Advertisement

ಇಂದು ನಿಮ್ಮ ಗ್ರಹಬಲ: ಈ ರಾಶಿಯವರಿಂದು ಮನೆಯಲ್ಲಿ ಪತ್ನಿಯ ಹಠಕ್ಕೆ ಬಗ್ಗಬೇಕಾದೀತು!

08:13 AM Jan 17, 2021 | Team Udayavani |

17-01-2021

Advertisement

ಮೇಷ: ಕ್ಲಿಷ್ಟಕರ ದಿನವು ನಿಮ್ಮ ಮುಂದಿದೆ. ಯಾವುದಕ್ಕೂ ಸಹನೆ ಕಳೆದುಕೊಳ್ಳದಿರಿ. ಇತರರಿಗೆ ಬುದ್ಧಿವಾದ ಹೇಳಲು ಹೋಗುವುದು ಸರಿಯಲ್ಲ. ಅನಾವಶ್ಯಕವಾಗಿ ನಿರಾಸೆಗೊಳ್ಳುವ ಪ್ರಸಂಗ ನಿಮಗೆದುರಾಗಲಿದೆ.

ವೃಷಭ: ಗೆಳಯರಿಂದ ಉತ್ತಮ ಸಲಹೆಗಳು ಕಂಡುಬಂದಾವು. ಅವನ್ನು ಕಡೆಗಣಿಸದಿರಿ. ಸ್ವೀಕರಿಸುವುದು ಬಿಡುವುದು ನಿಮ್ಮಿಚ್ಛೆ. ವೃತ್ತಿಯಲ್ಲಿ ಯಶಸ್ಸು ಅಭಿವೃದ್ಧಿ ಕಂಡು ಬರುವುದು ಯಶಸ್ಸಿದೆ.

ಮಿಥುನ: ಕೌಟುಂಬಿಕವಾಗಿ ಅಸಹನೆ ತೋರಿಬಂದೀತು. ಗೊಂದಲದ ಪರಿಸ್ಥಿತಿ ಮುಂದುವರಿಯಲು ಅವಕಾಶ ಕೊಡದಿರಿ. ಆರ್ಥಿಕವಾಗಿ ಸಂಕಷ್ಟಗಳು ಎದುರಾದರೂ ಅದನ್ನು ಚೆನ್ನಾಗಿ ನಿಭಾಯಿಸುವ ಶಕ್ತಿಯು ನಿಮ್ಮಲ್ಲಿದೆ.

ಕರ್ಕ: ಆಪ್ತೇಷ್ಟರೊಂದಿಗೆ ಆತ್ಮೀಯ ಸಮಯವನ್ನು ಕಳೆಯುವಿರಿ. ಸಂಬಂಧಗಳಲ್ಲಿ ಸುಧಾರಣೆಯು ತೋರಿ ಬರುವುದು. ಪರಸ್ಪರರಲ್ಲಿ ಸೌಹಾರ್ದ, ಪ್ರೀತಿ ವಿಶ್ವಾಸ ತಲೆದೋರಬಹುದು. ಆತ್ಮೀಯರೊಂದಿಗೆ ಭೇಟಿಯಿದೆ.

Advertisement

ಸಿಂಹ: ಬದಲಾವಣೆಗೆ ಹೊಂದಿಕೊಂಡು ಹೋಗಲು ಕಲಿಯಿರಿ. ಗೆಳೆಯನೊಬ್ಬನಿಂದ ಉಪಯುಕ್ತ ಸಲಹೆಗಳು ದೊರಕಬಹುದು. ಖರ್ಚುವೆಚ್ಚಗಳನ್ನು ನಿಯಂತ್ರಿಸುವುದು ಅತೀ ಮುಖ್ಯವಾಗಿದೆ. ದುರ್ಜನರಿಂದ ದೂರವಿರಿ.

ಕನ್ಯಾ: ನೀವು ನಂಬಿದ ವ್ಯಕ್ತಿಯೊಬ್ಬರ ನಿಜಬಣ್ಣ ತೋರುವುದು. ಅವರ ಕುಟಿಲತೆಯ ಅರಿವು ನಿಮಗಾಗಲಿದೆ. ಅವರೊಂದಿಗೆ ಸಂಘರ್ಷಕ್ಕೆ ಇಳಿಯದಿರಿ. ನಿಮ್ಮ ಮರ್ಯಾದೆಗೆ ಮೂರುಕಾಸು ಆದೀತು. ಜಾಗ್ರತೆ ಇರಲಿ.

ತುಲಾ: ಗೊಂದಲದ ಪರಿಸ್ಥಿತಿಯು ಏರ್ಪಟ್ಟಿತು. ಮಾನಸಿಕ ಸ್ಥಿರತೆಯನ್ನು ಕಾಯ್ದುಕೊಂಡರೆ ಉತ್ತಮ. ಕಠಿಣ ನಿರ್ಧಾರ ಮಾಡಬೇಕಾದೀತು. ಆತುರತೆ ಬೇಡ. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಂಡುಬಂದರೂ ಕಾಳಜಿ ಇರಲಿ.

ವೃಶ್ಚಿಕ: ಮಾನಸಿಕವಾಗಿ ಅಸ್ಥಿರತೆಯು ಕಾಡಲಿದೆ. ಪ್ರಮುಖ ನಿರ್ಧಾರವನ್ನು ದೃಢತೆಯಿಂದ ತೆಗೆದುಕೊಳ್ಳಿರಿ. ಮನೆಯಲ್ಲಿ ಪತ್ನಿಯ ಹಠಕ್ಕೆ ಬಗ್ಗಬೇಕಾದೀತು. ಕಾರ್ಯಾರ್ಥ ಪ್ರಯಾಣವು ಕೂಡಿಬರಲಿದೆ. ದೇಹಾಯಾಸವು ತೋರಿಬರುವುದು.

ಧನು: ಆರೋಗ್ಯದಲ್ಲಿ ಏರುಪೇರು ಹೇಗೋ ಹಾಗೇ ಆರ್ಥಿಕ ಏಳುಬೀಳುಗಳು ಕಂಡುಬರಬಹುದು. ಹಾಗೆಂದು ಚಿಂತೆ ಅನಾವಶ್ಯಕ. ಪತ್ನಿಗೆ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ತೋರಿಬಂದು ಸಮಾಧಾನವಾದೀತು. ಶುಭವಿದೆ.

ಮಕರ: ಅವಿಶ್ರಾಂತ ದುಡಿತದಿಂದ ದೇಹಾಯಾಸ ತೋರಿಬಂದರೂ ಸೂಕ್ತ ಪ್ರತಿಫ‌ಲ ದೊರಕಿದುದರಿಂದ ತುಂಬಾ ಸಮಾಧಾನವಾಗಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಸುಧಾರಣೆ ತೋರಿಬರುವುದು. ಮಾರ್ಗದರ್ಶನ ಪಾಲಿಸಿರಿ.

ಕುಂಭ: ನಿಮ್ಮ ಮನೆಯ ವಿಷಯದಿಂದ ನೊಂದು ಬೇಸರವಾದೀತು. ಆದರೆ ಅದನ್ನು ದೃಢತೆ ಹಾಗೂ ವಿಶ್ವಾಸದಿಂದ ಎದುರಿಸುವ ಛಾತಿ ನಿಮ್ಮಲ್ಲಿದೆ. ಮನೆಯಲ್ಲಿ ನೆಂಟರಿಷ್ಠರ ಆಗಮನವು ಸಂತೋಷ ನೀಡಲಿದೆ.

ಮೀನ: ಭಾವುಕ ಸನ್ನಿವೇಶವು ಎದುರಾಗಲಿದೆ. ದೂರದರ್ಶಿತ್ವ ಕಳಕೊಳ್ಳದಿರಿ. ಸಹನೆಯ ಅಗತ್ಯವಿದೆ. ಮಾತುಮಾತಿಗೆ ಸಿಡುಕಿ ಭಾವೋದ್ವೇಗಕ್ಕೆ ಒಳಗಾಗದಂತೆ ಸಹನೆ ಕಾಯ್ದುಕೊಳ್ಳುವದು. ಆತ್ಮವಿಶ್ವಾಸ ಅಗತ್ಯವಿದೆ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next