Advertisement

ಶಿಮ್ಲಾ ರೆಸ್ಟೋರೆಂಟ್ ನಲ್ಲಿ ಸಿಲಿಂಡರ್ ಸ್ಫೋಟ: ಓರ್ವ ಮೃತ್ಯು, 10 ಮಂದಿಗೆ ಗಾಯ

09:53 AM Jul 19, 2023 | Team Udayavani |

ಶಿಮ್ಲಾ: ರೆಸ್ಟೋರೆಂಟ್ ನಲ್ಲಿ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಓರ್ವ ಮೃತಪಟ್ಟು ಹತ್ತು ಮಂದಿ ಗಾಯಗೊಂಡಿರುವ ಘಟನೆ ಶಿಮ್ಲಾ ನಗರದ ಮಾಲ್ ರಸ್ತೆಯಲ್ಲಿ ನಡೆದಿದೆ.

Advertisement

ಗಾಯಗೊಂಡವರನ್ನು ಕೊಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಹಿಮಾಚಲಿ ಅಡುಗೆಗೆ ಹೆಸರುವಾಸಿಯಾದ ಹಿಮಾಚಲಿ ರಸೋಯ್ ರೆಸ್ಟೋರೆಂಟ್‌ನಲ್ಲಿ ಘಟನೆ ಸಂಭವಿಸಿದ್ದು, ಇದು ಮಾಲ್ ರಸ್ತೆಯ ಪಕ್ಕದಲ್ಲಿದೆ ಘಟನೆಯಿಂದ ಹತ್ತಿರದ ನಾಲ್ಕರಿಂದ ಆರು ಅಂಗಡಿಗಳು ಹಾನಿಗೊಳಗಾಗಿವೆ ಎನ್ನಲಾಗಿದೆ.

ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸುತ್ತಮುತ್ತಲಿನ ಹಲವಾರು ಅಂಗಡಿಗಳು ಮತ್ತು ಮನೆಗಳ ಕಿಟಕಿ ಗಾಜುಗಳು ಒಡೆದು ಕೆಲದೂರ ಎಸೆಯಲ್ಪಟ್ಟಿದೆ. ಘಟನಾ ಸ್ಥಳವು ಅಗ್ನಿಶಾಮಕ ಠಾಣೆ ಮತ್ತು ಪೊಲೀಸ್ ಕಂಟ್ರೋಲ್ ರೂಮ್‌ನಿಂದ ಕೆಲವೇ ಮೀಟರ್ ದೂರದಲ್ಲಿರುವ ಕಾರಣ, ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ತ್ವರಿತವಾಗಿ ಪ್ರಾರಂಭಿಸಲಾಯಿತು.

ಸ್ಫೋಟಕ್ಕೆ 20 ನಿಮಿಷಗಳ ಮೊದಲು ಅನಿಲ ಸೋರಿಕೆಯಾಗಿದೆ ಎಂದು ಸ್ಥಳೀಯರು ದೂರು ನೀಡಿದ್ದರು. ಘಟನೆ ಕುರಿತು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

Advertisement

ಇದನ್ನೂ ಓದಿ: Love bites: ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿ, ಹಾವು ಕಚ್ಚಿಸಿ ಪ್ರಿಯಕರನ ಕೊಲೆಗೈದ ಪ್ರಿಯತಮೆ

Advertisement

Udayavani is now on Telegram. Click here to join our channel and stay updated with the latest news.

Next