Advertisement

ಚಂಡಮಾರುತ ಪರಿಣಾಮ: ಮುಂಗಾರು ಪ್ರವೇಶಿಸಿದರೂ ಕ್ಷೀಣ?

10:12 AM Jun 12, 2019 | Vishnu Das |

ಮಂಗಳೂರು: ಲಕ್ಷದ್ವೀಪ ಸಮೀಪ ಸೃಷ್ಟಿಯಾಗಿರುವ ವಾಯುಭಾರ ಕುಸಿತ ಮುಂಗಾರಿನ ಆಗಮನವನ್ನು ವಿಳಂಬಗೊಳಿಸಲಿದೆ. ಅಲ್ಲದೆ ಈ ತಿಂಗಳು ವಾಡಿಕೆಯಂತೆ ಮಳೆ ಬರುವ ಸಂಭವ ಕಡಿಮೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

ರವಿವಾರ ಕೇರಳ ಕರಾವಳಿಗೆ ಮುಂಗಾರು ಅಪ್ಪಳಿಸಿದ್ದು, ಇದಾದ ಒಂದೆರಡು ದಿನಗಳಲ್ಲಿಯೇ ಅದು ಕರ್ನಾಟಕ ಕರಾವಳಿ ತೀರವನ್ನೂ ಸ್ಪರ್ಶಿಸಿ ಭಾರೀ ಮಳೆಯುಂಟು ಮಾಡು
ವುದು ವಾಡಿಕೆ. ಆದರೆ ಚಂಡಮಾರುತದ ಪರಿಣಾಮದಿಂದ
ಮುಂಗಾರು ಸ್ವಲ್ಪ ಮಟ್ಟಿಗೆ ದುರ್ಬಲಗೊಂಡಿದ್ದು ವಾಡಿಕೆ
ಗಿಂತ ಒಂದೆರಡು ದಿನ ವಿಳಂಬವಾಗಿ ಅಂದರೆ, ಜೂ.12 ಅಥವಾ 13ರಂದು ರಾಜ್ಯ ಕರಾವಳಿ ತಲುಪಲಿದೆ.

ಕರಾವಳಿ ಪ್ರದೇಶಕ್ಕೆ ಮುಂಗಾರು ಅಪ್ಪಳಿಸಿದ ಬಳಿಕ ಎರಡ
ರಿಂದ ಮೂರು ದಿನಗಳ ಕಾಲ ಉತ್ತಮ ಮಳೆಯಾಗಲಿದೆ. ಬಳಿಕ ಕೆಲವು ದಿನ ವಾಡಿಕೆಯಂತೆ ಮಳೆಯಾಗುವ ಸಂಭವ ಕಡಿಮೆ. ಏಕೆಂದರೆ ಈಗಾಗಲೇ ಉಂಟಾದ ಚಂಡಮಾರುತ ಲಕ್ಷದ್ವೀಪದಿಂದ ಸುಮಾರು 400 ಕಿ.ಮೀ. ಮತ್ತು ಮುಂಬಯಿಯಿಂದ 540 ಕಿ.ಮೀ. ಹಿಂದೆ ಇದೆ. ಮುಂದಿನ ದಿನಗಳಲ್ಲಿ ಚಂಡಮಾರುತ ಮತ್ತಷ್ಟು ತೀವ್ರಗೊಳ್ಳಲಿದ್ದು, ಗುಜರಾತ್‌ ರಾಜ್ಯದ ಕಡೆಗೆ ಚಲಿಸಲಿದೆ ಎಂದು ಹವಾಮಾನ ಇಲಾಖೆಯ ತಜ್ಞರು ವಿಶ್ಲೇಷಿಸಿದ್ದಾರೆ.

ಇಂದು ಭಾರೀ ಗಾಳಿ ಸಾಧ್ಯತೆ
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಬುಧವಾರ ರಾಜ್ಯ ಕರಾವಳಿಯಲ್ಲಿ ಭಾರೀ ಗಾಳಿ ಬೀಸಲಿದೆ. ಒಂದೆಡೆ ಚಂಡಮಾರುತ ಪರಿಣಾಮ ಮತ್ತು ಮುಂಗಾರು ಆಗಮನ ವೇಳೆ ಭಾರೀ ಗಾಳಿ ಬೀಸುವುದು ಸಹಜ.

ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಜೂ.12 ಅಥವಾ 13ರಂದು ಮುಂಗಾರು ತೀವ್ರಗೊಳ್ಳಲಿದೆ. ಚಂಡಮಾರುತ ಕೂಡ ಇದ್ದು, ಕರಾವಳಿಗೆ ಮುಂಗಾರು ಆಗಮಿಸಿದರೂ, ಸ್ವಲ್ಪ ಸಮಯದಲ್ಲೇ ಕ್ಷೀಣಿಸುವ ಸಾಧ್ಯತೆ ಇದೆ.
– ಸುನಿಲ್‌ ಗವಾಸ್ಕರ್‌,
ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ

Advertisement
Advertisement

Udayavani is now on Telegram. Click here to join our channel and stay updated with the latest news.

Next