Advertisement

D Notification: ಮುಡಾಕ್ಕಿಂತ ದೊಡ್ಡ ಅಕ್ರಮ ಎಸಗಿದ್ದಾರೆ ಸಿಎಂ: ಕೇಂದ್ರ ಸಚಿವ ಎಚ್‌ಡಿಕೆ

12:59 AM Oct 02, 2024 | Team Udayavani |

ಹೊಸದಿಲ್ಲಿ: ಸಿದ್ದರಾಮಯ್ಯ ಚುನಾವಣೆಯ ಸಾಲ ತೀರಿಸಲು ಒಂದು ಕೋಟಿ ರೂ.ಗೆ ಮಾರಾಟ ಮಾಡಿದ ನಿವೇಶನ ಎಲ್ಲಿಂದ ಬಂದಿತ್ತು. ಮೈಸೂರಿನ ಹಿನಕಲ್ಲು ಗ್ರಾಮ ಪಂಚಾಯತ್‌ನಲ್ಲಿ ಬಡವರ ಮಕ್ಕಳಿಗೆ ವಸತಿ ಶಾಲೆ ನಿರ್ಮಾಣ ಮಾಡಲು ಭೂಮಿ ಡಿ ನೋಟಿಫಿಕೇಶನ್‌ ಮಾಡಿಸಿಕೊಂಡು ಅದನ್ನು ಸಿದ್ದರಾಮಯ್ಯ ಪಡೆದಿದ್ದಾರೆ. ಇದು 14 ನಿವೇಶನಗಳಿಗಿಂತ ದೊಡ್ಡ ಪ್ರಕರಣ. ಇದರ ಜತೆಗೆ ಇನ್ನೆರಡು ಪ್ರಕರಣಗಳಿವೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಊರಿಗೆ ಬುದ್ಧಿ ಹೇಳುವವರು ಇಲ್ಲಿ ಏನೇನು ಮಾಡಿದ್ದೀರಾ? ಈಗ ಚಾಮುಂಡಿ ಬೆಟ್ಟಕ್ಕೆ ತೆರಳಿ ಕುಂಕುಮ ಇಟ್ಟುಕೊಂಡು ರಕ್ಷಣೆ ಪಡೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.1988ರಲ್ಲಿ ಮುಡಾ ವಿಜಯನಗರ ಎರಡನೇ ಹಂತದ ಬಡಾವಣೆ ನಿರ್ಮಾಣಕ್ಕೆ ಹಿನಕಲ್ಲು ಗ್ರಾ.ಪಂ. ವ್ಯಾಪ್ತಿಯಲ್ಲಿ 535 ಎಕರೆ ಜಮೀನು ವಶಪಡಿಸಿ ಕೊಂಡಿತ್ತು. ಇದರಲ್ಲಿ ಬಡಾವಣೆ ನಿರ್ಮಾಣಗೊಂಡು ನಿವೇಶನ ಹಂಚಿಕೆಯಾದ ಸಂದರ್ಭದಲ್ಲಿ ಅಕ್ರಮ ನಡೆದಿದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಮೊದಲ ಆರೋಪಿಯಾಗಿದ್ದು ಒಟ್ಟು 18 ಮಂದಿ ಆರೋಪಿಗಳಿದ್ದಾರೆ. ಕೆಳ ನ್ಯಾಯಾಲಯ ಪ್ರಕರಣದ ತನಿಖೆ ನಡೆಯಬೇಕು ಎಂದು ತೀರ್ಪು ನೀಡಿತ್ತು.

ಹೈಕೋರ್ಟ್‌ನಲ್ಲಿ ಈ ಅದೇಶವನ್ನು ಸಿದ್ದರಾಮಯ್ಯ ಪ್ರಶ್ನಿಸಿದಾಗ ಅವರಿಗೆ ರಿಲೀಫ್ ಸಿಕ್ಕಿದೆ. ನ್ಯಾಯಮೂರ್ತಿ ಮೈಕೆಲ್‌ ಡಿ’ಕುನ್ಹಾ ನೀಡಿದ ತೀರ್ಪಿನ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಈ ನ್ಯಾಯಮೂರ್ತಿಗಳು ಸದ್ಯ ರಾಜ್ಯದಲ್ಲಿ ನಡೆದಿರುವ ಕೋವಿಡ್‌ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಒಂದು ದಿನಕ್ಕಾದರೂ ಜೈಲಿಗಟ್ಟುವ ಸಂಚು
ನಾನು ಜಾಮೀನು ಪಡೆದಿರುವುದು ತನಿಖೆ ಮಾಡ ದಂತೆ ಅಲ್ಲ. ಈ ಸರಕಾರ ಕೆಟ್ಟ ಅಧಿಕಾರಿಗಳಿಂದ ಏನು ಬೇಕಾದರೂ ಮಾಡಿಸುತ್ತದೆ. ನಮ್ಮ ವಕೀಲರು ಸೂಚನೆಯಂತೆ ಜಾಮೀನು ತೆಗೆದುಕೊಂಡಿದ್ದೇನೆಯೇ ಹೊರತು ತನಿಖೆ ಮಾಡದಂತೆ ಜಾಮೀನು ತೆಗೆದು ಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಹಿಂದೆ ಇದೇ
ಸಿದ್ದರಾಮಯ್ಯ ಪಟಾಲಂ ನನ್ನನ್ನು ಒಂದು ದಿನವಾದರೂ ಜೈಲಿಗಟ್ಟ‌ಬೇಕು ಎಂದು ಸಂಚು ಹೂಡಿತ್ತು. ಈಗಿರುವ ಅವರ ಪಟಾಲಂ ಕೂಡ ಅದೇ ರೀತಿಯಲ್ಲಿ ಕನಸು ಕಾಣುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ನಾನು ಒಬ್ಬ ಅಧಿಕಾರಿಯ ಕರ್ಮಕಾಂಡದ ಬಗ್ಗೆ ಮಾತಾಡಿದ್ದೆ. ಮಾಧ್ಯಮಗಳ ಮುಂದೆ ಅವರ ಕಥೆಯನ್ನು ಬಯಲು ಮಾಡಿದ್ದೆ. ಆದರೆ ಅವರು ನನ್ನ ಜೈಲಿಗೆ ಕಳುಹಿಸುವ ತಿರುಕನ ಕನಸು ಕಾಣುತ್ತಿದ್ದಾರೆ. ಅವರು ಎಲ್ಲಿ ಯಾರ ಚೇಂಬರ್‌ನಲ್ಲಿ ಕುಳಿತು ಮಾತಾಡಿದ್ದಾರೆ ಎನ್ನುವ ಮಾಹಿತಿ ನನಗೆ ಇದೆ. ಒಂದು ದಿನವಾ ದರೂ ಕುಮಾರಸ್ವಾಮಿಯನ್ನು ಜೈಲಿಗೆ ಹಾಕಬೇಕು ಎಂದು ಚರ್ಚೆ ಮಾಡಲಾಗಿದೆ ಆರೋಪಿಸಿದರು.

Advertisement

ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು: ಜೆಡಿಎಸ್‌
ತಪ್ಪೇ ಮಾಡಿಲ್ಲ, ಯಾರಿಗೂ ಜಗ್ಗುವುದಿಲ್ಲ; ಬಗ್ಗುವುದೂ ಇಲ್ಲ ಎಂದು ಮೊಂಡುತನ ತೋರುತ್ತಿದ್ದ ಸಿದ್ದರಾಮಯ್ಯ ಈಗ ಮುಡಾ ಹಗರಣ ತಮ್ಮ ಬುಡಕ್ಕೆ ಬರುತ್ತಿದ್ದಂತೆ ಪತ್ನಿಯ ಹೆಸರಿನಲ್ಲಿ ಅಕ್ರಮವಾಗಿ ಪಡೆದಿದ್ದ 14 ನಿವೇಶನಗಳನ್ನು ಹಿಂದಿರುಗಿಸಿದ್ದಾರೆ. ಇದು ಎನ್‌ಡಿಎ ಮೈತ್ರಿ ಪಕ್ಷವಾದ ಜೆಡಿಎಸ್‌ ಮತ್ತು ಬಿಜೆಪಿ ನಡೆಸಿದ ಮೈಸೂರು ಚಲೋ ಪಾದಯಾತ್ರೆಗೆ ಸಿಕ್ಕ ಗೆಲುವು ಎಂದು ಜೆಡಿಎಸ್‌ ವ್ಯಾಖ್ಯಾನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next