ಶಹಾಪುರ: ಸೀಮಂತ ಕಾರ್ಯಕ್ರಮವೊಂದರಲ್ಲಿ ಸಿಲಿಂಡರ್ ಸ್ಪೋಟ ಗೊಂಡ ಪರಿಣಾಮ 20 ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡ ಭೀಕರ ದುರಂತ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಏಕಾಏಕಿ ಸಿಲಿಂಡರ್ ಸ್ಫೋಟ ನಡೆದ ಕಾರಣ ಕಾರ್ಯಕ್ರಮಕ್ಕೆ ಆಗಮಿಸಿದ್ದ 20 ಕ್ಕೂ ಹೆಚ್ಚು ಜನರ ಮೈಯೆಲ್ಲ ಸುಟ್ಟಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಲ್ಬುರ್ಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ನಿವೃತ್ತ ನೌಕರ ಸಾಯಬಣ್ಣ ಹಗರಟಿಗಿ ಅವರ ಮನೆಯಲ್ಲಿ ಸಿಮಂತ ಕಾರ್ಯಕ್ರಮದ ಶುಭ ಸಂದರ್ಭದಲ್ಲಿ ದರ್ಘಟನೆ ನಡೆದಿದ್ದು,ಇಡಿ ಗ್ರಾಮ ಕಣ್ಣೀರು ಸುರಿಸುವಂತಾಗಿದೆ.
ಸಣ್ಣ ಮಕ್ಕಳು ಸೇರಿದಂತೆ ಹಲವರಿಗೆ ಬೆಂಕಿ ತಗುಲಿ ನರಳುತ್ತಿರುವ ಚಿತ್ರಣ ನಗರ ಆಸ್ಪತ್ರೆ ಮುಂದೆ ಕಂಡು ಬರುತ್ತಿದ್ದು, ದುರ್ಘಟನೆ ಕಂಡು ಜನರ ರೋದನ ಮುಗಿಲು ಮುಟ್ಟಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.