Advertisement

ಹೊಯ್ಸಳದಲ್ಲಿ ಧನಂಜಯ್‌ ಖಡಕ್‌ ಲುಕ್‌

06:13 PM Jul 06, 2022 | Team Udayavani |

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ “ಬೈರಾಗಿ’ ಸಿನಿಮಾದಲ್ಲಿ ನಟ ಧನಂಜಯ್‌, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನಿಮಗೆ ಗೊತ್ತಿರಬಹುದು. ಇತ್ತ “ಬೈರಾಗಿ’ ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವಾಗಲೇ, ಅತ್ತ ಧನಂಜಯ್‌ ಸದ್ದಿಲ್ಲದೆ ತಮ್ಮ ಮುಂಬರುವ ಸಿನಿಮಾಗಳ ಕೆಲಸಗಳಲ್ಲಿ ಬಿಝಿಯಾಗಿದ್ದಾರೆ.

Advertisement

ಸದ್ಯ ಧನಂಜಯ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ “ಹೊಯ್ಸಳ’ ಸಿನಿಮಾದ ಕೆಲಸಗಳು ಆರಂಭವಾಗಿದ್ದು, ಸಿನಿಮಾದ ಚಿತ್ರೀಕರಣ ಕೆಲಸಗಳಿಗೆ ಚಿತ್ರತಂಡ ಚಾಲನೆ ನೀಡಿದೆ.

ಇನ್ನು “ಹೊಯ್ಸಳ’ ಸಿನಿಮಾದಲ್ಲಿ ನಾಯಕ ನಟ ಧನಂಜಯ್‌, ಗುರುದೇವ ಹೊಯ್ಸಳ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ -ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಹೊಯ್ಸಳ’ ಸಿನಿಮಾದಲ್ಲಿ ನಾಯಕ ಧನಂಜಯ ಫ‌ಸ್ಟ್‌ ಲುಕ್‌ ಹೊರಬಂದಿದ್ದು, ಸಿನಿಮಾದಲ್ಲಿ ಧನಂಜಯ್‌ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.

ಸೋಶಿಯಲ್‌ ಮೀಡಿಯಾದಲ್ಲಿ ಬಿಡುಗಡೆಯಾಗಿರುವ “ಹೊಯ್ಸಳ’ ಸಿನಿಮಾದ ಫ‌ಸ್ಟ್‌ ಲುಕ್‌ನಲ್ಲಿ ಧನಂಜಯ್‌ ಕೈಯಲ್ಲಿ ಟೀ ಗ್ಲಾಸ್‌ ಹಿಡಿದುಕೊಂಡು, ಟೀ ಶರ್ಟ್‌ -ಜಿನ್ಸ್‌ ತೊಟ್ಟು ಖಡಕ್‌ ಆಗಿ ಕುಳಿತುಕೊಂಡಿರುವ ಭಂಗಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಮೆಲ್ನೋಟಕ್ಕೆ ಧನಂಜಯ್‌ ಸಿನಿಮಾದಲ್ಲಿ ಸಿವಿಲ್‌ ಡ್ರೆಸ್‌ನಲ್ಲಿರುವ ಖಡಕ್‌ ಪೊಲೀಸ್‌ ಅಧಿಕಾರಿಯಂತೆ ಕಾಣುತ್ತಿದ್ದು, ಧನಂಜಯ್‌ ಪಾತ್ರದ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸದ್ಯ ಬಿಡುಗಡೆಯಾಗಿರುವ, “ಹೊಯ್ಸಳ’ ಸಿನಿಮಾದ ಫ‌ಸ್‌ rಲುಕ್‌ ಸೋಶಿಯಲ್‌ ಮೀಡಿಯಾದಲ್ಲಿ ನೋಡುಗರ ಗಮನ ಸೆಳೆಯುತ್ತಿದ್ದು, ಫ‌ಸ್ಟ್ ಲುಕ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

ಈ ಹಿಂದೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ “ಗೀತಾ’ ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್‌ ನಾಗೇಂದ್ರ ನಿರ್ದೇಶನ ದಲ್ಲಿ ಮೂಡಿಬರು ತ್ತಿರುವ “ಹೊಯ್ಸಳ’ ಸಿನಿಮಾವನ್ನು ಕಾರ್ತಿಕ್‌ ಗೌಡ ಹಾಗೂ ಯೋಗಿ ಜಿ. ರಾಜ್‌ ನಿರ್ಮಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ ಯಿದೆ.

“ಹೊಯ್ಸಳ’ ಸಿನಿಮಾದಲ್ಲಿ ಧನಂಜಯ್‌ ಅವರಿಗೆ ಅಮೃತಾ ಅಯ್ಯಂಗಾರ್‌ ನಾಯಕಿಯಾಗಿ ಜೋಡಿಯಾಗಿದ್ದು, ಉಳಿದಂತೆ ಅಚ್ಯುತ ಕುಮಾರ್‌, ಪ್ರತಾಪ್‌ ನಾರಾಯಣ್‌, ನವೀನ್‌ ಶಂಕರ್‌, ಅವಿನಾಶ್‌ ಕೆ.ಜಿ.ಎಫ್, ರಾಘು ಶಿವಮೊಗ್ಗ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಸಾಹಸ ದೃಶ್ಯಗಳಿಗೆ ದಿಲೀಪ್‌ ಸುಬ್ರಹ್ಮಣ್ಯ ಹಾಗೂ ಅರ್ಜುನ್‌ ಮಾಸ್ಟರ್‌ ಸಾಹಸ ಸಂಯೋಜಿಸುತ್ತಿದ್ದು, ಸದ್ಯ ಮೈಸೂರು ಸುತ್ತಮುತ್ತ “ಹೊಯ್ಸಳ’ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next