Advertisement
ನಗರದ ಹೊರವಲಯ ದಲ್ಲಿರುವ ಯೂಟರ್ನ್ ಎಂಬ ಡಾಬಾ ದೀಪಕ್, ಅರ್ಪಿತ್ ಹಾಗೂ ಸಚಿನ್ ಎಂಬುವರ ಪಾಲುದಾರಿಕೆಯಲ್ಲಿ ನಡೆಯುತ್ತಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಅರ್ಪಿತ್, ಶೀತಲ್‌ಳನ್ನು ಮದುವೆ ಯಾಗಿದ್ದು, ದಂಪತಿ ಸೋಲದೇವನಹಳ್ಳಿಯಲ್ಲಿ ವಾಸವಾಗಿದ್ದರು. ಈ ಮಧ್ಯೆ ಅರ್ಪಿತ್ ಡಾಬಾ ಬಗ್ಗೆ ಹೆಚ್ಚು ಗಮನ ಹರಿಸಿದ್ದು, ಮನೆಗೆ ಸರಿಯಾಗಿ ಹೋಗುತ್ತಿರಲಿಲ್ಲ. ಹೀಗಾಗಿ ಪ್ರತಿನಿತ್ಯ ದಂಪತಿ ನಡುವೆ ಜಗಳ ನಡೆ ಯುತ್ತಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಜೂನ್‌ನಲ್ಲಿ ಪತ್ನಿ ಶೀತಲ್‌ಳನ್ನು ತವರು ಮನೆಗೆ ಕಳುಹಿಸಿದ್ದ ಅರ್ಪಿತ್, ಡಾಬಾದಲ್ಲಿಯೇ ಮಲಗುತ್ತಿದ್ದ. ಆರು ತಿಂಗಳಾದರು ಪತಿ ನೋಡಲು ಬಂದಿಲ್ಲ ಎಂದು ಆಕ್ರೋಶಗೊಂಡು ಕರೆ ಮಾಡಿದರೂ ಅರ್ಪಿತ್ ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
Related Articles
Advertisement
ಡಿ.23ರ ರಾತ್ರಿ 11 ಗಂಟೆ ಸುಮಾರಿಗೆ ಆರೋಪಿಗಳಾದ ಹೇಮಂತ್, ಮಂಜು ನಾಥ್ ಡಾಬಾಗೆ ಹೋಗಿದ್ದು, ಊಟ ಮಾಡಿದ್ದಾರೆ. ಊಟದ ಬಳಿಕವೂ ತುಂಬಾ ಹೊತ್ತು ಡಾಬಾದಲ್ಲೇ ಕುಳಿತು ಮಾತಿನಲ್ಲಿ ಮಗ್ನರಾಗಿದ್ದಾರೆ. ಈ ವೇಳೆ ಸಪ್ಲೆ„ಯರ್ ಡಾಬಾ ಬಾಗಿಲು ಹಾಕುವ ಸಮಯವಾಗಿದ್ದು, ಬಿಲ್ ಪಾವತಿಸುವಂತೆ ಹೇಳಿದ್ದಾನೆ. ಅದೇ ವಿಚಾರವನ್ನು ಮುಂದಿಟ್ಟುಕೊಂಡು ಡಾಬಾ ಸಿಬ್ಬಂದಿ ಮೇಲೆ ಜಗಳ ಮಾಡಿ ಹೋಗಿದ್ದರು. ತಡರಾತ್ರಿ 12.30ಕ್ಕೆ ಮತ್ತೆ ದ್ವಿಚಕ್ರವಾಹನದಲ್ಲಿ ಡಾಬಾ ಬಳಿ ಬಂದು ಡಾಬಾದ ಬಾಗಿಲಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಒಳಗೆ ವಿಶ್ರಾಂತಿ ಪಡೆಯುತ್ತಿದ್ದ ಹಾಸನ ಮೂಲದ ಮನೋಜ್(29), ಎಚ್ಚರಗೊಂಡು ಕೂಡಲೇ ಬಾಗಿಲು ತೆರೆದಿದ್ದಾರೆ. ಈ ವೇಳೆ ಆತನಿಗೆ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗೆ ಡಿ.28ರಂದು ಮೃತಪಟ್ಟಿದ್ದ. ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತು.