Advertisement

Daily Horoscope; ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿದಾಯಕ ಬದಲಾವಣೆ

07:17 AM Apr 30, 2023 | Shreeram Nayak |

ಮೇಷ: ಉದ್ಯೋಗದಲ್ಲಿ ಶ್ರಮ ಅಧಿಕ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು ಕಾರ್ಯ ನಿರ್ವಹಿಸಿದರೆ ಯಶಸ್ಸು. ಉತ್ತಮ ಧನಾರ್ಜನೆ. ಗೃಹೋಪಕರಣ ವಸ್ತುಗಳ ಸಂಗ್ರಹ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.

Advertisement

ವೃಷಭ: ಉನ್ನತ ಅಧಿಕಾರಕ್ಕಾಗಿ ಶ್ರಮ. ಸಾಂಸಾರಿಕವಾಗಿ ನೆಮ್ಮದಿಯ ದಿನ. ಮಿತ್ರರ ಭೇಟಿ. ದೂರ ಪ್ರದೇಶದ ಭೂ, ಕಟ್ಟಡ, ವಾಹನಾದಿ ವಿಚಾರದಲ್ಲಿ ಬದಲಾವಣೆ. ಬರಹಗಾರರಿಗೆ, ಪಾಲುದಾರಿಕಾ ವ್ಯವಹಾರಸ್ಥರಿಗೆ ಅನುಕೂಲಕರ ಸಮಯ.

ಮಿಥುನ: ಸಂಶಯಕ್ಕೆ ಅವಕಾಶ ಮಾಡದೇ ಕಾರ್ಯ ಕ್ಷೇತ್ರದಲ್ಲಿ ಯಶಸ್ಸಿಗೆ ಪ್ರಯತ್ನಿಸಿ. ಸ್ಥಿರ ವಾದ ಧನ ಸಂಪತ್ತು. ಆರೋಗ್ಯದ ಬಗ್ಗೆ ಗಮನಹರಿಸಿ. ಸಾಂಸಾರಿಕ ವಿಚಾರದಲ್ಲಿ ಸಮಾಧಾನದಿಂದ ಕಾರ್ಯ ನಿರ್ವಹಿಸಿ. ಪ್ರಯಾಣ ಲಾಭಕರ.

ಕರ್ಕ: ಅಧಿಕ ದೈಹಿಕ ಶ್ರಮ. ಮಿತ್ರರ ವಿಚಾರ, ಅಧ್ಯಯನ ವಿಚಾರ, ಉದ್ಯೋಗ, ಸ್ಥಾನ ಗೌರವ ವಿಚಾರದಲ್ಲಿ ಮಾತನಾಡುವಾಗ ಚರ್ಚೆಗೆ ಅವಕಾಶ ನೀಡದಿರಿ. ಗುರುಹಿರಿಯರೊಂದಿಗೆ ಸಮಾಧಾನದಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ.

ಸಿಂಹ: ದೈಹಿಕ, ಮಾನಸಿಕ ಒತ್ತಡವಿದ್ದರೂ ಸಹೋದರಾದಿಗಳಿಂದಲೂ, ಕಾರ್ಮಿಕ ವರ್ಗದವರಿಂದಲೂ ಸಹಾಯ ಲಭಿಸಿ ನಿರೀಕ್ಷಿತ ಕೆಲಸ ಕಾರ್ಯದಲ್ಲಿ ಮುನ್ನಡೆ ಒದಗುವುದು. ಧನಾರ್ಜನೆಗೆ ಕೊರತೆ ಆಗದು.

Advertisement

ಕನ್ಯಾ: ದಾಕ್ಷಿಣ್ಯ ಪ್ರವೃತ್ತಿ ಸಲ್ಲದು. ಉತ್ತಮ ಧನಾರ್ಜನೆ ಇದ್ದರೂ ವಿಚಾರಿಸಿ ಕಾರ್ಯ ನಿರ್ವಹಿಸಿ. ಪಾಲುದಾರಿಕಾ ಕ್ಷೇತ್ರದಲ್ಲಿ ಬದಲಾವಣೆ. ವಿದ್ಯಾರ್ಥಿಗಳು ಶ್ರಮ ವಹಿಸಿದರೆ ಉತ್ತಮ ಫ‌ಲ. ಪರಸ್ಪರ ಸಹಕಾರ ಪ್ರೋತ್ಸಾಹ ಅಗತ್ಯ.

ತುಲಾ: ಧಾರ್ಮಿಕ ಕೆಲಸ ಕಾರ್ಯಗಳಿಗೆ ಪ್ರಯಾಣ. ಆರೋಗ್ಯ ವೃದ್ಧಿ. ಗೌರವದ ಧನ ಸಂಪಾದನೆ. ಉದ್ಯೋಗ, ವ್ಯವಹಾರದಲ್ಲಿ ಹೆಚ್ಚಿದ ಜವಾಬ್ದಾರಿ. ಆಸ್ತಿ ವಿಚಾರದಲ್ಲಿ ಪ್ರಗತಿ. ಸಾಂಸಾರಿಕ ಸುಖ ತೃಪ್ತಿಕರ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ.

ವೃಶ್ಚಿಕ: ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಉದ್ಯೋಗ ವ್ಯವಹಾರದಲ್ಲಿ ಅಭಿವೃದ್ಧಿದಾಯಕ ಬದಲಾವಣೆ. ಅಧಿಕ ಧನಾರ್ಜನೆ. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ಗಣ್ಯರ ಭೇಟಿ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ.

ಧನು: ಚಿಕ್ಕ ಪ್ರಯಾಣ ಸಂಭವ. ಮಾನಸಿಕವಾಗಿ ಸಂಭ್ರಮದ ಕಾಲ. ವಿದ್ಯಾರ್ಥಿಗಳಿಗೆ ಉತ್ತಮ ಸ್ಥಾನ ಸುಖ. ಉದ್ಯೋಗ ವ್ಯವಹಾರಸ್ಥರಿಗೆ ಅಧಿಕ ಜವಾಬ್ದಾರಿ ಹಾಗೂ ಉತ್ತಮ ಬದಲಾವಣೆಯ ಅವಕಾಶ. ಗುರುಹಿರಿಯರ ಆರೋಗ್ಯ ಗಮನಿಸಿ.

ಮಕರ: ಪರಊರ ಮಿತ್ರರ ಭೇಟಿ. ದೂರದ ಆಸ್ತಿ ವಿಚಾರದಲ್ಲಿ ಅಭಿವೃದ್ಧಿಯ ನಡೆ. ಪಾಲುದಾರಿಕಾ ಕ್ಷೇತ್ರದವರಿಗೆ ಪರಸ್ಪರ ಸಹಕಾರದಿಂದ ಉನ್ನತಿ. ಮೇಲಧಿಕಾರಿಗಳ ಗಣ್ಯರ ಮಾರ್ಗದರ್ಶನ ಸಹಾಯ ಅನುಭವವಾದೀತು.

ಕುಂಭ: ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಸ್ಥಾನ ಗೌರವಾದಿ ಸುಖ. ಉತ್ತಮ ವಾಕ್‌ಚತುರತೆ, ಮನೋರಂಜನೆಯಿಂದ ಕೂಡಿದ ಸಮಯ. ಮನೆಯಲ್ಲಿ ಸಂಭ್ರಮದ ವಾತಾವರಣ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ.

ಮೀನ: ಧಾರ್ಮಿಕ ಕಾರ್ಯಗಳ ನೇತೃತ್ವ. ದಾನ ಧರ್ಮಾದಿಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಮನಃ ಸಂತೋಷ. ಜನಮನ್ನಣೆ, ಧೈರ್ಯ ಉತ್ಸಾಹದಿಂದ ಕೂಡಿದ ಕಾರ್ಯ ವೈಖರಿ. ಆರೋಗ್ಯದ ಬಗ್ಗೆ ಉದಾಸೀನ ಬೇಡ. ಗುರುಹಿರಿಯರ ಆರೋಗ್ಯ ಸುದೃಢ. ಸಾಂಸಾರಿಕ ಸುಖ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫ‌ಲ.

Advertisement

Udayavani is now on Telegram. Click here to join our channel and stay updated with the latest news.

Next