ಮಂಗಳೂರು: ಫೈಂಜಾಲ್ ಚಂಡಮಾರುತದ ಪರಿಣಾಮವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜೆಲ್ಲಿಯಲ್ಲಿ ಸೋಮವಾರ(ಡಿ2 ) ಬೆಳಗ್ಗಿನಿಂದಲೂ ಮೋಡ ಕವಿದ ವಾತಾವರಣವಿದ್ದು, ಉಭಯ ಜೆಲ್ಲೆಯ ಹಲವೆಡೆ ಸಿಡಿಲಿನ ಅಬ್ಬರದೊಂದಿಗೆ ಭಾರೀ ಮಳೆ ಸುರಿದಿದೆ.
ಮಂಗಳೂರು ನಗರದಲ್ಲಿ ಭಾರೀ ಮಳೆ ಸುರಿದಿದ್ದು ಸಂಜೆಯ ಹಲವೆಡೆ ಮುಖ್ಯ ರಸ್ತೆಗಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದು ವಾಹನ ಸವಾರರು ಮತ್ತು ಸಾರ್ವಜನಿಕರು ಪರದಾಡಬೇಕಾಯಿತು.
ಉಭಯ ಜಿಲ್ಲೆಗಳಲ್ಲೂ ಮಳೆ ರಾತ್ರಿಯೂ ಮುಂದುವರಿಯುವ ಸಾಧ್ಯತೆಗಳಿವೆ. ಮಂಗಳವಾರಕ್ಕೆ ಅನ್ವಯವಾಗುವಂತೆ ಜಿಲ್ಲಾಡಳಿತ ಪಿಯುಸಿವರೆಗೆ ರಜೆ ಘೋಷಣೆ ಮಾಡಿದೆ.
ಅಕಾಲಿಕ ಭಾರೀ ಮಳೆಯಿಂದಾಗಿ ಅಡಿಕೆ, ಭತ್ತ, ತರಕಾರಿ, ಮೇವು ಸೇರಿ ವ್ಯಾಪಕ ಕೃಷಿ ಹಾನಿ ಸಂಭವಿಸಿದೆ. ಅನೇಕ ಕಡೆ ಯಕ್ಷಗಾನ ಕಾರ್ಯಕ್ರಮಗಳು ರದ್ದಾಗಿದೆ. ಕೆಲವು ಹರಕೆ ಮೇಳಗಳು ರಂಗಸ್ಥಳಗಳ ಬದಲು ಹಾಲ್ ಗಳಲ್ಲಿ ಪ್ರದರ್ಶನ ನೀಡಲಿದ್ದಾರೆ.
ದಕ್ಷಿಣ ಕನ್ನಡ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ಉಪಲೋಕಾಯುಕ್ತರಿಂದ ಕುಂದುಕೊರತೆ ಸ್ವೀಕಾರ ನಡೆಯುತ್ತಿರುವಾಗಲೇ ಮಳೆ ನೀರು ಒಳಗೆ ನುಗ್ಗಿದೆ.
ಬಹುಸಂಸ್ಕೃತಿ ಉತ್ಸವ’ ಕಾರ್ಯಕ್ರಮ ಮುಂದೂಡಿಕೆ
ಮಂಗಳೂರಿನ ಪುರಭವನದಲ್ಲಿ ಡಿ 3 ಮತ್ತು 4 ರಂದು ಹಮ್ಮಿಕೊಂಡಿದ್ದ ‘ಬಹುಸಂಸ್ಕೃತಿ ಉತ್ಸವ’ ಕಾರ್ಯಕ್ರಮ ಮುಂದೂಡಿಕೆ ಮಾಡಿರುವುದಾಗಿ ಜಿಲ್ಲಾಡಳಿತ ತಿಳಿಸಿದೆ.