Advertisement

ಡಿ. 12ರಂದು ಸಾಮರಸ್ಯನಡಿಗೆ: ರಮಾನಾಥ ರೈ

03:16 PM Dec 08, 2017 | Team Udayavani |

ಪುತ್ತೂರು : ಜಿಲ್ಲೆಯಲ್ಲಿ ಶಾಂತಿ, ಸಾಮರಸ್ಯ ವಾತಾವರಣ ಕಾಪಾಡುವ ಉದ್ದೇಶದಿಂದ ಡಿ. 12ರಂದು ಫ‌ರಂಗಿಪೇಟೆ ಯಿಂದ ಮಾಣಿವರೆಗೆ ಸಾಮರಸ್ಯ ನಡಿಗೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.

Advertisement

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಯ, ಪುತ್ತೂರಿನಲ್ಲಿ ಜಾಥಾ ಬಗ್ಗೆ ಪೂರ್ವಭಾವಿ ಸಭೆ ನಡೆದಿದೆ. ಬೆಳ್ತಂಗಡಿಯಲ್ಲಿ ಸಭೆ ನಡೆಯಲಿದೆ. ಜಿಲ್ಲೆಯಲ್ಲಿ ಸಾಮರಸ್ಯ ಬಯಸುವ ಎಲ್ಲರಿಗೂ ಆಹ್ವಾನ ನೀಡಲಾಗಿದ್ದು, ಶಾಂತಿ, ಸಾಮರಸ್ಯದ ವಾತಾವರಣ ಮೂಡಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಆಗಬೇಕಿದೆ ಎಂದು ಹೇಳಿದರು.

ಸಾಮರಸ್ಯದ ನಡಿಗೆಯಲ್ಲಿ ರಾಜ್ಯದ ವಿವಿಧ ನಾಯಕರು ಭಾಗ ವಹಿಸಲಿದ್ದಾರೆ. ಮೆರವಣಿಗೆ ರಸ್ತೆಯ ಒಂದು ಬದಿಯಲ್ಲಿ ಸಾಗ ಲಿದ್ದು, ಘೋಷಣೆಗಳನ್ನು ಹಾಕ ಲಾಗುವುದಿಲ್ಲ. ಬದಲಿಗೆ ಫ‌ಲಕಗಳನ್ನು ಪ್ರದರ್ಶಿಸ ಲಾಗುವುದು. ಮಾಣಿ ಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.  ಬೆಳಗ್ಗೆ 9.30ರಿಂದ ಜಾಥಾ ಆರಂಭ ಗೊಂಡು ಸಂಜೆ 5.30ಕ್ಕೆ ಮಾಣಿಯಲ್ಲಿ ಸಮಾಪನಗೊಳ್ಳಲಿದೆ. ಮಧ್ಯಾಹ್ನ ಮೆಲ್ಕಾರಿನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಸಾಮರಸ್ಯ ಬಯಸುವ ವಿವಿಧ ಸಂಘಟನೆಗಳು ಜಾಥಾಕ್ಕೆ ಕೈ ಜೋಡಿಸಲಿವೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಮಾಜಿಕ ಕಾರ್ಯಕರ್ತ ಮುನೀರ್‌ ಕಾಟಿಪಳ್ಳ, ಸಿಪಿಎಂ ಮುಖಂಡ ಸತೀಶನ್‌, ಕೆಪಿಸಿಸಿ ಸದಸ್ಯ ಡಾ|ರಘು, ಜಿ.ಪಂ. ಸದಸ್ಯ ಎಂ.ಎಸ್‌. ಮಹಮ್ಮದ್‌, ವಿಟ್ಲ-ಉಪ್ಪಿನಂಗಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುರಳೀಧರ ರೈ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮಹೇಶ್‌ ರೈ ಅಂಕೊತ್ತಿಮಾರು, ವೇದ ನಾಥ ಸುವರ್ಣ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next