Advertisement

Dhananjaya: ಕೆಲವೊಂದನ್ನು ನಾವು ಒಂಟಿಯಾಗಿಯೇ ಫೈಟ್‌ ಮಾಡಬೇಕು.. ದರ್ಶನ್‌ ಬಗ್ಗೆ ಡಾಲಿ ಮಾತು

12:55 PM Jul 11, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣದಲ್ಲಿ ನಟ ದರ್ಶನ್‌(Actor Darshan) ಬಂಧನದ ಬಳಿಕ ಅವರ ಅಭಿಮಾನಿಗಳು ಶಾಕ್‌ ನಲ್ಲಿದ್ದಾರೆ. ಸ್ಟಾರ್‌ ನಟನೊಬ್ಬ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎನ್ನುವುದನ್ನು ಇನ್ನೂ ಕೂಡ ಕೆಲ ಜನರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

Advertisement

ದರ್ಶನ್‌ ಬಂಧನದ ಬಳಿಕ ನೂರಾರು ಮಂದಿ ಈ ಪ್ರಕರಣದಲ್ಲಿ ಭಾಗಿಯಾದವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ. ಆದರೆ ದರ್ಶನ್‌ ಅಭಿಮಾನಿಗಳು ಹಾಗೂ ಚಿತ್ರರಂಗದ ಕೆಲವೊಂದಿಷ್ಟು ಮಂದಿ ದರ್ಶನ್‌ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ, ಇದೇ ವಿಚಾರವನ್ನು ಪದೇ ಪದೇ ಹೇಳುತ್ತಿರುವುದು ಸರಿಯಲ್ಲ, ಅವರು ಆದಷ್ಟು ಬೇಗ ಎಲ್ಲ ಆರೋಪಗಳಿಂದ ಮುಕ್ತವಾಗಿ ಹೊರಬರಲಿ ಎಂದು ಆಶಿಸಿದ್ದಾರೆ.

ಇದೀಗ ನಟ ಡಾಲಿ ಧನಂಜಯ(Daali Dhananjaya) ಕೂಡ ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ʼಕೋಟಿʼ ಸಿನಿಮಾದ ವೇಳೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಗ್ಗೆ ಪ್ರಶ್ನೆ ಕೇಳಿದಾಗ ಅವರು, ಸಿನಿಮಾದ ವಿಚಾರ ಮಾತನಾಡಿ ಎಂದಿದ್ದರು, ಇದೀಗ ಅವರಿಗೆ ಮತ್ತೆ ಅದೇ ಪ್ರಶ್ನೆಯನ್ನು ಕೇಳಲಾಗಿದೆ. ಈ ಬಾರಿ ಅವರು ಉತ್ತರಿಸಿದ್ದಾರೆ.

“ಈ ಪ್ರಕರಣದಲ್ಲಿ ಎಷ್ಟರ ಮಟ್ಟಿಗೆ ಅವರು ಭಾಗಿಯಾಗಿದ್ದಾರೆ ಅದು ಗೊತ್ತಿಲ್ಲ. ಖಂಡಿತ ಅವರ ಕಡೆಯಿಂದ ತಪ್ಪು ಆಗಿದ್ದರೆ ಶಿಕ್ಷೆಯಾಗಲಿ ನಾನು ಅವರ ಸಹೋದರನಾಗಿ ಹೇಳುತ್ತಿದ್ದೇನೆ. ಇಲ್ಲದಿದ್ರೆ ಕಾನೂನಾತ್ಮಕವಾಗಿ ಏನು ಆಗಬೇಕು ಅದಾಗಲಿ. ಅದನ್ನೇ ಪದೇ ಪದೇ ಹೇಳುತ್ತಾ ಇರುವುದು ಸರಿಯಲ್ಲ. ಈ ಕೃತ್ಯಕ್ಕೆ ಯಾರೂ ಸಪೋರ್ಟ್‌ ಮಾಡುತ್ತಿಲ್ಲ. ಅಲ್ಲಿ ನಡೆದಿರುವ ಘಟನೆಗೆ ಯಾರೂ ಕೂಡ ಸಮರ್ಥನೆ ನೀಡಿಲ್ಲ. ನಮ್ಮ ಮನೆಯವರೇ ಮಾಡಿದ್ದರೆ ಇದರ ಪರ ವಹಿಸಲು ಆಗುವುದಿಲ್ಲ. ಅಲ್ಲಿ ತಪ್ಪಾಗಿರುವುದು ನಿಜ. ಕಾನೂನಾತ್ಮಕವಾಗಿ ಏನು ಆಗಬೇಕೋ ಅದು ಆಗುತ್ತದೆ” ಎಂದಿದ್ದಾರೆ.

Advertisement

ಕೆಲವೊಂದು ಪೈಟ್‌ ಗಳನ್ನು, ಹೋರಾಟಗಳನ್ನು ನಾವೇ ಮಾಡಿಕೊಂಡಿರುವುದು ಆಗಿರುತ್ತದೆ ಅಥವಾ ನಮಗೆ ಗೊತ್ತಿಲ್ಲದೆ ಆಗಿರುತ್ತದೆ. ಕೆಲವೊಂದನ್ನು ನಾವು ಒಂಟಿಯಾಗಿಯೇ ಫೈಟ್‌ ಮಾಡಬೇಕು. ಈ ಬಗ್ಗೆ ನಾವ್ಯಾರು ಏನನ್ನೂ ಹೇಳುವುದಕ್ಕೆ ಅಥವಾ ಜಡ್ಜ್‌ ಮೆಂಟ್‌ ಕೊಡೋಕೆ ಆಗಲ್ಲ. ಆ ಕೃತ್ಯವನ್ನು ಖಂಡಿಸಬಹುದಷ್ಟೇ. ಅವರಿಂದ ತಪ್ಪು ಆಗಿದ್ದರೆ ಶಿಕ್ಷೆ ಆಗಲಿ. ಇಲ್ಲದಿದ್ರೆ ಬದುಕು ಯಾವಾಗಲೂ ಅವಕಾಶವನ್ನು ಕೊಟ್ಟೇ ಕೊಡುತ್ತದೆ. ಮತ್ತೆ ಆ ಥರದ ಕೃತ್ಯದಿಂದ ದೂರವಿದ್ದು, ಮತ್ತೆ ಪ್ರೇಕ್ಷಕರನ್ನು ರಂಜಿಸಲಿ” ಎಂದು ಅವರು ಹೇಳಿದ್ದಾರೆ.

ದರ್ಶನ್‌, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಜು.18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next