Advertisement

ತಂದೆ ಹೆಸರಿಲ್ಲದ ಪ್ರಮಾಣ ಪತ್ರ

09:29 AM May 21, 2018 | Harsha Rao |

ಚೆನ್ನೈ: ತಮಿಳುನಾಡಿನ ತಿರುಚ್ಚಿಯ ಈ ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರನ್ನೇ ನಮೂದಿಸಲಾಗಿಲ್ಲ. ಈ ಮೂಲಕ ದೇಶದಲ್ಲಿಯೇ ಜನನ ಪ್ರಮಾಣದಲ್ಲಿ ತಂದೆಯ ಹೆಸರಿಲ್ಲದ ಮೊದಲ ಮಗು ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಅದಕ್ಕೆ ಮದ್ರಾಸ್‌ ಹೈಕೋರ್ಟ್‌ ಕೂಡ ಒಪ್ಪಿದೆ. 

Advertisement

ತವಿಶಿ ಪೆರಾರಾ ಎಂಬ ಈ ಮಗುವಿನ ತಾಯಿ ಮಧುಮಿತಾ ರಮೇಶ್‌,  2017ರ ಎಪ್ರಿಲ್‌ನಲ್ಲಿ ಪತಿ ಚರಣ್‌ ರಾಜ್‌ರಿಂದ ವಿಚ್ಛೇ ದನ ಪಡೆದ ಅನಂತರ ಐವಿಎಫ್ ಚಿಕಿತ್ಸೆ ಮೂಲಕ ತವಿಶಿಗೆ ಜನ್ಮ ನೀಡಿದ್ದರು. ಹಾಗಾಗಿ, ಜನನ ಪ್ರಮಾಣ ಪತ್ರದಲ್ಲಿ ತಂದೆ ಹೆಸರು ನಮೂದಿಸಕೂಡದೆಂದು ಅವರು ಮನವಿ ಮಾಡಿದ್ದರು. ಇದಕ್ಕೆ ತಿರುಚ್ಚಿ ನಗರಸಭೆ ಒಪ್ಪಿರಲಿಲ್ಲ. ಮದ್ರಾಸ್‌ ಹೈಕೋರ್ಟ್‌ ಮೊರೆ ಹೋಗಿದ್ದ ಮಧುಮಿತಾ ಬೇಡಿಕೆಗೆ ಕೋರ್ಟ್‌ ಸಮ್ಮತಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next