ನವದೆಹಲಿ: ಕೇಂದ್ರ ಸರ್ಕಾರದ ಒಂದು ಕೋಟಿ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳಮಾಡಲಾಗಿದ್ದು, ಇದರೊಂದಿಗೆ ಶೇ.38ರಷ್ಟಿದ್ದ ತುಟ್ಟಿಭತ್ಯೆ, ಶೇ.42ಕ್ಕೆ ಏರಿಕೆಯಾಗಿದೆ. ಕ್ರಮವು 2023ರ ಜನವರಿ 1ರಿಂದಲೇ ಅನ್ವಯವಾಗಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ತಿಳಿಸಿದ್ದಾರೆ.
ಕ್ರಮದಿಂದಾಗಿ ಕೇಂದ್ರದ ಬೊಕ್ಕಸಕ್ಕೆ ವಾರ್ಷಿಕ 12,815.60 ಕೋಟಿ ರೂ.ವೆಚ್ಚವಾಗಲಿದ್ದು, ಏರುತ್ತಿರುವ ಬೆಲೆಗಳನ್ನು ಸರಿದೂಗಿಸಲು ಇತ್ತೀಚಿನ ಗ್ರಾಹಕ ಸೂಚ್ಯಂಕವನ್ನು ಆಧರಿಸಿ, ತುಟ್ಟಿ ಭತ್ಯೆ ಹೆಚ್ಚಳ ಘೋಷಿಸಲಾಗಿದೆ ಎಂದಿದ್ದಾರೆ.
7ನೇ ಕೇಂದ್ರವೇತನ ಶಿಫಾರಸುಗಳನ್ನು ಕ್ರಮವು ಆಧರಿಸಿದ್ದು, ಇದರಿಂದ 47.58 ಲಕ್ಷ ಕೇಂದ್ರಸರ್ಕಾರದ ನೌಕರರು ಹಾಗೂ 69.76 ಲಕ್ಷ ಪಿಂಚಣಿದಾರರು ಫಲಾನುಭವಿಗಳಾಗಲಿದ್ದಾರೆ ಎಂದು ಸರ್ಕಾರ ತಿಳಿಸಿದೆ. 2022ರ ಸೆಪೆಂಬರ್ನಲ್ಲಿಯೂ ಕೇಂದ್ರಸರ್ಕಾರ ತುಟ್ಟಿಭತ್ಯೆ ಪರಿಷ್ಕರಿಸಿ, ಶೇ.4ರಷ್ಟು ಹೆಚ್ಚಳದೊಂದಿಗೆ ಡಿಎ ಪ್ರಮಾಣ ಶೇ.38ಕ್ಕೆ ಏರಿಕೆಯಾಗಿತ್ತು.