ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ಎಲ್ಲ ವರ್ಗ ಹಾಗೂ ವಲಯದ ಅಭಿವೃದ್ಧಿಗೆ ಉತ್ತೇಜನ ನೀಡಲಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಸಲದ ಬಜೆಟ್‌ನಲ್ಲಿ ಯಾವುದೇ ಹೊಸ ಘೋಷಣೆ ಮಾಡಿಲ್ಲ.75 ನೇ ಸ್ವಾತಂತ್ರ್ಯ ದಿನಾಚರಣೆಯ ಹೊತ್ತಲ್ಲಿ 100 ವರ್ಷದ ಯೋಜನೆ ಇರಬೇಕು ಎಂಬುದು ಪ್ರಧಾನಿಯವರ ಕನಸು ಅದಕ್ಕಾಗಿ ಈ ಬಜೆಟ್ ಎಲ್ಲಾ ಕ್ಷೇತ್ರಕ್ಕೂ ಒತ್ತು ನೀಡುವ ಬಜೆಟ್ ಎಂದು ಹೇಳಿದರು.
ಸಾರ್ವಜನಿಕರು ಬಜೆಟ್‌ನ ಅಧ್ಯಯನ ನಡೆಸಬೇಕು.ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳುವಂತೆ ಆಗಬೇಕು.ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಹೊಸತನದ ಬಜೆಟ್ ಎಂದು ತಜ್ಞರು ವಿಶ್ಲೇಷಿಸಿದ್ದಾರೆ ಎಂದರು.
ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದಾಗ ಮಂಡಿಸುತ್ತಿದ್ದ ಬಜೆಟ್ ತಾತ್ಕಾಲಿಕವಾಗಿ ಜನರನ್ನ ಆಕರ್ಸಿಸುವ ಬಜೆಟ್ ಆಗಿತ್ತು. ಆರ್ಥಿಕ ವ್ಯವಸ್ಥೆ ಹೇಗಿರಬೇಕು ಎಂದರೆ ವೃತ್ತಿಪರ ಮತ್ತು ವಸ್ತುಸ್ಥಿತಿ ಇರಬೇಕು. ಒಂದು ವರ್ಷಕ್ಕೆ ಸೀಮಿತವಾಗದೆ,ಗುರಿ ಮುಟ್ಟುವ ಬಜೆಟ್ ಆಗಿರಬೇಕು. ಆ ಎಲ್ಲವೂ ಕೇಂದ್ರ ಬಜೆಟ್‌ನಲ್ಲಿದೆ ಎಂದು ಹೇಳಿದರು.
75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕಿಗ್ ಚಾಲನೆ ನೀಡಿದ್ದೇವೆ.ಮನೆ ನಿರ್ಮಾಣಕ್ಕೆ ದಾಖಲೆ ಸರಳೀಕರಣ ಮಾಡಿದ್ದೇವೆ.80 ಲಕ್ಷ ಮನೆ ನಿರ್ಮಾಣದ ಗುರಿ ಹೊಂದಿದ್ದೇವೆ. 3.8 ಕೋಟಿ ಮನೆಗೆ ನೀರು ಸರಬರಾಜು ಯೋಜನೆ ಇದೆ ಎಂದು ತಿಳಿಸಿದರು.