Advertisement

ಅಪ್ಪಳಿಸಿತು ಗುಲಾಬ್‌; ಒಡಿಶಾದಲ್ಲಿ ಭೂಕುಸಿತ |ಆಂಧ್ರದಲ್ಲಿ 2 ಸಾವು

01:09 AM Sep 27, 2021 | Team Udayavani |

ಭುವನೇಶ್ವರ/ಕೋಲ್ಕತಾ: ಆಂಧ್ರಪ್ರದೇಶ ಮತ್ತು ಒಡಿಶಾಕ್ಕೆ “ಗುಲಾಬ್‌’ ಅಪ್ಪಳಿಸಿದೆ. ಸೈಕ್ಲೋನ್‌ ಪ್ರಭಾವದಿಂದಾಗಿ ವಿಶೇಷವಾಗಿ ಒಡಿಶಾದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮೇಯಲ್ಲಿ ಒಡಿಶಾಕ್ಕೆ “ಯಾಸ್‌’ ಹೆಸರಿನ ಚಂಡಮಾರುತ ಅಪ್ಪಳಿ ಸಿದ ನಾಲ್ಕು ತಿಂಗಳ ಬಳಿಕ ಈ ಚಂಡ ಮಾರುತ ಅಪ್ಪಳಿಸಿದೆ.

Advertisement

ಗಂಜಾಂ ಜಿಲ್ಲೆಯಲ್ಲಿ 16 ಸಾವಿರ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿ ಸಲಾಗಿದೆ. ಅಲ್ಲಲ್ಲಿ ಭೂಕುಸಿತವೂ ಉಂಟಾ ಗಿದೆ. ದಕ್ಷಿಣ ಒಡಿಶಾದ ಜಿಲ್ಲೆಗಳಿಗೆ ಮುಂದಿನ 24 ಗಂಟೆಗಳು ಅತ್ಯಂತ ಮಹತ್ವದ್ದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಪ್ರತೀ ಗಂಟೆಗೆ 90- 100 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಮುನ್ನೆಚ್ಚರಿಕೆ ನೀಡಲಾ ಗಿದೆ. ಹಲವು ರೈಲುಗಳ ಸಂಚಾರ ರದ್ದು ಗೊಳಿಸಲಾಗಿದೆ ಮತ್ತು ಮಾರ್ಗ ಬದ ಲಾವಣೆ ಮಾಡಲಾಗಿದೆ. ಎರಡೂ ರಾಜ್ಯ ಗಳಲ್ಲಿ ನೌಕಾಪಡೆ, ಐಎಎಫ್, ರಾಷ್ಟ್ರೀಯ ವಿಪತ್ತು ನಿರ್ವಹಣ ದಳ, ಎರಡೂ ರಾಜ್ಯಗಳ ವಿಪತ್ತು ನಿರ್ವಹಣ ದಳದ ಸಿಬಂದಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿಒಸ್ಟ್ರಾವಾ ಓಪನ್‌ ಟೆನಿಸ್‌:ಸಾನಿಯಾ-ಶುಯಿ ಜೋಡಿಗೆ ಪ್ರಶಸ್ತಿ

3 ಸಾವು: ಆಂಧ್ರದ ಶ್ರೀಕಾಕುಳಂ ಜಿಲ್ಲೆಯಲ್ಲಿ ಬಂಗಾಲ ಕೊಲ್ಲಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಆರು ಮೀನುಗಾರರ ಪೈಕಿ ಇಬ್ಬರು ಸಾವಿಗೀಡಾಗಿದ್ದಾರೆ ಮತ್ತು ಒಬ್ಬ ನಾಪತ್ತೆ ಯಾಗಿದ್ದಾನೆ. ಇತರ ಮೂವರು ಸುರಕ್ಷಿತ ವಾಗಿ ದಡಸೇರಿದ್ದಾರೆ. ಶ್ರೀಕಾಕುಳಂ ಜಿಲ್ಲೆ ಯಲ್ಲಿ 61 ಪರಿಹಾರ ಶಿಬಿರ ತೆರೆಯಲಾಗಿ ದೆ. 1,100 ಮಂದಿಯನ್ನು ಅಲ್ಲಿಗೆ ಸ್ಥಳಾಂತರಿ ಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸುಮಿತ್‌ ಕುಮಾರ್‌ ಹೇಳಿದ್ದಾರೆ.

ರಸ್ತೆಯಲ್ಲೇ ಮೀನು ಹಿಡಿದರು
ಪಶ್ಚಿಮ ಬಂಗಾಲ ರಾಜಧಾನಿ ಕೋಲ್ಕತಾ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕೂಡ ಧಾರಾಕಾರ ಮಳೆಯಾಗಿದೆ. ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಪ್ರಕಾರ ಬುಧವಾರದ ವರೆಗೆ ಹಲವು ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ.

Advertisement

ರವಿವಾರ‌ ಸುರಿದ ಮಳೆಯಿಂದಾಗಿ ಕೋಲ್ಕತಾ ನಗರದ ವಿವಿಧ ಭಾಗಗಳಿಗೆ ನೀರು ನುಗ್ಗಿ, ಜನಜೀವನಕ್ಕೆ ತೊಂದರೆಯಾಯಿತು. ನಗರ ನ್ಯೂ ಟೌನ್‌ ಎಂಬಲ್ಲಿ ನೀರು ನುಗ್ಗಿ ಪ್ರವಾಹ ಉಂಟಾಗಿತ್ತು. ಅಲ್ಲಿ ಕೆಲವರು ಮೀನು ಹಿಡಿದು, ಅವುಗಳನ್ನು ಮಾರಿ ದುಡ್ಡು ಸಂಪಾದಿಸಿಕೊಂಡಿದ್ದಾರೆ. ಅದರ ವೀಡಿಯೋ ಈಗ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಸ್ಥಳೀಯ ನಿವಾಸಿ ವೀಡಿಯೋದಲ್ಲಿ ಹೇಳಿಕೊಂಡಿರುವಂತೆ ಆತನಿಗೆ 16 ಕೆಜಿ ಮೀನು ಸಿಕ್ಕಿದೆಯಂತೆ. ಇದರ ಜತೆಗೆ ಮಳೆಯಿಂದಾಗಿ ಮೀನುಗಾರಿಕೆ ಬಳಸುವ ದೋಣಿ, ಬಲೆ ಸೇರಿದಂತೆ ಹಲವು ವಸ್ತುಗಳಿಗೆ ಹಾನಿಯಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next