Advertisement
ವೃಷಭ: ಜವಾಬ್ದಾರಿಯುತ ಕಾರ್ಯವೈಖರಿ ಯಿಂದ ಸ್ಥಾನ ಗೌರವಾದಿ ಸುಖ ಪ್ರಶಂಸೆ. ಆರೋಗ್ಯ ವೃದ್ಧಿ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ ತೃಪ್ತಿ. ಸಾಂಸಾರಿಕ ಸುಖದಲ್ಲಿ ವೃದ್ಧಿ. ಪಾಲುದಾರಿಕಾ ವ್ಯವಹಾರದಲ್ಲಿ ಪ್ರಗತಿ.ಮಿಥುನ: ಆರೋಗ್ಯ ಬಗ್ಗೆ ಗಮನವಿರಲಿ. ಅತಿಯಾದ ಕಾರ್ಯ ಒತ್ತಡ ಎದುರಾದೀತು. ಮಾನಸಿಕವಾಗಿ ಸುದೃಢರಾಗಿದ್ದರೂ ದೈಹಿಕ ಶ್ರಮ ಅಧಿಕವೆನಿಸೀತು. ಮಾತಿನಲ್ಲಿ ಸಹನೆ ಹಾಗೂ ಎಚ್ಚರವಿರಲಿ. ಸಾಂಸಾರಿಕ ಸುಖ ತೃಪ್ತಿದಾಯಕ.
ಕರ್ಕ: ದೀರ್ಘ ಪ್ರಯಾಣಕ್ಕೆ ಅವಕಾಶ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಆಸ್ತಿ ವಿಚಾರದಲ್ಲಿ ಹೆಚ್ಚಿದ ಶ್ರಮ ಜವಾಬ್ದಾರಿ. ವಿದ್ಯಾರ್ಥಿಗಳಿಗೆ ಅಧ್ಯಯನಶೀಲರಿಗೆ ಹೆಚ್ಚಿನ ಅವಕಾಶ ತೋರೀತು. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ.
ಸಿಂಹ: ದೇಹಾರೋಗ್ಯ ವಿಚಾರ ದಲ್ಲಿ ನಿರೀಕ್ಷೆ ಮಾಡದಿರಿ. ಉದ್ಯೋಗ ವ್ಯವಹಾರಗಳಲ್ಲಿ ಯೋಜಿತ ಗುರಿ ಸಾಧಿಸಿದ ತೃಪ್ತಿ. ಪತ್ರ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿದರಿಂದಲೂ ದೃಢ ನಿರ್ಧಾರದಿಂದ ಕಾರ್ಯ ಸಫಲತೆ. ಅನ್ಯರಿಗೆ ಸಹಾಯ ಮಾಡುವಾಗ ಸ್ಪಷ್ಟತೆ ಇರಲಿ.
ಕನ್ಯಾ: ಆರೋಗ್ಯ ವೃದ್ಧಿ. ಆಸ್ತಿ ವ್ಯವಹಾರ ವಿಚಾರಗಳಲ್ಲಿ ಧನವ್ಯಯ. ಬೇರೆಯವರ ವಿಚಾರದಲ್ಲಿ ಜವಾಬ್ದಾರಿ ವಹಿಸುವಾಗ ಎಚ್ಚರಿಕೆ ನಡೆ ಅಗತ್ಯ. ಗುರುಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಸ್ಥಾನ ಪ್ರಾಪ್ತಿ.
ಧನು: ಪರಿಶ್ರಮ ಜವಾಬ್ದಾರಿಯಿಂದ ಕೂಡಿದ ಕಾರ್ಯ ವೈಖರಿ. ನಿರೀಕ್ಷಿತ ಗೌರವ ಆದಾರ ಪ್ರಾಪ್ತಿ. ನೂತನ ಮಿತ್ರರ ಸಮಾಗಮ. ದಾಂಪತ್ಯ ಸುಖ ವೃದ್ಧಿ. ಅಧ್ಯಯನ ಪ್ರವೃತ್ತರಿಗೆ ಸರ್ವವಿಧದ ಸೌಲಭ್ಯ ಲಭ್ಯ. ಆರೋಗ್ಯ ಉತ್ತಮ.
ಮಕರ: ಆಸ್ತಿ ವಿಚಾರದಲ್ಲಿ ಬದಲಾವಣೆಗಳು ತೋರಿ ಬಂದಾವು. ಉದ್ಯೋಗ ವ್ಯವಹಾರ ಗಳಲ್ಲಿ ಗಣ್ಯರ ಮೇಲಧಿಕಾರಿಗಳ ಸಹಾಯ ಸಹಕಾರದಿಂದ ಪ್ರಗತಿ. ದೀರ್ಘ ಹಾಗೂ ಸಣ್ಣ ಪ್ರಯಾಣ ಸಂಭವ. ಆರ್ಥಿಕ ಸ್ಥಿತಿ ವೃದ್ಧಿದಾಯಕ. ಹಿರಿಯರ ಸೂಕ್ತ ಪ್ರೋತ್ಸಾಹ.
ಕುಂಭ: ಆರೋಗ್ಯ ಉತ್ತಮ. ದೇವತಾನುಗ್ರಹದಿಂದ ಕೂಡಿದ ದಿನ. ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಫಲತೆ ಶ್ರೇಯಸ್ಸು ತೋರಿಬರುವುವು. ದೂರದ ವ್ಯವಹಾರಗಳಲ್ಲಿ ಧನವೃದ್ಧಿ. ಸ್ಥಾನ ಲಾಭ. ಗೃಹದಲ್ಲಿ ಸಂತಸದ ವಾತಾವರಣ.
ಮೀನ: ಹೆಚ್ಚಿದ ಜವಾಬ್ದಾರಿ. ದೇಹಕ್ಕೆ ಆಯಾಸ ಆಗದಂತೆ ಕರ್ತವ್ಯ ನಿರ್ವಹಿಸಿ. ಆರೋಗ್ಯ ಗಮನಿಸಿಕೊಳ್ಳಿ. ಮಾತಿನಲ್ಲಿ ತಾಳ್ಮೆ ಸಹನೆ ಅಗತ್ಯ. ಆಸ್ತಿ ವಿಚಾರದಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ. ದಂಪತಿಗಳಲ್ಲಿ ಅನ್ಯೋನ್ಯತೆ, ಸುಖ ಸಂತೋಷ.