Advertisement

Cyclone: ಆಂಧ್ರ, ತಮಿಳುನಾಡುಗಳಿಗೆ ಮಿಚಾಂಗ್‌ ಸೈಕ್ಲೋನ್‌ ಭೀತಿ

12:01 AM Dec 03, 2023 | Team Udayavani |

ಚೆನ್ನೈ/ಭುವನೇಶ್ವರ: ಬಂಗಾಲ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ “ಮಿಚಾಂಗ್‌’ ಎಂಬ ಹೆಸರಿನ ಚಂಡ ಮಾರುತವಾಗಿ ರೂಪಾಂತರಗೊಳ್ಳುತ್ತಿದೆ. ಹೀಗಾಗಿ ಆಂಧ್ರಪ್ರದೇಶದ ದಕ್ಷಿಣ, ತಮಿಳುನಾಡಿನ ಉತ್ತರ ಭಾಗದ ಕರಾವಳಿ ಪ್ರದೇಶ ಭಾಗದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಗಳಿವೆ.

Advertisement

ಹೊಸ ಚಂಡಮಾರುತ ನೆಲ್ಲೂರು ಮತ್ತು ಮಚಲೀಪಟ್ಟಣಂಗಳ ನಡುವೆ ಮಂಗಳವಾರ ಹಾದು ಹೋಗಲಿದೆ. ಇದರ ಜತೆಗೆ ಪ್ರತೀ ಗಂಟೆಗೆ 80ರಿಂದ 90 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಒಂದು ಹಂತದಲ್ಲಿ ಅದರ ವೇಗ 100 ಕಿ.ಮೀ.ಗೆ ಹೆಚ್ಚುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಒಡಿಶಾ ಕರಾವಳಿಯಲ್ಲೂ ಧಾರಾಕಾರ ಮಳೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next