Advertisement

ದಾಬೋಲಿಂ ವಿಮಾನ ನಿಲ್ದಾಣ: 2.13 ಕೋಟಿ ರೂ. ಚಿನ್ನ ವಶ, ಐವರ ಬಂಧನ

06:53 PM Apr 24, 2022 | Team Udayavani |

ಪಣಜಿ: ಆದಾಯ ಗುಪ್ತಚರ ನಿರ್ದೇಶನಾಲಯದ ಗೋವಾ ವಿಭಾಗದ ಅಧಿಕಾರಿಗಳು ಗೋವಾ ದಾಬೋಲಿಂ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಆಗಮಿಸಿದ ಪ್ರಯಾಣಿಕರಿಂದ 2.13 ಕೋಟಿ ರೂ ಮೌಲ್ಯದ ಕಾಂಬೊಡ್ರೋನ್, ಚಿನ್ನ, ಅಮೆರಿಕನ್ ತಂಬಾಕು ಸೇರಿದಂತೆ ವಿವಿಧ ವಸ್ತುಗಳನ್ನು ವಷಪಡಿಸಿಕೊಂಡಿದ್ದು ಈ ಪ್ರಕರಣದಲ್ಲಿ ಐವರನ್ನು ಬಂಧಿಸಿದ್ದಾರೆ.

Advertisement

ಈ ಐವರು ಶಂಕಿತರು ದುಬೈನಿಂದ ಬಂದಿದ್ದರು ಎನ್ನಲಾಗಿದೆ. ಏರ್ ಅರೇಬಿಯಾ ಜಿ-9492 ವಿಮಾನದಲ್ಲಿ ಗೋವಾಕ್ಕೆ ಬಂದಿಳಿದಿದ್ದರು. ಈ ವೇಳೆ ಡಿಆರ್ ಐ ತಂಡವು ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿದಾಗ ವಿವಿಧ ವಸ್ತುಗಳನ್ನು ಅಕ್ರಮವಾಗಿ ಸಾಗಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ವಾಸಿದ್ ಅಲಿಖಾನ್, ಜುನೆದುಲ್ ಹಕ್, ಜುನೆತ್ ಅಫಜಲ್ ಶೇಖ್, ಮೊಹಮ್ಮದ್ ಆಯುಬ್, ಮೊಹಸಿನ್ ರಾಜಾ ಎಂಬ ಆರೋಪಿಗಳನ್ನು ಅಧಿಕಾರಿಗಳು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next