Advertisement

51ನೇ ಸಿನಿಮಾದಲ್ಲಿ ʼಕುಬೇರʼನಾಗಿ ಕಾಣಿಸಿಕೊಳ್ಳಲಿದ್ದಾರೆ ಧನುಷ್; ಫಸ್ಟ್‌ ಲುಕ್‌ ಔಟ್

12:01 PM Mar 09, 2024 | Team Udayavani |

ಚೆನ್ನೈ: ʼಕ್ಯಾಪ್ಟನ್‌ ಮಿಲ್ಲರ್‌ʼ ಹಿಟ್‌ ಬಳಿಕ ನಟ ಧನುಷ್ ಕಾಣಿಸಿಕೊಳ್ಳುತ್ತಿರುವ ‘D51’ ಸಿನಿಮಾದ ಫಸ್ಟ್‌ ಲುಕ್‌ ಹಾಗೂ ಟೈಟಲ್‌ ಶಿವರಾತ್ರಿ ಹಬ್ಬದಂದು ರಿವೀಲ್‌ ಆಗಿದೆ.

Advertisement

ಶೇಖರ್ ಕಮ್ಮುಲ ಧನುಷ್‌ ಅವರೊಂದಿಗೆ ಮೊದಲ ಬಾರಿಗೆ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಆರಂಭಗೊಂಡಿದೆ. ಇತ್ತೀಚೆಗೆ ತಿರುಪತಿಯಲ್ಲಿ ಸಿನಿಮಾದ ಚಿತ್ರೀಕರಣ ನಡೆದಿತ್ತು. ಚಿತ್ರೀಕರಣದ ವೇಳೆ ತಿರುಪತಿ ಭಕ್ತರಿಗೆ ತೊಂದರೆ ಆಗಿ ಚಿತ್ರೀಕರಣವನ್ನು ರದ್ದುಗೊಳಿಸಿದ ಪ್ರಸಂಗವೂ ನಡೆದಿತ್ತು.

ಇದೀಗ ಧನುಷ್‌ ಅವರ ʼಡಿ51ʼ ಸಿನಿಮಾಕ್ಕೆ ಅಧಿಕೃತವಾಗಿ ಟೈಟಲ್‌ ಇಡಲಾಗಿದೆ. ʼಕುಬೇರʼ ಎನ್ನುವ ಟೈಟಲ್‌ ಇಟ್ಟಿದ್ದು ಶಿವರಾತ್ರಿ ಹಬ್ಬಕ್ಕೆ ರಿವೀಲ್‌ ಮಾಡಲಾಗಿದೆ. ಧನುಷ್‌ ಗಡ್ಡಬಿಟ್ಟು ಬೀದಿಯಲ್ಲಿರುವ ಹುಡುಗನಂತೆ ಕಾಣಿಸಿಕೊಂಡಿದ್ದಾರೆ. ಶಿವನ ಪೋಸ್ಟರ್‌ ಮುಂದೆ ಧನುಷ್‌ ನಿಂತುಕೊಂಡಿರುವ ಮೋಷನ್‌ ಪಿಕ್ಚರ್‌ ನ್ನು ರಿಲೀಸ್‌ ಮಾಡಲಾಗಿದೆ.

ಈ ಚಿತ್ರದಲ್ಲಿ ನಾಗಾರ್ಜುನ ಅಕ್ಕಿನೇನಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಇದಲ್ಲದೆ, ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಜಿಮ್ ಸರಭ್, ಮತ್ತು ಇನ್ನೂ ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ಧನುಷ್‌ ಸ್ವತಃ ತಾವೇ ನಟಿಸಿ ನಿರ್ದೇಶನ ಮಾಡಲಿರುವ ಸಿನಿಮಾದ ಟೈಟಲ್‌ ರಿವೀಲ್‌ ಆಗಿತ್ತು. ಈ ಸಿನಿಮಾಕ್ಕೆ ʼರಾಯನ್‌ʼ ಎಂದು ಟೈಟಲ್‌ ಇಡಲಾಗಿದೆ. ಈ ಚಿತ್ರದಲ್ಲಿ ಕಾಳಿದಾಸ್ ಜಯರಾಮ್, ಸಂದೀಪ್ ಕಿಶನ್, ಅಪರ್ಣಾ ಬಾಲಮುರಳಿ, ಸೆಲ್ವರಾಘವನ್, ಸರವಣನ್, ಎಸ್‌ಜೆ ಸೂರ್ಯ, ಮತ್ತು ಹಲವಾರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next