Advertisement

ಡಿಕೆಶಿ ಬಂಧನ ರಾಜಕೀಯ ಷಡ್ಯಂತ್ರ ಅಲ್ಲ: ಅನರ್ಹ ಶಾಸಕ ಕೆ.ಸುಧಾಕರ್

09:57 AM Sep 06, 2019 | Team Udayavani |

ಚಿಕ್ಕಬಳ್ಳಾಪುರ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ರಾಜಕೀಯ ಷಡ್ಯಂತ್ರ ಅಂತ ನನಗೆ ಅನಿಸುವುದಿಲ್ಲ. ರಾಜಕೀಯ ಷಡ್ಯಂತ್ರ ಅಗಿದ್ದರೆ ಬಹಳ ಜನರ ಮೇಲೆ ಆಗಬೇಕಿತ್ತು ಎಂದು ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದ ಅನರ್ಹ ಶಾಸಕ ಡಾ.ಕೆ.ಸುಧಾಕರ್, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎಂಬ ಕಾಂಗ್ರೆಸ್ , ಜೆಡಿಎಸ್ ನಾಯಕರ ಆರೋಪವನ್ನು ತಳ್ಳಿಹಾಕಿದರು.

Advertisement

ಚಿಕ್ಕಬಳ್ಳಾಪುರದಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಭಾಗವಹಿಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈ ಹಿಂದೆಯು ಅನೇಕ ರಾಜಕಾರಣಿಗಳು, ಸಚಿವರು ಹಲವು ಪ್ರಕರಣಗಳಲ್ಲಿ ಜೈಲು ಸೇರಿದ್ದಾರೆ. ಆದರೆ ಯಾರನ್ನು ಕೂಡ ರಾಜಕೀಯ ವೈಷಮ್ಯದಿಂದ ಪ್ರಕರಣಗಳಲ್ಲಿ ಸಿಕ್ಕಿಸಬಾರದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ನಮ್ಮ ದೇಶದ ಮಾಜಿ ಹಣಕಾಸು ಸಚಿವರಾದ ಪಿ. ಚಿದಂಬರಂ ಅವರಿಗೂ ಸಹ ಸುಪ್ರೀಂಕೋರ್ಟ್ ನಿರೀಕ್ಷಣಾ ಜಾಮೀನು ಕೊಟ್ಟಿಲ್ಲ. ಇ.ಡಿ.ತನಿಖೆಯಲ್ಲಿ ಲೋಪದೋಷಗಳು ಕಂಡು ಬಂದಿದ್ದರೆ ತಾತ್ಕಲಿಕವಾದ ತಡೆಯಾಜ್ಞೆ ನೀಡಬಹುದಿತ್ತು. ಆದರೆ ತನಿಖೆಯಲ್ಲಿ ಬಲವಾದ ಸಾಕ್ಷ್ಯ ದೊರೆತಿರಬೇಕು. ಆ ಕಾರಣಕ್ಕೆ ಅವರಿಗೆ ಸುಪ್ರೀಂಕೋರ್ಟ್ ಸಹ ಜಾಮೀನು ನೀಡಿಲ್ಲ ಎಂದರು.

ಡಿ ಕೆ ಶಿವಕುಮಾರ್ ಮತ್ತು ನಮ್ಮ ಮನೆಗಳು ಅಕ್ಕಪಕ್ಕದಲ್ಲಿವೆ. ಅವರ ಬಗ್ಗೆ ನನಗೆ ಅನುಕಂಪ ಇದೆ. ಅವರ ಕುಟುಂಬ ವರ್ಗಕ್ಕೆ ನನ್ನ ಸಹಾನುಭೂತಿ ಇದೆಯೆಂದ ಡಾ.ಕೆ.ಸುಧಾಕರ್, ತನಿಖಾ ಸಂಸ್ಥೆಗಳು ಕೂಡ ಪಾರದರ್ಶಕವಾಗಿ ತನಿಖೆ ನಡೆಸಬೇಕೆಂದರು. ಕಾನೂನು ಅಡಿಯಲ್ಲಿ ಯಾರೇ ಆಗಲಿ ನಡೆಯಬೇಕು. ಸಂವಿಧಾನಕ್ಕೆ ಗೌರವ ಕೊಡಬೇಕು. ಕಾನೂನುಗಿಂತ ದೊಡ್ಡವರು ಯಾರು ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next