Advertisement

ಕ್ಯಾನ್ಸರ್‌ ಜಾಗೃತಿಗೆ ಸೈಕ್ಲಥಾನ್‌

12:27 AM May 05, 2019 | Lakshmi GovindaRaj |

ಬೆಂಗಳೂರು: ಕರುಳು, ಗುದನಾಳ ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಎಚ್‌ಎಎಲ್‌ ರಸ್ತೆಯ ಮಣಿಪಾಲ್‌ ಆಸ್ಪತ್ರೆ ವತಿಯಿಂದ ಸೈಕ್ಲಥಾನ್‌ ಹಮ್ಮಿಕೊಳ್ಳಲಾಗಿತ್ತು. ಆಸ್ಪತ್ರೆ ಆವರಣದಲ್ಲಿ ಶನಿವಾರ ಬೆಳಗ್ಗೆ 6.30ಕ್ಕೆ ಕಿರುತರೆ ನಟಿ ಅನುಪಮಾ ಗೌಡ ಸೈಕ್ಲಥಾನ್‌ಗೆ ಚಾಲನೆ ನೀಡಿದರು.

Advertisement

ಹಳೆಯ ವಿಮಾನ ನಿಲ್ದಾಣ ರಸ್ತೆ, ಎಎಸ್‌ಸಿ ಜಂಕ್ಷನ್‌, ಟ್ರಿನಿಟಿ ಜಂಕ್ಷನ್‌, ಹಲಸೂರು ಮೆಟ್ರೋ ಸ್ಟೇಷನ್‌, ಇಂದಿರಾನಗರ ಮೆಟ್ರೊ ಸ್ಟೇಷನ್‌, ಕೆಎಫ್ಸಿ ಜಂಕ್ಷನ್‌, ಬಾರ್ಬೆಕ್ಯೂ ನೇಷನ್‌ ಬಳಿ 100 ಅಡಿ ರಸ್ತೆಗಳಲ್ಲಿ ಸಾಗಿ ಆಸ್ಪತ್ರೆ ಆವರಣಕ್ಕೆ ಹಿಂದಿರುಗಿತು. ಸುಮಾರು 10 ಕಿ.ಮೀ ಸಾಗಿದ ಜಾಥಾದಲ್ಲಿ ಸುಮಾರು 250 ಸೈಕ್ಲಿಸ್ಟ್‌ಗಳು ಭಾಗವಹಿಸಿದ್ದರು.

ಆನಂತರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಣಿಪಾಲ್‌ ಆಸ್ಪತ್ರೆಯ ಚೇರ್ಮನ್‌ ಡಾ. ಸುದರ್ಶನ್‌ಬಲ್ಲಾಳ್‌ ಮಾತನಾಡಿ, ಭಾರತದಲ್ಲಿ ಆಲಸ್ಯ ಜೀವನಶೈಲಿ ಮತ್ತು ಆಧುನಿಕ ಆಹಾರ ಪದ್ಧತಿಯಿಂದ ಕೊಲೋರೆಕ್ಟೆಲ್‌ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚುತ್ತಿವೆ.

ಎಳೆಯ ವಯಸ್ಸಿನವರಲ್ಲಿಯೇ ಈ ರೋಗ ಪತ್ತೆಯಾಗುತ್ತಿದೆ. ಶೀಘ್ರವಾಗಿ ರೋಗ ಗುರುತಿಸುವುದರಿಂದ ಯಶಸ್ವಿ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಆರೋಗ್ಯ ಉತ್ತಮಗೊಳಿಸಿಕೊಳ್ಳಲು ನಿತ್ಯದ ಊಟ, ವ್ಯಾಯಾಮ ಸೇರಿದಂತೆ ಇನ್ನಿತರ ಚಟುವಟಿಕೆಯಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದರು.

ಮಣಿಪಾಲ್‌ ಆಸ್ಪತ್ರೆಯ ವಿಭಾಗೀಯ ಮುಖ್ಯಸ್ಥ ಡಾ. ಎಸ್‌.ಪಿ.ಸೋಮಶೇಖರ್‌ ಮಾತನಾಡಿ, ಜಂಕ್‌ಫ‌ುಡ್‌ ಸೇವನೆ, ಮದ್ಯಪಾನ ಮತ್ತು ಧೂಮಪಾನ ಹೆಚ್ಚಾಗಿರುವುದು ಹಾಗೂ ದೇಹದಲ್ಲಿ ಕೊಲೆಸ್ಟ್ರಾಲ್‌ ಪ್ರಮಾಣ ಹೆಚ್ಚಳ ಕೂಡ ಇದಕ್ಕೆ ಕಾರಣವಾಗಿವೆ ಎಂದು ತಿಳಿಸಿದರು. ಈ ವೇಳೆ ಮಣಿಪಾಲ್ ಹೆಲ್ತ್‌ ಎಂಟರ್‌ಪ್ರೈಸಸ್‌ ಪ್ರೈ.ಲಿ, ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ದೀಪಕ್‌ ವೇಣುಗೋಪಾಲ್‌, ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next