Advertisement
ಬುಧವಾರ ರಾತ್ರಿ ಕೋವಿಡ್ ಸೋಂಕಿನಿಂದ ನಿಧನರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೆ ಗುರುವಾರ ವಿಧಾನಸಭೆಯಲ್ಲಿ ನಡೆದ ಸಂತಾಪ ಸೂಚಕ ಚರ್ಚೆಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ‘ನಿನ್ನೆ ರಾತ್ರಿ ನಮ್ಮ ಶಾಸಕರಿಗೆಲ್ಲ ಔತಣಕೂಟ ಆಯೋಜಿಸಿದ್ದೆ. 20 ವರ್ಷಗಳ ಹಿಂದೆ ಅದೇ ಜಾಗದಲ್ಲಿ ಒಂದು ಕಾರ್ಯಕ್ರಮ ನಡೆಸಿದಾಗ ಆಗಿನ ಸಹಕಾರಿ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಮುದ್ದೂರ್ ಅವರು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಅವರು ಕಾರ್ಯಕ್ರಮ ಮುಗಿಸಿ ಮನೆಗೆ ಮರಳಿದ ನಂತರ ಕೆಲ ಹೊತ್ತಿನಲ್ಲೇ ಅವರು ಸಾವನ್ನಪಿದರು ಅಂತಾ ಸುದ್ದಿ ಬಂತು. ಅವತ್ತು ಅರು ಕಾರ್ಯಕ್ರಮದಲ್ಲಿ ನನಗೆ ಒಂದು ಮಾತು ಹೇಳಿದ್ದರು. ‘ಕ್ಷಣಂ ವಿತ್ತಂ, ಕ್ಷಣಂ ಚಿತ್ತಂ, ಕ್ಷಣಂ ಜೀವಿತಮೇವಚ ಯಮಸ್ಯ ಕರುಣಾ ನಾಸ್ತಿ, ತಸ್ಮಾತ್ ಜಾಗ್ರತ.. ಜಾಗ್ರತ.’ ಈ ಮನಸ್ಸು, ಹಣ ಚಂಚಲ ಇದ್ದಂತೆ. ಅದೇರೀತಿ ಯಮ ಕೂಡ ನಾನು ಯಾರಿಗಾದರೂ ಸಹಾಯ ಮಾಡುತ್ತೇನೆ, ಮಕ್ಕಳ ಮದುವೆ ಮಾಡುತ್ತೇನೆ ಕರುಣೆ ತೋರಿಸು ಎಂದರೆ ತೋರಿಸುವುದಿಲ್ಲವಂತೆ. ಅವನು ನಿರ್ಧರಿಸಿದರೆ ಯಾರನ್ನಾದರೂ ಮುಲಾಜಿಲ್ಲದೆ ಕರೆಸಿಕೊಳ್ಳುತ್ತಾನಂತೆ. ಅದೇ ರೀತಿ ಇಂದು ಸುರೇಶ ಅಂಗಡಿ ಅವರನ್ನು ಕರೆಸಿಕೊಂಡಿದ್ದಾನೆ. ಅವರು ಮಂತ್ರಿತಾಗಿ ಕೇವಲ ಒಂದು ಕಾಲು ವರ್ಷವಾಗಿದೆ. ಅವರು ಮಂತ್ರಿಯಾಗಿದ್ದಾಗ ಅವರನ್ನು ಭೇಟಿ ಮಾಡಿದ್ದೆ. ಆಗ ನಾನು ಮಂತ್ರಿ ಸ್ಥಾನ ನಿರೀಕ್ಷೆ ಮಾಡಿರಲಿಲ್ಲ. ಅವರೇ ನನಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ನನಗೆ ಸಿಕ್ಕಿರುವ ಅವಕಾಶದಲ್ಲಿ ನನ್ನ ಕೈಲಾದ ಸಹಾಯವನ್ನು ರಾಜ್ಯಕ್ಕೆ ಮಾಡುತ್ತೇನೆ ಎಂದಿದ್ದರು. ಅವರು ಅಲ್ಪಾವಧಿಯಲ್ಲೇ ರಾಜ್ಯಕ್ಕೆ ಉತ್ತಮ ಯೋಜನೆ ತರುವ ಪ್ರಯತ್ನ ಮಾಡಿದ್ದಾರೆ. ಅವರ ಬಗ್ಗೆ ಯಮ ಕರುಣೆ ತೋರಲಿಲ್ಲ ಎಂದರು.
Related Articles
Advertisement