Advertisement

ಗುಳೇದಗುಡ್ಡ ತಾಲೂಕು ಆಸ್ಪತ್ರೆ ಸಿಬ್ಬಂದಿಗೆ ಸೋಂಕು; ವೈದ್ಯರು ಸಹಿತ 30 ಜನ ಕ್ವಾರೆಂಟೈನ್

03:16 PM Jun 26, 2020 | keerthan |

ಗುಳೇದಗುಡ್ಡ(ಬಾಗಲಕೋಟೆ) : ಪಟ್ಟಣದ ಸರಕಾರಿ ಆಸ್ಪತ್ರೆಯ‌ ಸಿಬ್ಬಂದಿಯೊಬ್ಬರಿಗೆ ಕೋವಿಡ್-19 ಸೋಂಕು‌ ಕಾಣಿಸಿಕೊಂಡಿದ್ದು ಇದರಿಂದ ಸರಕಾರಿ ಆಸ್ಪತ್ರೆಯ ವೈದ್ಯರು, ಸಿಬ್ಬಂದ ಸಹಿತ 30 ಜನರು ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

Advertisement

ಆಸ್ಪತ್ರೆಯ ಡಿ ದರ್ಜೆ ನೌಕರನಿಗೆ ಸೋಂಕು ಪಾಸಿಟಿವ್ ಬಂದಿದ್ದು, ಸಮುದಾಯ ಆರೋಗ್ಯ ಕೇಂದ್ರ ಸಾನಿಟೈಸಿಂಗ್ ಮಾಡಲಾಗುತ್ತಿದೆ. ವೈದ್ಯರು, ಆಸ್ಪತ್ರೆ ಸಿಬ್ಬಂದಿ ಸೇರಿ 30 ಜನರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

ಕೋವಿಡ್-19 ಪಾಸಿಟಿವ್ ಬಂದಿರುವ ನೌಕರನ ಮನೆ ಸುತ್ತಮುತ್ತಲೂ ಸಾನಿಟೈಜಿಂಗ್ ಮಾಡಲಾಗುತ್ತಿದೆ. ಇದೀಗ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಕೋವಿಡ್-19 ಭೀತಿ ಎದುರಾಗಿದೆ.

ಜಿಲ್ಲಾ ಕೋವಿಡ್ ಆಸ್ಪತ್ರೆಯ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿದೆ. ಅಂತಿಮವಾಗಿ ಬೆಂಗಳೂರುರ ಪರೀಕ್ಷಾ ಕೇಂದ್ರಕ್ಕೆ ಗಂಟಲು ದ್ರವ ಮಾದರಿ ರವಾನೆ ಮಾಡಲಾಗಿದೆ.

ವೈದ್ಯರು, ಆಸ್ಪತ್ರೆಯ 30 ಸಿಬ್ಬಂದಿಗೆ ಕ್ವಾರಂಟೈನ್ ಮಾಡಲಾಗಿದ್ದು, ಇಡೀ ಸಮುದಾಯ ಆರೋಗ್ಯ ಕೇಂದ್ರ ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next