Advertisement

ಈ ರಾಶಿಯವರಿಗಿಂದು ಅನಿರೀಕ್ಷಿತವಾಗಿ ಧನಲಾಭ ಕಂಡು ಬಂದೀತು

07:47 AM Dec 10, 2020 | keerthan |

10-12-2020

Advertisement

ಮೇಷ: ಆದ್ಯಾತ್ಮಿಕ ಚಿಂತನೆಯು ನಿಮ್ಮಲ್ಲಿದ್ದರೂ ಅದರ ಬಗ್ಗೆ ಅತೀ ಹೆಚ್ಚು ತಲೆಕೆಡಿಸಿಕೊಳ್ಳುವವರು ನೀವಲ್ಲ. ಸದಾ ಎಲ್ಲಾ ವಿಷಯದಲ್ಲೂ ನೇತೃತ್ವ ವಹಿಸುವಂತಹ ವ್ಯಕ್ತಿತ್ವ ನಿಮ್ಮದಾಗಿರುತ್ತದೆ. ದಿನಾಂತ್ಯ ಶುಭವಿದೆ.

ವೃಷಭ: ಅಲಂಕಾರ ಪ್ರಿಯ, ಶಿಸ್ತುಬದ್ಧತೆ ಹಾಗೂ ಕಲೆಗಳಲ್ಲಿ ಪಾಂಡಿತ್ಯವುಳ್ಳ ನೀವು ಅತೀ ಎತ್ತರಕ್ಕೆ ಏರಿದವರಲ್ಲ. ನಿಮ್ಮ ಮಾತುಕತೆ ನಡತೆಯು ಇತರರನ್ನು ಆಕರ್ಷಿಸುವುದು. ಆರೋಗ್ಯದಲ್ಲಿ ಏರುಪೇರು.

ಮಿಥುನ: ಬಹುಜನರ ಒಡನಾಟದಿಂದ ಪ್ರೀತಿ ವಿಶ್ವಾಸವನ್ನು ಪಡೆದಿರುತ್ತಾರೆ. ಬಂಧುಗಳೊಂದಿಗೆ ನಿಷ್ಠುರ ಮಾಡುವುದು ಉತ್ತಮವಲ್ಲ . ನಿಮ್ಮ ರಹಸ್ಯವನ್ನು ಕಾಪಾಡಿಕೊಂಡರೆ ಉತ್ತಮ. ಕಿರು ಸಂಚಾರವಿರುತ್ತದೆ.

ಕರ್ಕ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಕೂಡಿ ಬಂದೀತು. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಅದೃಷ್ಟದಿಂದ ನಾನಾ ರೀತಿಯಲ್ಲಿ ಸಂಪತ್ತು ಒಟ್ಟುಗೂಡಲಿದೆ. ಖರ್ಚುವೆಚ್ಚದಲ್ಲಿ ನಿಗಾ ವಹಿಸಿರಿ.

Advertisement

ಸಿಂಹ: ಅನಿರೀಕ್ಷಿತವಾಗಿ ಧನಲಾಭ ಕಂಡು ಬಂದೀತು. ನಿಮ್ಮ ಆತ್ಮಸ್ಥೆರ್ಯ ಹಾಗೂ ದೃಢ ನಿರ್ಧಾರಗಳಿಂದ ನೀವು ಮುನ್ನಡೆಯುವಿರಿ. ಅಧೈರ್ಯದ ಹೆಜ್ಜೆ ಹಾಕದಿರಿ. ನಿಮ್ಮ ಸಂಬಂಧಿಕರಿಂದ ಸಹಾಯ ಒದಗಿ ಬರಲಿದೆ.

ಕನ್ಯಾ: ದೈಹಿಕವಾಗಿ ಆರೋಗ್ಯದಲ್ಲಿ ಏರುಪೇರು ಕಂಡುಬರುವುದು. ಗೃಹದಲ್ಲಿ ಶುಭಮಂಗಲ ಕಾರ್ಯವು ನಡೆದು ಸಂತಸ ತಂದೀತು. ಉದ್ಯೋಗಿಗಳಿಗೆ ವರ್ಗಾವಣೆಯ ಭೀತಿ ತಂದೀತು. ನಿಶ್ಚಿಂತೆಯಾಗಿರುವುದು.

ತುಲಾ: ನಿರುದ್ಯೋಗಿಗಳಿಗೆ ಆಕಸ್ಮಿಕ ಉದ್ಯೋಗದ ಲಾಭವಿರುತ್ತದೆ. ವಿಚಾರಶೀಲರಿಗೆ ಉತ್ತಮ ಪ್ರಶಂಸೆಯ ಕಾಲವಿದು. ಉದರಸಂಬಂಧಿ, ವಾತ ಸಂಬಂಧಿ ಸಮಸ್ಯೆಗಳು ಕಾಡಲಿವೆ. ಆರ್ಥಿಕವಾಗಿ ಅಭಿವೃದ್ಧಿ ಇದೆ.

ವೃಶ್ಚಿಕ: ಹಿತಶತ್ರುಗಳು ನಿಮ್ಮ ಕೆಲಸ ಕಾರ್ಯಗಳಿಗೆ ತಡೆಯೊಡ್ಡಲಿದ್ದಾರೆ. ಉದರ ಸಂಬಂಧಿ ಹಾಗೂ ಮೂತ್ರಾಶಯದ ಬಗ್ಗೆ ಜಾಗ್ರತೆ ಮಾಡಿರಿ. ಹೆಚ್ಚಿನ ಶುಭಫ‌ಲಗಳೇ ಕಣ್ಣ ಮುಂದೆ ಬರಲಿದೆ. ಶುಭ ವಾರ್ತೆ ಇದೆ.

ಧನು: ಕೃಷಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಶ್ರಮಜೀವಿಗಳಿಗೆ ನಾನಾ ರೀತಿಯ ತೊಂದರೆಗಳು ಕಂಡುಬರಲಿದೆ. ವೈಯಕ್ತಿಕ ಆಗುಹೋಗುಗಳಲ್ಲಿ ಚಿಂತಿತರಾಗದೆ ಮುನ್ನಡೆಯಿರಿ. ಶ್ರೀದೇವರ ರಕ್ಷೆ ಇದೆ.

ಮಕರ: ಉದ್ಯೋಗಿಗಳಿಗೆ, ನಿರುದ್ಯೋಗಿಗಳಿಗೆ ತಾಳ್ಮೆ ಸಮಾಧಾನದಿಂದ ಮುನ್ನಡೆಯಬೇಕಾಗುತ್ತದೆ. ಮುಖ್ಯವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಪುಣ್ಯಸ್ಥಳಗಳ ಭೇಟಿಯ ಯೋಗವಿದೆ. ಶುಭವಾರ್ತೆ ಶ್ರವಣ.

ಕುಂಭ: ಆರ್ಥಿಕವಾಗಿ ಆದಾಯವು ನಿರಂತರ ಹರಿದು ಬರಲಿದೆ. ಬಂಧು ಹಾಗೂ ಮಿತ್ರರಿಂದ ಒತ್ತಡಗಳು ಕಂಡುಬರಲಿದೆ. ದುಡುಕು ನಿರ್ಧಾರದಿಂದ ನಗೆಪಾಟಲಿಗೆ ಈಡಾಗುವ ಸಾಧ್ಯತೆ ಕಂಡುಬರುವುದು.

ಮೀನ: ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಕೀರ್ತಿ, ಪ್ರತಿಷ್ಠೆ, ಸ್ಥಾನಮಾನಗಳು ನಿಮಗೆ ಸಂತಸ ತಂದಾವು. ದಾನ, ಧರ್ಮಾದಿಗಳಲ್ಲಿ ಧನವ್ಯಯವಾದರೂ ಸಂತೃಪ್ತಿ ದೊರಕಲಿದೆ. ಕಾರ್ಯಕ್ಷೇತ್ರದಲ್ಲಿ ಪ್ರಶಂಸೆ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next