Advertisement

ಯಾರು ಯಾರು ಎಷ್ಟೆಷ್ಟು ಬಣ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ: ಡಿ ಕೆ ಶಿವಕುಮಾರ್ ಟಾಂಗ್

09:41 AM Jan 21, 2020 | keerthan |

ಬೆಂಗಳೂರು: ಕೆಪಿಸಿಸಿಯಲ್ಲಿ ನಾಲ್ಕು ಜನ ಕಾರ್ಯಧ್ಯಕ್ಷ ಹುದ್ದೆಯ ಬಗ್ಗೆ ಮಾತನಾಡಿದ ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರು, ಕಾಂಗ್ರೆಸ್ ಸ್ಥಾನಮಾನದ ಬಗ್ಗೆ ನಾನೇನು ಹೇಳಲ್ಲ. ಯಾರು ಯಾರು ಏನೇನು ಮತ್ತು ಮಾಧ್ಯಮಗಳು ಏನು ತೋರಿಸುತ್ತಿವೆ ಎಂಬುದು ನನಗೆ ಎಲ್ಲಾ ಗೊತ್ತು. ನಾನು ಗುಂಪು ಕಟ್ಟಕೊಂಡು ಹೋಗಲ್ಲ. ನಾನು ಏನೂ ಹೇಳಿಕೆ ಕೊಡಲ್ಲ ಎಂದಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಯಾರು ಎಷ್ಟೆಷ್ಟು ಬಣ ಸೃಷ್ಟಿ ಮಾಡಕೊಳ್ಳುತ್ತಾರೋ ಗೊತ್ತಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯಗೆ ಡಿ ಕೆ ಶಿವಕುಮಾರ್ ಟಾಂಗ್ ನೀಡಿದರು.

ಅಮಿತ್ ಶಾ ರಾಜ್ಯ ಭೇಟಿ ವೇಳೆ ಮಹದಾಯಿ ವಿಚಾರ ಪ್ರಸ್ತಾಪಿಸದ ವಿಚಾರದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಮಹದಾಯಿ, ಕಾವೇರಿ, ಕೃಷ್ಣಾನೂ ಬೇಕಾಗಿಲ್ಲ. ಕೇವಲ ಅವರ ಪಕ್ಷದ ಶಾಸಕರ ಕ್ಷೇತ್ರದ ಅಭಿವೃದ್ಧಿ ಮಾತ್ರ ಅವರಿಗೆ ಬೇಕು. ಬೇರೆ ಪಕ್ಷದ ಶಾಸಕರ ಕ್ಷೇತ್ರದ ಅಭಿವೃದ್ಧಿ ಅವರಿಗೆ ಬೇಕಾಗಿಲ್ಲ ಎಂದರು.

ವಿರೋಧ ಪಕ್ಷಗಳ ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಕೆಲಸ ತಡೆಹಿಡಿಯಲು ಸೂಚನೆ ಹೋಗಿದೆ. ಮೈತ್ರಿ ಸರ್ಕಾರ ವೇಳೆ ನನ್ನ ಕ್ಷೇತ್ರಕ್ಕೆ ಸೇರಿದಂತೆ ಬೇರೆ ಕ್ಷೇತ್ರಕ್ಕೆ ಮಂಜೂರಾದ ಅಭಿವೃದ್ಧಿ ಕೆಲಸ ತಡೆಹಿಡಿಯಲು ಅಧಿಕಾರಿಗಳಿಗೆ ಸೂಚನೆ ಹೋಗಿದೆ ಎಂದು ಆರೋಪ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next