಿತ ಸಮಸ್ಯೆ ಗಳು, ಸಿಟ್ಟಿನ ನಿರ್ಣಯದಿಂದ ಅನಾವಶ್ಯಕ ತೊಂದರೆಗಳನ್ನು ಎದುರಿಸುವಂತಾದೀತು. ಉದ್ವೇಗ ಕಡಿಮೆ ಮಾಡಿರಿ.
Related Articles
Advertisement
ಸಿಂಹ: ವೃತ್ತಿರಂಗದಲ್ಲಿ ಮೇಲಾಧಿಕಾರಿಗಳಿಗೆಜವಾಬ್ದಾರಿಯು ಹೆಚ್ಚಲಿದ್ದು ದೇಹಾಯಾಸಕ್ಕೆ ಕಾರಣ ವಾಗಲಿದೆ. ಉದ್ದಿಮೆದಾರರಿಗೆ ನೌಕರ ವರ್ಗದ ಸತ್ಯಾಗ್ರಹದಿಂದ ಕ್ಲೇಶ ಕಂಡುಬಂದೀತು. ರಾಜಕೀಯದವರಿಗೆ ತಲೆಬಿಸಿ ಕಂಡು ಬರಲಿದೆ.
ಕನ್ಯಾ: ಹಂತಹಂತವಾಗಿ ಮುನ್ನಡೆ ಕಂಡುಬಂದು ಸಮಾಧಾನವಾಗಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ. ದಾಂಪತ್ಯದಲ್ಲಿ ಸಂತಾನಫಲದ ಸೂಚನೆ ಕಂಡು ಬಂದು ಸಂತಸವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ.
ತುಲಾ: ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಯೋಗ ಕಂಡು ಬರಲಿದೆ. ಎಲ್ಲಕ್ಕೂ ನಿಮ್ಮ ಪ್ರಯತ್ನ ಬಲ, ಕ್ರಿಯಾಶೀಲತೆಯು ಪೂರಕವಾಗಲಿದೆ. ನಿಮ್ಮ ವೈಯಕ್ತಿಕ ಗೌರವ, ಘನತೆ ಕಾಪಾಡಿಕೊಂಡು ಬನ್ನಿರಿ. ಶುಭ ಫಲವಿದೆ.
ವೃಶ್ಚಿಕ: ಎಲ್ಲಾ ರೀತಿಯ ಕ್ಷೇತ್ರದಲ್ಲೂ ಅಭಿವೃದ್ಧಿ ಕಂಡು ಬರಲಿದೆ. ಸಾಮಾಜಿಕವಾಗಿ ಪ್ರಶಂಸೆ ಪಡೆಯಲಿದ್ದೀರಿ. ಆರೋಗ್ಯ ಭಾಗ್ಯವು ಸುಧಾರಿಸುತ್ತಾ ಹೋದರೂ ಉದಾಸೀನ ಮಾಡದಿರಿ. ಶಾಂತಿ, ಸಮಾಧಾನ, ಪ್ರಯತ್ನ ಅಗತ್ಯವಿದೆ.
ಧನು: ಸಂಸಾರದಲ್ಲಿ ಆಗಾಗ ಏರುಪೇರು ತೋರಿ ಬಂದೀತು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವರು ಹಂತ ಹಂತವಾಗಿ ಗುಣಮುಖರಾಗುತ್ತಾರೆ. ಕೋರ್ಟು ಕೇಸುಗಳಿಂದ ಮುಕ್ತರಾಗುವ ಸಾಧ್ಯತೆ ಇದೆ. ಯಾರನ್ನೂ ನಂಬಿ ಮೋಸ ಹೋಗದಿರಿ.
ಮಕರ: ಇತರರ ಮಾತು ಕೇಳಿ ನಿರ್ಧಾರ ಕೈಗೊಳ್ಳದಿರಿ. ವಿದೇಶಯಾನದ ಭಾಗ್ಯ ಆಗಾಗ ಒದಗಿ ಬಂದೀತು. ಮನೆಯಲ್ಲಿ ಶುಭಮಂಗಲ ಕಾರ್ಯದ ಚಿಂತನೆ ಕಾರ್ಯಗತವಾಗಲಿದೆ. ಹಿತಶತ್ರುಗಳಿಂದ ದೂರವಿದ್ದರೆ ಒಳ್ಳೆಯದು.
ಕುಂಭ: ಜ್ಞಾನದಾಹಿಗಳಿಗೆ ಇದು ಉತ್ತಮ ಕಾಲ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಕೀರ್ತಿ ಪಡೆಯಲಿ ದ್ದಾರೆ. ಸರಕಾರೀ ಉದ್ಯೋಗಿಗಳಿಗೆ ಯೋಗ್ಯ ಪುರಸ್ಕಾರ ಸಿಗಲಿದೆ. ಅಧಿಕಾರಿ ವರ್ಗಕ್ಕೆ ಮುಂಭಡ್ತಿ ಯೋಗವು ಕಂಡುಬರುವುದು.
ಮೀನ: ಶ್ರಮವು ಹೆಚ್ಚಿದ್ದರೂ ದುಡಿಮೆ ಲಾಭದಾಯಕವಾಗಲಿದೆ. ಎಲ್ಲಾ ವಿಚಾರದಲ್ಲಿ ಜಾಗ್ರತೆ ವಹಿಸಬೇಕಾಗುವುದು. ನೀಚ ಜನರಿಂದ ದೂರವಿರಿ. ಅವರಿಂದ ಕೆಟ್ಟ ಮಾತು ಕೇಳಬೇಕಾದೀತು. ದೂರ ಸಂಚಾರ ಆಯಾಸ ತರಲಿದೆ.
ಎನ್.ಎಸ್. ಭಟ್