Advertisement

ಕಸಗುಡಿಸಿ ರಂಗೋಲಿ ಬಿಡಿಸಿದ ಪುರಸಭೆ ಅಧಿಕಾರಿಗಳು

03:24 PM May 29, 2022 | Shwetha M |

ತಾಳಿಕೋಟೆ: ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಪುರಸಭೆ ಅಧಿಕಾರಿಗಳು ವಿನೂತನ ದಾರಿಯೊಂದನ್ನು ಕಂಡುಕೊಂಡಿದ್ದು ರಸ್ತೆ ಮೇಲೆ ಮತ್ತು ರಸ್ತೆ ಬದಿಯಲ್ಲಿ ಹಾಕಲಾದ ಕಸಗೂಡಿಸಿ ರಂಗೋಲಿ ಬಿಡಿಸುವುದರೊಂದಿಗೆ ವಿನೂತನವಾದ ಹೆಜ್ಜೆಯೊಂದನ್ನು ಇಟ್ಟಿದ್ದಾರೆ.

Advertisement

ಶನಿವಾರರಂದು ನೈರ್ಮಲ್ಯ ದಿನಾಚರಣೆ ಅಂಗವಾಗಿ ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ಅವರ ಸಲಹೆ ಮೇರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಬೆಳಗ್ಗೆ ರಾಜವಾಡೆಯ ಅಗಸಿಯ ಹತ್ತಿರ ರಸ್ತೆಯ ಮದ್ಯ ಹಾಕಲಾಗಿದ್ದ ಕಸವನ್ನು ಗೂಡಿಸಿ ಸ್ವತಃ ತಾವೇ ರಂಗೋಲಿ ಬಿಡಿಸಿ ಸ್ವತ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಇದರ ಜೊತೆಗೆ ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಪುರಸಭೆಯ ಆರೋಗ್ಯ ಕಿರಿಯ ನಿರೀಕ್ಷಕ ಶಿವಾನಂದ ಜುಮನಾಳ, ಬಸ್ಸು ಖಾಜಿಬಿಳಗಿ ಅವರು, ಪಟ್ಟಣದ ಸ್ವತ್ಛತೆಗಾಗಿ ಪುರಸಭೆ ಸಿಬ್ಬಂದಿಗಳು ನಿತ್ಯ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ. ಅದರ ಜೊತೆಗೆ ಜನರಿಗೆ ಸ್ವಚ್ಚತೆ ಬಗ್ಗೆ ತಿಳಿವಳಿಕೆ ನೀಡುವಂತಹ ಕಾರ್ಯ ಮಾಡುತ್ತ ಸಾಗಿದ್ದೇವೆ. ಆದರೂ ಕೂಡಾ ಚರಂಡಿಯಲ್ಲಿ ಕಸ ಹಾಕುವದು ರಸ್ತೆಯ ಮದ್ಯವೇ ಕಸ ಬಿಸಾಕುವುದು ಕೆಲವು ಕಡೆಗಳಲ್ಲಿ ನಿಲ್ಲುತ್ತಿಲ್ಲ. ಅಂತಹ ಸ್ಥಳಗಳನ್ನು ಆಯ್ಕೆ ಮಾಡಿ ಸ್ವಚ್ಛತೆಯ ಜೊತೆಗೆ ರಂಗೋಲಿ ಬಿಡಿಸಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ಜನರು ಸ್ಪಂದಿಸುವ ಇಚ್ಛೆಯಲ್ಲಿದ್ದೇವೆ. ನಗರ ಸ್ವಚ್ಛವಾಗಿದ್ದರೆ ಯಾವುದೇ ರೋಗ ರುಜುಗಳು ಬರಲ್ಲ. ಸ್ವಚ್ಛತೆಯ ಕೆಲಸ ಪುರಸಭೆಯದ್ದಾಗಿದ್ದರೂ ಕೂಡಾ ಜನರ ಸಹಕಾರವೆಂಬುದು ಬಹಳೇ ಮುಖ್ಯವಾಗಿದೆ. ಒಣ ಕಸ ಹಸಿ ಕಸ ಬೇರ್ಪಡಿಸಿ ಮನೆಯಲ್ಲಿಯೇ ಇಟ್ಟುಕೊಳ್ಳಿ. ಬೆಳಗ್ಗೆ ಮನೆ ಬಾಗಿಲಿಗೆ ಬರುವ ಕಸ ವಿಲೇವಾರಿ ವಾಹನದಲ್ಲಿ ಹಾಕಬೇಕೆಂದು ಮನವಿ ಮಾಡುವದಾಗಿ ಹೇಳಿದರು.

ಪುರಸಭೆ ಸದಸ್ಯರುಗಳಾದ ಅಣ್ಣಾಜಿ ಜಗತಾಪ, ಡಿ.ವಿ. ಪಾಟೀಲ, ಮುದಕಣ್ಣ ಬಡಿಗೇರ, ಪೌರ ಕಾರ್ಮಿಕರಾದ ಸಿದ್ದಪ್ಪ ಕೊಳ್ಳಿ, ರಾಜು ಚಿತ್ತಾಪುರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next