Advertisement

ಬಿಜೆಪಿಯವರ ಯೋಗ್ಯತೆಗೆ ಸುರೇಶ್ ಅಂಗಡಿಯವರ ಮೃತದೇಹ ಬೆಳಗಾವಿಗೆ ತರಲಾಗಲಿಲ್ಲ: ಡಿಕೆ ಶಿವಕುಮಾರ್

04:36 PM Aug 29, 2021 | Team Udayavani |

ಬೆಳಗಾವಿ: ಮಾಜಿ ಕೇಂದ್ರ ಸಚಿವ ಸುರೇಶ್ ಅಂಗಡಿ ಕೋವಿಡ್ ಸೋಂಕಿನಿಂದ ಮೃತಪಟ್ಟರು. ಆಗ ಮಾತನಾಡಿದರೆ ರಾಜಕೀಯವಾಗುತ್ತದೆಂದು ಮಾತನಾಡಿರಲಿಲ್ಲ. ನನ್ನ ಸ್ನೇಹಿತ ಸುರೇಶ್ ಅಂಗಡಿಯವರ ಮೃತ ದೇಹವನ್ನು ತರಲು ಬಿಜೆಪಿಗೆ ಆಗಲಿಲ್ಲ. ಕೇಂದ್ರದಲ್ಲಿ ರಾಜ್ಯದಲ್ಲಿ ಅವರದ್ದೇ ಸರ್ಕಾರವಿತ್ತು. ಆದರೂ ಇವರ ಯೋಗ್ಯತೆಗೆ ಮೃತದೇಹದ ತಂದು ಜನರಿಗೆ ದರ್ಶನ ಮಾಡಿಸಲಾಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪ್ರನಾಳಿಕೆಯಲ್ಲಿ ಉಚಿತ ಶವಸಂಸ್ಕಾರ ಮಾಡುವ ಘೋಷಣೆ ವಿಚಾರಕ್ಕೆ ಟೀಕಿಸಿದರು.

ಅಂತ್ಯಕ್ರಿಯೆ ಮಾಡಲು ಉಚಿತ ಎಂದು ಪ್ರನಾಳಿಕೆ ಹಾಕಿರುವ ನಿಮಗೆ ನಾಚಿಕೆ ಆಗಬೇಕು. ಸಂಸ್ಕಾರ, ಸಂಸ್ಕೃತಿಗೆ ಅವಮಾನ ಮಾಡಿದ್ದೀರಿ. ಕೋವಿಡ್ ಸಂದರ್ಭದಲ್ಲಿ ಯಾರಿಗೆ ಪರಿಹಾರ ಕೊಟ್ಟಿದ್ದೀರೆಂದು ಪಟ್ಟಿ ಬಿಡುಗಡೆ ಮಾಡಿ‌ ಎಂದು ಆಗ್ರಹಿಸಿದರು.

ಇದನ್ನೂ ಓದಿ:ಮಹದಾಯಿ ನದಿ ಉಕ್ಕಿ ಮನೆ ಕಳೆದುಕೊಂಡವರ ಅಳಲು ಕೇಳುವವರರಿಲ್ಲ?

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಾನಗರ ಪಾಲಿಕೆಯಲ್ಲಿ ರೆಜುಲೇಷನ್ ಪಾಸ್ ಮಾಡಿ 50% ಕಮರ್ಷಿಯಲ್ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಬೆಂಗಳೂರು ಜೊತೆಗೆ ಬೆಳಗಾವಿಯನ್ನು ಸ್ಪರ್ಧೆ ಮಾಡಲು ಯೋಜನೆ ಮಾಡಬೇಕು ಎಂದರು.

Advertisement

ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಗೆ ಒಂದು ಸಾವಿರ ಕೋಟಿಯಷ್ಟು ಅನುದಾನ ಬಂದಿದೆ. ಅದು ಎಲ್ಲಿ ಹೋಯಿತು? ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಪರ್ಸೆಂಟೆಜ್ ನಡೆಯುತ್ತಿದೆ ಎಂಬ ಆರೋಪವಿದೆ. 25% ಕಮಿಷನ್ ನೀಡಲಾಗುತ್ತದೆ ಎಂಬ ಆರೋಪ ಕೇಳಿ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸ್ಮಾರ್ಟ್ ಸಿಟಿ ಯೋಜನೆ ಅವ್ಯವಹಾರ ಕುರಿತು ತನಿಖೆಗೆ ಸಿದ್ದವಿದೆ. ಶಾಸಕರು ತಮಗೆ ಬೇಕಾದ ಹಾಗೆ ಯೋಜನೆ ರೂಪಿಸಿದ್ದಾರೆ. ಯೋಜನೆ ಹಣದ ಕುರಿತು ತನಿಖೆ ಮಾಡುತ್ತೇವೆ. ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ, ಪಾಲಿಕೆಯಲ್ಲೂ ಅಧಿಕಾರಕ್ಕೆ  ಬರುತ್ತದೆ ಆಗ ತನಿಖೆ ಮಾಡುತ್ತೇವೆ. ಬೆಳಗಾವಿಯಲ್ಲಿ ಸ್ವಚ್ಚ ಆಡಳಿತ ನೀಡುತ್ತೇವೆ ಎಂದರು.

ಕಳೆದ ವಿಧಾನಸಭಾ ಹಾಗೂ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜನ ಬೆಂಬಲನೀಡಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ನಮ್ಮ ಅಭ್ಯರ್ಥಿ ಗೆ ಬೆಂಬಲ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನು ಹೇಳುತ್ತೇವೆ ಎಂದ ಅವರು, ಜಿಲ್ಲೆಯಲ್ಲಿ ತ್ರಿಬಲ್ ಇಂಜಿನ್ ಆಡಳಿತ ನಡೆಯುತ್ತಿದೆ. ಅವರ ಸರ್ಕಾರ ಬಂದ ಮೇಲೆ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸಿಲ್ಲ. ಉತ್ತರ ಕರ್ನಾಟಕ ಹಾಗೂ ಬೆಳಗಾವಿ ಸುವರ್ಣ ಸೌಧದ ಬಗ್ಗೆ ಉದಾಸೀನ ಮನೋಭಾವ ಹೊಂದಿದ್ದಾರೆ. ಬೆಳಗಾವಿ ಬಗ್ಗೆ ಅವರಿಗೆ ವಿಶ್ವಾಸ ಇಲ್ಲ ಎಂದು ಡಿಕೆಶಿ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next