Advertisement

Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ

07:30 AM Dec 17, 2024 | Team Udayavani |

ಮೇಷ: ಮೇಲಿನವರನ್ನು ಮೆಚ್ಚಿಸಲು ಮೇಲಾಟ. ವೃತ್ತಿಪರರಿಗೆ ಸಮಯದೊಂದಿಗೆ ಸೆಣಸಾಟ. ವಿದ್ಯುತ್‌, ರಸ್ತೆ ಮೊದಲಾದ ಗುತ್ತಿಗೆದಾರರಿಗೆ ಮುಗ್ಗಟ್ಟು ಕೆಲವರ ಆರೋಗ್ಯದಲ್ಲಿ ಕೊಂಚ ಏರುಪೇರು.

Advertisement

ವೃಷಭ: ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಸರಕಾರಿ ನೌಕರರಿಗೆ ಕೆಲಸದ ಒತ್ತಡ. ವಿದೇಶಗಳಲ್ಲಿ ನೌಕರಿಯಲ್ಲಿರುವ ಬಂಧುಗಳಿಂದ ಕರೆ.ಮಾಧ್ಯಮದವರಿಗೆ ಅಧಿಕಾರಸ್ಥರ ಆಮಿಷ. ಗೃಹಿಣಿಯರ ಸ್ವಾವಲಂಬನೆ ಉದ್ಯಮದಲ್ಲಿ ಪ್ರಗತಿ.

ಮಿಥುನ: ಕಠಿನ ಪರಿಶ್ರಮಿಗಳಿಗೆ ಹೆಚ್ಚು ಜವಾಬ್ದಾರಿಗಳು. ಅಧಿಕಾರಿಗಳಿಗೆ ರಾಜಕಾರಣಿಗಳ ಒತ್ತಡ. ವ್ಯಾಪಾರಿ ವರ್ಗಕ್ಕೆ ತೃಪ್ತಿಕರ ಲಾಭ. ಮನೆಯಲ್ಲಿ ದೇವತಾರ್ಚನೆ ಹಾಗೂ ಮಂಗಲ ಕಾರ್ಯದ ಸಿದ್ಧತೆ.

ಕರ್ಕಾಟಕ: ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ತಾಂತ್ರಿಕ ವಿಭಾಗಗಳಲ್ಲಿ ದುಡಿಯುವವರಿಗೆ ಕೆಲಸದ ಒತ್ತಡ. ಸ್ವಂತ ವ್ಯವಹಾರಸ್ಥರಿಗೆ ಸಮಯದೊಂದಿಗೆ ಸ್ಪರ್ಧೆ. ಮನೆಯಲ್ಲಿ ಅನುಕೂಲಕರ ಸ್ಪಂದನ‌.

ಸಿಂಹ: ಉದ್ಯಮಗಳಿಗೆ ಶುಕ್ರದೆಶೆ ಆರಂಭ. ಉದ್ಯೋಗ ಕ್ಷೇತ್ರದಲ್ಲಿ ಶ್ಲಾಘನಾರ್ಹ ಸಾಧನೆ. ಸಮಾಜದಲ್ಲಿ ಸ್ಥಾನಮಾನ ವೃದ್ಧಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ಸಂಸಾರ ಸುಖ ಉತ್ತಮ. ಪ್ರಾಪ್ತವಯಸ್ಕರಿಗೆ ಕಂಕಣಬಲ.

Advertisement

ಕನ್ಯಾ: ದೇಹಾಲಸ್ಯದಿಂದ ಕಾರ್ಯ ವಿಳಂಬ. ಸಹೋದ್ಯೋಗಿಯ ಸಹಾಯದಿಂದ ಕೆಲಸ ಪರಿಪೂರ್ಣ. ಅಪರೂಪದ ಗೆಳೆಯರ ಆಗಮನ. ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳು ಗೋಚರ. ಮನೆಯಲ್ಲಿ ಉಲ್ಲಾಸದ ವಾತಾವರಣ.

ತುಲಾ: ಖಾಸಗಿ ರಂಗದ ನೌಕರರಿಗೆ ಹೊಸ ಅವಕಾಶಗಳು. ಸ್ವಂತ ವ್ಯವಹಾರಸ್ಥರಿಗೆ ಅನಿರೀಕ್ಷಿತ ಯಶಸ್ಸು. ಮಹಾಪುರುಷರ ದರ್ಶನ ಯೋಗ. ಮಕ್ಕಳ ಭವಿಷ್ಯದ ಚಿಂತನೆ. ಪಂಚಮ ಶನಿಯ ಮಹಿಮೆಯಿಂದ ಸ್ವಲ್ಪ ಕಿರಿಕಿರಿ.

ವೃಶ್ಚಿಕ: ಮನೆಯಲ್ಲಿ ಹಿತಕರ ವಾತಾವರಣ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಅನುಕೂಲ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಮರದ ಸಾಮಗ್ರಿಗಳ ನಿರ್ಮಾಪಕರಿಗೆ ಉತ್ತಮ ಬೇಡಿಕೆ.

ಧನು: ಅನಿರೀಕ್ಷಿತ ಧನಪ್ರಾಪ್ತಿ. ವ್ಯಾಪಾರ ವಿಸ್ತರಣೆಗೆ ಚಿಂತನೆ. ವಸ್ತ್ರ, ಆಭರಣ, ನಿರ್ಮಾಣ ಸಾಮಗ್ರಿಗಳ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಕೈ ಕಸಬುದಾರರಿಗೆ ಕೈತುಂಬಾ ಕೆಲಸ.ಬೌದ್ಧಿಕ ಕಾರ್ಯಕರ್ತರಿಗೆ ಬಹುವಿಧ ಒತ್ತಡ.

ಮಕರ: ಸಹೋದ್ಯೋಗಿಗಳಿಂದ ಹಿತಕರ ವರ್ತನೆ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ರೂಪದರ್ಶಿಗಳ ವ್ಯವಹಾರದಲ್ಲಿ ಹಿನ್ನಡೆ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ಫ್ಯಾಶನ್‌ ಡಿಸೈನಿಂಗ್‌ ಪರಿಣತರಿಗೆ ಉದ್ಯೋಗಾವಕಾಶ.

ಕುಂಭ: ಹೊಸ ಕಾರ್ಯಕ್ಷೇತ್ರಕ್ಕಾಗಿ ಅನ್ವೇಷಣೆ. ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿಗಳು. ಸರಕಾರಿ ನೌಕರರಿಗೆ ಶುಭ ಸಮಾಚಾರ. ಹಿರಿಯ ಅಧಿಕಾರಿಗಳಿಗೆ ರಾಜಕಾರಣಿಗಳ ಕಾಟ. ಮುದ್ರಣ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ ಮಧ್ಯಮ.

ಮೀನ: ಉದ್ಯೋಗಸ್ಥರಿಗೆ ನಿರಾತಂಕವಾದ ವಾತಾವರಣ. ಸರಕಾರಿ ಇಲಾಖೆಗಳಿಂದ ಉತ್ತಮ ಸ್ಪಂದನ. ಕೆಲವು ಬಗೆಯ ವ್ಯವಹಾರಸ್ಥರಿಗೆ ಅನಿರೀಕ್ಷಿತ ಪ್ರಗತಿ. ವ್ಯವಹಾರ ನಿರ್ವಹಣೆಗೆ ಎಲ್ಲರ ಸಹಕಾರ. ಮಕ್ಕಳಿಗೆ ಪಾಠೇತರ ಚಟುವಟಿಕೆಗಳ ಆಕರ್ಷಣೆ.

Advertisement

Udayavani is now on Telegram. Click here to join our channel and stay updated with the latest news.

Next