Advertisement
ವಿಟ್ಲ ಪ್ರಸ್ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗ ಮಂದಿರ ನಿರ್ಮಾಣಕ್ಕೆ ಹಿಂದೆ ಚೆನ್ನಪ್ಪ ಕೋಟ್ಯಾನ್ ಅವರ ಅನುದಾನದಲ್ಲಿ 1 ಲಕ್ಷ ರೂ. ಬಂದಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಂಗ ಮಂದಿರ ನವೀಕರಣಕ್ಕೆ ಜಯಶ್ರೀ ಕೋಡಂದೂರು ಮೂಲಕ 1 ಲಕ್ಷ ರೂ. ಬಿಡುಗಡೆಯಾಗಿದೆ. ಊರ ದಾನಿಗಳು, ಶಿಕ್ಷಕ ವೃಂದ ಹಾಗೂ ಹಳೆ ವಿದ್ಯಾರ್ಥಿಗಳ ಸಹಾಯದ ಮೂಲಕ ನಿರ್ಮಾಣವಾಗುತ್ತಿರುವ ಶತಮಾನೋತ್ಸವ ಸ್ಮಾರಕ ಕಟ್ಟಡಕ್ಕೆ 10 ಲಕ್ಷ ರೂ. ಅಂದಾಜಿಸಲಾಗಿದ್ದು, ಸುಮಾರು 5 ಲಕ್ಷ ರೂ.ಗಳಷ್ಟು ಸಂಗ್ರಹವಾಗಿದೆ. ತಾ.ಪಂ. ಸದಸ್ಯೆ ವನಜಾಕ್ಷಿ ಭಟ್ ಅವರ ಮೂಲಕ ಸುಮಾರು 65 ಸಾವಿರ ರೂ. ಅನುದಾನ ಲಭಿಸಿದೆ. ಶತಮಾನೋತ್ಸವ ಸಮಿತಿ ವತಿಯಿಂದ ಶೌಚಾಲಯ ನವೀಕರಣ ಹಾಗೂ ಪ್ರಯೋಗಾಲಯ ಮತ್ತು ವಿಜ್ಞಾನ ಸಾಮಗ್ರಿಗಳ ಆಧುನಿಕ ಪ್ರಯೋಗಾಲಯದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಬೆಳಗ್ಗೆ 10 ಗಂಟೆಗೆ ಶತಮಾನೋತ್ಸವ ಸಮಾರಂಭದ ಉದ್ಘಾಟನೆಯನ್ನು ಉಸ್ತುವಾರಿ ಸಚಿವ ರಮಾನಾಥ ರೈ ನಡೆಸಲಿದ್ದು, ಅಧ್ಯಕ್ಷತೆಯನ್ನು ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ವಹಿಸಲಿದ್ದಾರೆ. ಜಿ.ಪಂ.ಸದಸ್ಯೆ ಜಯಶ್ರೀ ಕೋಡಂದೂರು ನವೀಕೃತ ರಂಗ ಮಂದಿರದ ಉದ್ಘಾಟಿಸಲಿದ್ದು, ಮಂಜನಾಡಿ ಜುಮ್ಮಾ ಮಸೀದಿ ಉಸ್ತಾದ್ ಅಬ್ದುಲ್‌ಖಾದರ್ ಮದನಿ ಶುಭ ಹಾರೈಸಲಿದ್ದಾರೆ. ನಲಿಕಲಿ ತರಗತಿಯ ಟೈಲ್ಸ್ ಅಳವಡಿಕೆಯನ್ನು ವಿಟ್ಲ ಗ್ರಾಮೀಣ ಸಹಕಾರ ಬ್ಯಾಂಕ್ ನಿರ್ದೇಶಕ ಅನಂತ ಭಟ್ ನೀರ್ಕಜೆ, ವಾಚನಾಲಯ ಕೊಠಡಿ ಯನ್ನು ಬಾಬು ಪುರುಷ ಅರ್ಕೆಜಾರು, ಕಂಪ್ಯೂಟರ್ ಕೊಠಡಿಯನ್ನು ಹಾಸನ ಜನಪ್ರಿಯ ಹಾಸ್ಪಿಟಲ್ ಮುಖ್ಯಸ್ಥ ಅಬ್ದುಲ್‌ಬಶೀರ್ ಉದ್ಘಾಟಿಸಲಿದ್ದು, ದಕ್ಷಿಣ ಕನ್ನಡ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಟಿ.ಜಿ. ರಾಜಾರಾಮ ಭಟ್ ಅವರು ಸ್ಥಾಪಕರ ಭಾವಚಿತ್ರ ಅನಾವರಣಗೊಳಿಸಲಿದ್ದಾರೆ., ಶಾಲಾ ಸ್ಥಳ ದಾನಿ ನೂಜಿ ವೆಂಕಟೇಶ್ವರ ಭಟ್ ವಿವಿಧ ಗಣ್ಯರಿಗೆ ಗೌರವಾರ್ಪಣೆ ಮಾಡಲಿದ್ದು, ಎಸ್.ಡಿ.ಎಂ.ಸಿ. ನಿಕಟಪೂರ್ವ ಅಧ್ಯಕ್ಷ ಅಬ್ದುಲ್‌ಖಾದರ್ ನೆನಪಿನ ಕೃತಿ ಬಿಡುಗಡೆಗೊಳಿಸಲಿದ್ದಾರೆ. ವಿವಿಧ ಜನ ಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಶೆಟ್ಟಿ ಮೂಡೈಮಾರ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಅಬ್ದುಲ್‌ರಹಿಮಾನ್ ಯಾನೆ ಅದ್ರು, ಮುಖ್ಯ ಶಿಕ್ಷಕಿ ವಾರಿಜಾ ಬಿ.ಎ., ಸಹ ಶಿಕ್ಷಕ ರಾಧಾಕೃಷ್ಣ ವರ್ಮ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಮ್ಮಾನ
ಸಂಜೆ 5.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ, ಫಲಕ ದಾನಿಗಳ ಅನಾವರಣವನ್ನು ಒಡಿ ಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನಡೆಸಲಿದ್ದು, ಶಾಸಕಿ ಶಕುಂತಳಾ ಟಿ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಟ್ಲ ಮಾದರಿ ಶಾಲೆಯ ಮುಖ್ಯಶಿಕ್ಷಕ ಬಿ. ವಿಶ್ವನಾಥ ಗೌಡ ಅವರು ಉಪನ್ಯಾಸ ನೀಡಲಿದ್ದು, ಸಂಸದ ನಳಿನ್ ಕುಮಾರ್ ಕಟೀಲು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ. ಉಪಾಧ್ಯಕ್ಷ ಅಬ್ಟಾಸ್ ಆಲಿ, ವಿಟ್ಲ ಮುಟ್ನೂರು ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ, ಉಪಾ ಧ್ಯಕ್ಷ ದಯಾನಂದ ಶೆಟ್ಟಿ ಅಬೀರಿ ,ಸದಸ್ಯರು ಭಾಗವಹಿಸಲಿದ್ದಾರೆ. ವಿಶೇಷ ವಾಗಿ ಶಾಲೆಯ ಹಳೆ ವಿದ್ಯಾರ್ಥಿಗಳು, ನಿವೃತ್ತ ಸೈನಿಕರಾದ ನಾರಾಯಣ ಗೌಡ, ಚಂದ್ರಮೋಹನ ಅವರನ್ನು ಸಮ್ಮಾನಿಸಲಾಗುವುದು ಎಂದು ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಕ.ಶಿ. ವಿಶ್ವನಾಥ ಉರಿಮಜಲು ತಿಳಿಸಿದರು.