ಬೆಂಗಳೂರು: ತೇರದಾಳದಲ್ಲಿ ಚುನಾವಣೆ ಸಂದರ್ಭ ಮಹಿಳೆಯ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಶಾಸಕರನ್ನು ರಕ್ಷಿಸುವ ಕೆಲಸವಾಗುತ್ತಿದೆ. ಇಷ್ಟೆಲ್ಲಾ ಘಟನೆಗಳಾದರೂ ಇನ್ನೂ ಶಾಸಕರನ್ನು ಯಾಕೆ ಬಂಧಿಸಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ. ಡಿಕೆ ಶಿವಕುಮಾರ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.
ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಅವರು, ಒಂದು ಮಗವಿನ ಹತ್ಯೆ ಆಗಿದೆ ಅಂದರೆ ಇದು ಅಂತಾರಾಷ್ಟ್ರೀಯ ಸುದ್ದಿ. ಆದರೆ ಒಬ್ಬ ಶಾಸಕರನ್ನು ರಕ್ಷಿಸಲು ಹೊರಟಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿಯಿಲ್ಲ. ಯಡಿಯೂರಪ್ಪರವರೆ, ಶೋಭಾ ಕರಾಂದ್ಲಾಜೆಯವರೆ ನಿಮ್ಮ ಮನೆಯ ಮಕ್ಕಳಿಗೆ ಈ ರೀತಿ ಆಗಿದ್ದರೆ, ನಿಮಗೆ ಈ ರೀತಿ ಆಗಿದ್ದರೆ ಏನು ಮಾಡುತ್ತಿದ್ರಿ ಎಂದು ಖಾರವಾಗಿ ಪ್ರಶ್ನಿಸಿದರು.
ನಾನು, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ನಮ್ಮ ಮಹಿಳಾ ಶಾಸಕಿಯರು ತೇರದಾಳಗೆ ಹೊರಟಿದ್ದೇವೆ. ಅಧಿವೇಶನದಲ್ಲೂ ಈ ವಿಚಾರವಾಗಿ ಹೋರಾಟ ಮಾಡುತ್ತೇವೆ. ಇದು ಇಡೀ ಹೆಣ್ಣು ಕುಲಕ್ಕೆ, ಮಾನವೀಯತೆಗೆ ಮಾಡಿದ ಅಪಮಾನ ಎಂದರು.
ಡಿಸಿಎಂ ಅವರ ತೆಮಿಳು ಪ್ರಾದಿಕಾರ ರಚನೆಗೂ ಬದ್ದ ಹೇಳಿಕೆ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಅಧಿಕಾರಕ್ಕೆ ಬರಬೇಕೆಂದು ಇಡೀ ಸಮಾಜ, ಜಾತಿ, ಧರ್ಮ ಎಲ್ಲವನ್ನೂ ಒಡೆದು ಛಿದ್ರ ಮಾಡಲು ಹೊರಟಿದ್ದಾರೆ. ಆ ಬಗ್ಗೆ ಮುಂದೆ ಮಾತಾಡುವೆ ಎಂದರು.
ಕನ್ನಡ ಪರ ಸಂಘಟನೆಗಳ ಬಂದ್ ವಿಚಾರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಯಾಕೆ ಮಾಡಿದಾರೆ, ಏನು ಮಾಡಿದಾರೆ, ಏನು ಅವಶ್ಯಕತೆ ಎಂದು ಗೊತ್ತಿಲ್ಲ. ನಾನು ಈ ಬಗ್ಗೆ ಏನೂ ಮಾತಾನಾಡಲ್ಲ. ಸಾಮಾಜಿಕ ಹಾಗೂ ಆರ್ಥಿಕವಾಗಿ ಯಾರು ದುರ್ಬಲ ಇದ್ದಾರೆ ಅವರಿಗೆ ಸಹಾಯ ಮಾಡಿದರೆ ಮಾಡಲಿ ನಮ್ಮ ಅಭ್ಯಂತರವಿಲ್ಲ ಎಂದರು.