Advertisement

ರಾಜ್ಯದಲ್ಲಿ ನೀಚ ರಾವಣ ಸರ್ಕಾರವಿದೆ: ಡಿ.ಕೆ.ಶಿವಕುಮಾರ್

12:57 PM Oct 04, 2021 | Team Udayavani |

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಒಂದು ತಿಂಗಳು ಗಡುವು ನೀಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲ ನೀರಾವರಿ ಯೋಜನೆ ವಿಳಂಬವಾಗುತ್ತಿದೆ. ಹಣಕಾಸು ಸಮಸ್ಯೆ ಇದೆಯೇ? ರೈತರ ಹೋರಾಟ ಹತ್ತಿಕ್ಕುವ ಕೆಲಸ ಆಗುತ್ತಿದೆ. ಮೇಕೆದಾಟು ತಮಿಳುನಾಡಿಗೆ ಹಕ್ಕು ಇಲ್ಲ ಎಂದ ಮೇಲೆ ನಿಮಗೆ ಬದ್ಧತೆ ಇಲ್ಲವೇ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದರು.

ಇದನ್ನೂ ಓದಿ:ದತ್ತ ಪೀಠವೇ ಬೇರೆ, ಬಾಬಾ ಬುಡಾನ್ ದರ್ಗಾವೇ ಬೇರೆ; ಮುಸಲ್ಮಾನರು ಕಣ್ತೆರೆದು ನೋಡಲಿ

ಕೃಷಿ ನೀರಾವರಿ ವಿಚಾರದಲ್ಲಿ ಕಾಂಗ್ರೆಸ್ ಮುಂದಿನ ತಿಂಗಳು ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಲಿದೆ ಎಂದ ಡಿ ಕೆ ಶಿವಕುಮಾರ್ ಅವರು ರಾಜ್ಯದಲ್ಲಿ ನೀಚ ರಾವಣ ಸರ್ಕಾರವಿದೆ ಎಂದು ಗುಡುಗಿದರು.

Advertisement

Udayavani is now on Telegram. Click here to join our channel and stay updated with the latest news.

Next