Advertisement

ಡಿ ದರ್ಜೆ ನೌಕರರ ಪ್ರತಿಭಟನೆ

03:05 PM Feb 27, 2018 | |

ಸಿಂದಗಿ: ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರ ಸಂಘದ ಕಾರ್ಯಕರ್ತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸೋಮವಾರ ಪಟ್ಟಣದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ಶಿರಸ್ತೇದಾರ್‌ ಎಚ್‌.ಎಂ. ತಾಳಿಕೋಟಿಗೆ ಮನವಿ ಸಲ್ಲಿಸಿದರು.

Advertisement

ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಹುಲಗಪ್ಪ ಚಲವಾದಿ ಮಾತನಾಡಿ, ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಮತ್ತು ವಸತಿ ಶಾಲಾ, ಕಾಲೇಜುಗಳಲ್ಲಿ ದುಡಿಯುತ್ತಿರುವ ಡಿ ವರ್ಗದ ಹೊರಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸ ಬೇಕು. ಸೇವಾಭದ್ರತೆ, ಸಮ ಕೆಲಸಕ್ಕೆ ಸಮಾನ ವೇತನ, ಇಲಾಖೆಯಿಂದ ವೇತನ ಪಾವತಿ ಮತ್ತು ಕಾರ್ಮಿಕ ಕಾನೂನು ಜಾರಿಗೆ ತರದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ತಾಲೂಕಾಧ್ಯಕ್ಷ ಲಕ್ಷ್ಮಣ ಮಸಳಿ ಮಾತನಾಡಿ, ಹೊರಗುತ್ತಿಗೆ ನೌಕರರಿಗೆ ಅನ್ವಯವಾಗುವ, ಗುತ್ತಿಗೆ ಕಾರ್ಮಿಕರ ನಿಯಂತ್ರಣ ಕಾಯ್ದೆ, ಇಪಿಎಫ್‌, ಇಎಸ್‌ಐ, ಮೊದಲಾದ ಕಾರ್ಮಿಕ ಕಾನೂನುಗಳನ್ನು ಅನ್ವಯಿಸಿ ಜಾರಿ ಮಾಡಬೇಕು. ಕನಿಷ್ಠ ವೇತನ ಪರಿಷ್ಕರಣೆಯಾದಾಗ ಹಾಗೂ ಪ್ರತಿ ವರ್ಷ ಏಪ್ರೀಲ್‌ ತಿಂಗಳಲ್ಲಿ ತುಟ್ಟಿ ಭತ್ಯೆ ಪರಿಷ್ಕರಣೆಯಾದಾಗ ನೌಕರರಿಗೆ ಸಂದಾಯ ಮಾಡದೇ ಬಾಕಿ ಇರುವ ವ್ಯತ್ಯಾಸದ ಹಣ ಪಾವತಿ ಮಾಡಬೇಕೆಂದು ಆಗ್ರಹಿಸಿದರು.

ತಾಲೂಕು ಉಪಾಧ್ಯಕ್ಷರಾದ ನೂರಜಾನ ಯಲಗಾರ, ಕಮಲಾಕ್ಷಿ ದೊಡಮನಿ, ವೈಶಾಲಿ ಸಮಗೊಂಡ, ಕಲಾವತಿ ಬಿಸನಾಳ, ಚಂದ್ರಕಾಂತ ನಡುವಿನಕೇರಿ, ಚಂದ್ರು ಚಟ್ನಳ್ಳಿ, ಪ್ರದಾನಿ ಮಾದರ, ರಮಾಬಾಯಿ ರಜಪೂತ, ಲಕ್ಷ್ಮಿಪುತ್ರ ಕುರಮಲ್‌,ಲಲಿತಾ ಬೀರನಳ್ಳಿ ಸೇರಿದಂತೆ ನೂರಾರು ಡಿ ವರ್ಗದ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next