ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ ಪ್ರತಿಭಟನೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕರೆ ನೀಡಿದರು.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮೂರು ಕಾಯ್ದೆಗಳನ್ನು ರದ್ದುಗೊಳಿಸುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಹೋರಾಟ ಹತ್ತಿಕ್ಕಲು ಪ್ರಯತ್ನ ನಡೆಯುತ್ತಿದೆ. ಕಳೆದ ರಾತ್ರಿಯಿಂದ ನನಗೆ, ಸುರೇಶ್ ಗೆ ರೈತರಿಂದ, ಕಾರ್ಯಕರ್ತರಿಂದ ಕರೆಗಳು ಬರುತ್ತಿದೆ. ನನ್ನ ಕ್ಷೇತ್ರ, ರಾಮನಗರ, ತುಮಕೂರು ನಿಂದಲೂ ಕರೆ ಬರುತ್ತಿದೆ. ಸರ್ಕಾರದ ಈ ನಡೆ ಖಂಡನೀಯ ಎಂದರು.
ಇದನ್ನೂ ಓದಿ:ಪೊಲೀಸರು ತಡೆದರೆ ರಸ್ತೆ ಬಂದ್ ಮಾಡಿ: ಕಾಂಗ್ರೆಸ್ ಕಾರ್ಯಕರ್ತರು, ರೈತರಿಗೆ ಡಿಕೆಶಿ ಕರೆ
ರೈತರ ಹೆಸರಿನಲ್ಲಿ ಹಸಿರು ಶಾಲು ಹಾಕಿ ಪ್ರಮಾಣ ವಚನ ಸ್ವೀಕಾರ ಮಾಡಿ ಇದೀಗ ರೈತರಿಗೆ ಅನ್ಯಾಯ, ಅವಮಾನ ಮಾಡುತ್ತಿದ್ದಾರೆ. ನಿಮ್ಮನ್ನು ಎಲ್ಲಿ ತಡೆಯುತ್ತಾರೋ ಅಲ್ಲೇ ಧರಣಿ ಮಾಡಿ, ಧ್ವಜ ಎತ್ತಿ ಹಿಡಿಯಿರಿ ಎಂದು ಡಿ ಕೆ ಶಿವಕುಮಾರ್ ರೈತರಿಗೆ ಕರೆ ಕೊಟ್ಟರು.
ಇದನ್ನೂ ಓದಿ: ಇಫಿ 2021: ಹೊಸ ಜಗತ್ತಿಗೆ ಮುಖ ಮಾಡಿದೆ; ನಟಿ ಗುಂಜಾಲಮ್ಮ ಮುಕ್ತ ಮಾತು