Advertisement

ಶಾಹೀನ್ ಚಂಡಮಾರುತ ಎಫೆಕ್ಟ್: ಗಲ್ಫ್ ರಾಷ್ಟ್ರಗಳಿಗೆ ತೆರಳುವ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ

11:28 AM Oct 04, 2021 | Team Udayavani |

ಮಂಗಳೂರು: ಕಳೆದ ಕೆಲ ದಿನಗಳಿಂದ ಅಬ್ಬರಿಸುತ್ತಿರವ ಶಾಹೀನ್ ಚಂಡಮಾರುತದ ಪರಿಣಾಮ ವಿಮಾನಯಾನದ ಮೇಲೆ ಬೀರಿದೆ.

Advertisement

ಚಂಡಮಾರುತದ ಹಿನ್ನೆಲೆಯಲ್ಲಿ ಒಮಾನ್ ಸೇರಿ ಗಲ್ಫ್ ರಾಷ್ಟ್ರಗಳಿಗೆ ತೆರಳುವ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಮಂಗಳೂರಿನಿಂದ ಮಸ್ಕತ್‌ ಗೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡುವಂತಾಗಿದೆ.

ಇದನ್ನೂ ಓದಿ:ಸಚಿನ್ ಗೆ ಸಂಕಷ್ಟ: ತೆರಿಗೆ ವಂಚನೆ ಆರೋಪ, ಪಂಡೋರಾ ಪೇಪರ್ಸ್ ನಲ್ಲಿ ಕ್ರಿಕೆಟ್ ದಿಗ್ಗಜನ ಹೆಸರು

ಒಮಾನ್ ನಲ್ಲಿ ಭಾನುವಾರ ಮತ್ತು ಸೋಮವಾರ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಲಾಗಿತ್ತು. ಮಸ್ಕತ್‌ಗೆ ಮಂಗಳೂರಿನಿಂದ  ತೆರಳಬೇಕಾದ ವಿಮಾನ ಚಂಡಮಾರುತದ ಪರಿಣಾಮವಾಗಿ ಟೇಕಾಫ್ ಆಗದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ದಿನವಿಡೀ ಕಾಯುವಂತಾಯಿತು.

ವಿಮಾನಯಾನ ಮಾಡಲು ಬಂದಿದ್ದ 100ಕ್ಕೂ ಹೆಚ್ಚು ಜನರು ವಿಮಾನ ನಿಲ್ದಾಣದಲ್ಲೇ ಬಾಕಿಯಾಗುವ ಪರಿಸ್ಥಿತಿ ಎದುರಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next