Advertisement

Daily Horoscope;ಮನಸ್ಸಿನಲ್ಲಿ ಗೊಂದಲಕ್ಕೆ ಅವಕಾಶ ನೀಡದಿರಿ. ಧೈರ್ಯದಿಂದ ಕಾರ್ಯ ನಿರ್ವಹಿಸಿ

07:23 AM Jul 08, 2023 | Team Udayavani |

ಮೇಷ: ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಧನಾರ್ಜನೆ. ವಿದ್ಯಾರ್ಥಿಗಳು ಪರರನ್ನು ಅವಲಂಬಿಸದೇ ಸ್ವಂತ ಪರಿಶ್ರಮದಲ್ಲಿ ಕಾರ್ಯ ಸಾಧಿಸಿಕೊಳ್ಳಿ. ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಿರಿ. ಧನಾತ್ಮಕವಾಗಿ ಆಲೋಚಿಸಿ ಮುಂದುವರಿಯಿರಿ.

Advertisement

ವೃಷಭ: ಮನಸ್ಸಿನಲ್ಲಿ ಗೊಂದಲಕ್ಕೆ ಅವಕಾಶ ನೀಡದಿರಿ. ಧೈರ್ಯದಿಂದ ಕಾರ್ಯ ನಿರ್ವಹಿಸಿ. ಅತಿಯಾದ ಆಸೆ ಸಲ್ಲದು. ಉದ್ಯೋಗ, ವ್ಯವಹಾರಗಳಲ್ಲಿ ಉತ್ತಮ ಲಾಭ. ವಿದ್ಯಾರ್ಥಿಗಳು ಹೆಚ್ಚಿನ ಅಭ್ಯಾಸ ನಡೆಸುವುದು ಉತ್ತಮ.

ಮಿಥುನ: ಉತ್ತಮ ಜನಮನ್ನಣೆ. ವಿಶ್ವಾಸ ಪಾತ್ರರಾಗಿರಿ. ಉದ್ಯೋಗ, ವ್ಯವಹಾರಗಳಲ್ಲಿ ಘರ್ಷಣೆಗೆ ಅವಕಾಶ ನೀಡದಿರಿ. ಕಾರ್ಯ ಸಫ‌ಲತೆ ಆಗುವುದು. ಉತ್ತಮ ಧನಾರ್ಜನೆ. ದೇವತಾ ದರ್ಶನದಿಂದ ಮನಃತೃಪ್ತಿ.

ಕರ್ಕ: ಹೆಚ್ಚಿನ ಸ್ಥಾನ ಗೌರವಕ್ಕಾಗಿ ಪರಿಶ್ರಮ. ಅಗತ್ಯಕ್ಕೂ ಮೀರಿದ ಜವಾಬ್ದಾರಿಯಿಂದ ದೈಹಿಕ ಮಾನಸಿಕ ಒತ್ತಡ
ಎದುರಾದೀತು. ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿ. ಅನಿರೀಕ್ಷಿತ ಧನಲಾಭ. ದೇವತಾ ಕಾರ್ಯದಿಂದ ಇಷ್ಟಾರ್ಥ ಸಿದ್ಧಿ.

ಸಿಂಹ: ಪೂಜಾ ಕಾರ್ಯದಲ್ಲಿ ಭಾಗಿಯಾಗುವುದರಿಂದ ಮನಸ್ಸಿಗೆ ಸಂತೃಪ್ತಿ. ಕೆಲಸದ ಒತ್ತಡದಿಂದ ದೇಹಾಯಾಸ ತೋರೀತು. ನಿರ್ಲಕ್ಷ್ಯ ಸಲ್ಲದು. ದೀರ್ಘ‌ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷಿತ ಧನಾರ್ಜನೆ.

Advertisement

ಕನ್ಯಾ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾದ ಸಂತೋಷ. ದೇವತಾ ಸ್ಥಳ ಸಂದರ್ಶನ. ಗುರುಹಿರಿಯರ ಅವಲಂಬನೆ. ಮಾರ್ಗದರ್ಶನದ ಲಾಭ. ವಿವಿಧ ಕಾರ್ಯಗಳಿಗೆ ಧನ ವಿನಿಯೋಗ. ಬಂಧು ಮಿತ್ರರ ಭೇಟಿಯಿಂದ ನೆಮ್ಮದಿ.

ತುಲಾ: ನೂತನ ಉದ್ಯೋಗ, ವ್ಯವಹಾರ ಲಭ್ಯ. ಪರರ ಧನಸಂಪತ್ತಿನ ವಿಚಾರದಲ್ಲಿ ಹೆಚ್ಚಿದ ಜವಾಬ್ದಾರಿ. ನಿರೀಕ್ಷಿತ ಸ್ಥಾನ ಪ್ರಾಪ್ತಿ. ದೂರದ ಊರುಗಳಿಗೆ ಪ್ರಯಾಣ ಸಾಧ್ಯತೆ. ಆರೋಗ್ಯದ ಕುರಿತು ಗಮನ ಇರಲಿ.

ವೃಶ್ಚಿಕ: ಗೃಹ ವಾಹನಾದಿ ವಿಚಾರಗಳಲ್ಲಿ ಅತೀ ಖರ್ಚು ವೆಚ್ಚ ಸಂಭವ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಜ್ಞಾನ ಸಂಪಾದನೆಯಲ್ಲಿ ತಲ್ಲೀನತೆ. ಗುರು ಹಿರಿಯರ ಸಂದರ್ಶನದಿಂದ ಮನೆಯಲ್ಲಿ ನೆಮ್ಮದಿ.

ಧನು: ಗೃಹ, ವಾಹನ, ಆಸ್ತಿ ವಿಚಾರದಲ್ಲಿ ಅಭಿವೃದ್ಧಿ. ಗೃಹೋಪಕರಣ ವಸ್ತು ಸಂಗ್ರಹ. ಸ್ಥಾನಮಾನ ವಿಚಾರದಲ್ಲಿ ತಾಳ್ಮೆ ಸಹನೆಯಿಂದ ವರ್ತಿಸಿ. ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ಪೂರಕ ವಾತಾವರಣ.

ಮಕರ: ಆರೋಗ್ಯ ವೃದ್ಧಿ. ಸಮಾಜದಲ್ಲಿ ಗೌರವ ವೃದ್ಧಿ. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾದ ಸಂತೋಷ. ಜವಾಬ್ದಾರಿಯಿಂದ ಧನ ವಿನಿಯೋಗಿಸಿ. ಗೃಹ ಬಳಕೆಯ ವಸ್ತುಗಳ ಖರೀದಿ. ಸಂಸಾರದಲ್ಲಿ ಸುಖ ವೃದ್ಧಿ.

ಕುಂಭ: ಮಕ್ಕಳೊಂದಿಗೆ ಚರ್ಚೆ, ಗುರುಹಿರಿಯರ ಆರೋಗ್ಯ ಗಮನಿಸಿ. ವಿವಿಧ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಮನಃತೃಪ್ತಿ. ಉದ್ಯೋಗ, ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. .

ಮೀನ: ಮಕ್ಕಳ ವಿಚಾರದಲ್ಲಿ ಹೆಚ್ಚಿದ ಶ್ರಮ. ಅನಿರೀಕ್ಷಿತ ಧನಲಾಭ. ಮನೆಯಲ್ಲಿ ಚರ್ಚೆಗೆ ಅವಕಾಶ ನೀಡದಿರಿ. ಮಕ್ಕಳಿಂದ ಸಂತೋಷ. ವಿದ್ಯಾರ್ಥಿಗಳಿಗೆ ವಿದ್ಯೆ ಜ್ಞಾನ ವಿಚಾರದಲ್ಲಿ ಯಶಸ್ಸು ಲಭಿಸಲಿದೆ. ಆದಾಯಕ್ಕೆ ಸರಿಯಾದ ಖರ್ಚು ತೋರಿಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next