Advertisement

D.K.,ಜಿಲ್ಲಾ ನಿ.ಸ.ನೌಕರರ ವೇದಿಕೆಯಿಂದ ಪ್ರತಿಭಟನೆ: ನಿವೃತ್ತಿ ಆರ್ಥಿಕ ಸೌಲಭ್ಯ ನೀಡಲು ಆಗ್ರಹ

01:03 AM Oct 02, 2024 | Team Udayavani |

ಮಂಗಳೂರು: 2022ರ ಜು.1ರಿಂದ 2024ರ ಜೂ.30ರ ಅವಧಿಯಲ್ಲಿ ನಿವೃತ್ತರಾದ ಸರಕಾರಿ ನೌಕರರಿಗೆ ಡಿಸಿಆರ್‌ಜಿ, ಕಮ್ಯುಟೇಶನ್‌, ಗಳಿಕೆ ರಜೆ ನವೀಕರಣದ ಮೊತ್ತವನ್ನು ಏಳನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ನೀಡಬೇಕು ಹಾಗೂ ಈ ಕುರಿತು ಪರಿಷ್ಕೃತ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಭಾಗವಾಗಿ ದ.ಕ. ಜಿಲ್ಲಾ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆ ವತಿಯಿಂದ ನಗರದ ಮಿನಿ ವಿಧಾನ ಸೌಧದ ಬಳಿ ಕಪ್ಪು ಪಟ್ಟಿ ಧರಿಸಿ ಧರಣಿ ಸತ್ಯಾಗ್ರಹ ನಡೆಯಿತು.

Advertisement

ಜಿಲ್ಲಾ ಪ್ರಧಾನ ಸಂಚಾಲಕ ಸಿರಿಲ್‌ ರಾಬರ್ಟ್‌ ಡಿ’ಸೋಜಾ ಮಾತನಾಡಿ, 2022ರ ಜು.1ರಿಂದ 2024ರ ಜೂ. 30ರೊಳಗೆ ನಿವೃತ್ತರಾದ ನೌಕರರಿಗೆ 7ನೇ ವೇತನ ಆಯೋಗದ ಅನುಸಾರ ನಿವೃತ್ತಿ ಆರ್ಥಿಕ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಿ, 6ನೇ ವೇತನ ಆಯೋಗದ ಅನುಸಾರ ನಿವೃತ್ತಿ ಆರ್ಥಿಕ ಸೌಲಭ್ಯ ನೀಡಲಾಗಿದೆ. 7ನೇ ವೇತನ ಆಯೋಗ ಪ್ರಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಕಾರಿ, ತಹಶೀಲ್ದಾರ್‌ಗಳ ಮೂಲಕ ಮನವಿ ಸಲ್ಲಿಸಲಾಗಿದೆ. ಸರಕಾರ ಶೀಘ್ರವಾಗಿ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಹಿರಿಯ ಸದಸ್ಯ ವಿಠಲ ಶೆಟ್ಟಿಗಾರ್‌, ಪದಾಧಿಕಾರಿಗಳಾದ ವೇದಿಕೆ ಪದಾಧಿಕಾರಿಗಳಾದ ವಿಜಯಾ ಪೈ, ಸ್ಟಾ Âನಿ ತಾವ್ರೋ, ನಾರಾಯಣ ಅವರು ಅಭಿಪ್ರಾಯ ಮಂಡಿಸಿದರು.

ನಾರಾಯಣ ಪೂಜಾರಿ, ಮೋಹನ ಬಂಗೇರ, ಎನ್‌.ಆನಂದ ನಾಯ್ಕ, ಹೇಮನಾಥ, ಜೆರಾಲ್ಡ್‌, ಭಾರತಿ ಪಿ.ವಿ ಮೊದಲಾದವರಿದ್ದರು. ಜಿಲ್ಲಾ ಸಂಚಾಲಕಿ ಮಂಜುಳಾ ಜಿ. ಸ್ವಾಗತಿಸಿದರು. ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next