ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ವೈಯಕ್ತಿಕ ವಿಚಾರಗಳ ನಡುವಿನ ಸಮರ ಸೋಮವಾರವೂ ಮುಂದುವರಿದಿದೆ. “ ಅಶ್ಲೀಲ ಚಿತ್ರಗಳ ಬಗ್ಗೆ ರೋಹಿಣಿ ಸಿಂಧೂರಿ ಮಾತನಾಡುತ್ತಾರಾ” ಎಂದು ರೂಪಾ ಮೌದ್ಗಿಲ್ ಗಂಭೀರ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ.
ಇಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರೋಹಿಣಿ ಸಿಂಧೂರಿ ಅವರು ‘Get well soon’ ಎಂದು ರೂಪಾ ಅವರನ್ನು ಉದ್ದೇಶಿಸಿ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಫೇಸ್ ಬುಕ್ ಪೋಸ್ಟ್ ಮಾಡಿರುವ ಡಿ.ರೂಪಾ ಮೌದ್ಗಿಲ್, “ಮಾಧ್ಯಮದೆದುರು ಇವತ್ತು ರೋಹಿಣಿ ಸಿಂಧೂರಿ Get well soon ಅಂತಾ ನನಗೆ ಹೇಳಿದ್ದಾರಲ್ಲ, ಅವರ deleted ಅಶ್ಲೀಲ ಚಿತ್ರಗಳ ಬಗ್ಗೆ ಮಾತನಾಡುತ್ತಾರಾ? ನಂಬರ್ ಅವರದೇ ಅಲ್ಲವಾ. ಐಎಎಸ್ ಅಧಿಕಾರಿ ಅಶ್ಲೀಲ ಚಿತ್ರಗಳನ್ನು ಕಳಿಸಬಹುದೆ? ಈ ರೀತಿಯ ಫೋಟೊ ಕಳುಹಿಸಿದ್ದು ಯಾವ ಕಾರಣಕ್ಕಾಗಿ. ಸಂಧಾನಕ್ಕೆ? ಅವರ ಮೇಲಿನ ಆರೋಪ ಸಾಬೀತಾಗಿರುವ ಪ್ರಾಥಮಿಕ ತನಿಖೆಯ ವಿಷಯದಲ್ಲಿ ಮುಂದೆ ಶಿಕ್ಷೆ ಆಗದಂತೆ ತಡೆಯಲು? ಯಾವುದು? ಅವರೇ ಉತ್ತರಿಸಬೇಕು” ಎಂದು ಗಂಭೀರ ಆರೋಪ ಮಾಡಿದ್ದಾರೆ.
Get well soon ಅಂತಾ ಹೇಳುವುದರ ಮೂಲಕ ಮಾನಸಿಕ ಅರೋಗ್ಯ ಸಮಸ್ಯೆಯ ಬಗ್ಗೆ ಅವರ ಅಭಿಪ್ರಾಯ ಎಷ್ಟು ಏನೆಂದು ತೋರಿಸುತ್ತದೆ.. ಅಷ್ಟೇ ಈ ವಿಚಾರದಲ್ಲಿ ನ್ಯಾಯಾಲಯದಲ್ಲಿ ಇದರ ಬಗ್ಗೆ ನಿರ್ಣಯಿಸಲಾಗುವುದು
ಸಿಂಧೂರಿ ಅವರ ಪತಿಯ ಪತ್ರಿಕಾಗೋಷ್ಠಿ ಮಾಡುತ್ತಾರೆಂದರೆ ಏನರ್ಥ? ರೋಹಿಣಿ ಸಿಂಧೂರಿಗೆ ಮೀಡಿಯಾದವರ ಸವಾಲು ಎದುರಿಸಲು ಧೈರ್ಯ ಇಲ್ಲವಾ? ಉತ್ತರಗಳಿಲ್ಲವೆ? ಫೋನ್ ಹ್ಯಾಕ್ ಮಾಡಲಾಗಿದೆಂದು ಅವರ ಪತಿ ಹೇಳುತ್ತಿದ್ದಾರೆ. ಇದು ನಂಬುವ ಮಾತೇ? ಏನೋ ಹೇಳಬೇಕು ಪಾಪ. ಮಾನ ಹರಾಜಾಗಿದೆ ಎಂದು ರೂಪಾ ಮೌದ್ಗಿಲ್ ಆರೋಪ ಮಾಡಿದ್ದಾರೆ.