Advertisement

Cyclone Dana;120 ಕಿ.ಮೀ. ವೇಗದಲ್ಲಿ ಅಪ್ಪಳಿಸಲಿದೆ : 13 ಲಕ್ಷ ಮಂದಿ ಸುರಕ್ಷಿತ ಸ್ಥಳಕ್ಕೆ

12:44 AM Oct 25, 2024 | Team Udayavani |

ಭುವನೇಶ್ವರ/ ಕೋಲ್ಕತಾ: ಒಡಿಶಾ ಮತ್ತು ಪಶ್ಚಿಮ ಬಂಗಾಲ ಕರಾವಳಿಗೆ ದಾನಾ ಚಂಡಮಾರುತ ಅಪ್ಪಳಿಸಲಿರುವಂತೆಯೇ 2 ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿಯಂತೆ ಚಂಡಮಾರುತ ಅಪ್ಪಳಿಸುವ ವೇಳೆ ಪ್ರತೀ ಗಂಟೆಗೆ 120 ಕಿ.ಮೀ. ವರೆಗೆ ಗಾಳಿ ಬೀಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಂಭಾವ್ಯ ಹಾನಿ ತಡೆಗಟ್ಟಲು 2 ರಾಜ್ಯ ಸರಕಾರಗಳು ಸಕಲ ಸಿದ್ಧತೆ ಕೈಗೊಂಡಿವೆ. ಬಂಗಾಲಕೊಲ್ಲಿಯಲ್ಲಿ ನೌಕಾಪಡೆಯ 2 ಹಡಗುಗಳು ರಕ್ಷಣ ಕಾರ್ಯಾಚರಣೆಗಾಗಿ ಸಿದ್ಧವಾಗಿರಿಸಲಾಗಿದೆ.

Advertisement

ಗುರುವಾರ ಪಶ್ಚಿಮ ಬಂಗಾಲದಲ್ಲೂ ಸ್ಥಳಾಂತರ ಆರಂಭಿಸಲಾಗಿದ್ದು, 3.5 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. 2 ರಾಜ್ಯಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಪುರಿಯ ಜಗನ್ನಾಥ ಮಂದಿರಕ್ಕೆ ಭೇಟಿ ನೀಡಬೇಡಿ ಎಂದು ಒಡಿಶಾ ಸರಕಾರ ಭಕ್ತರಿಗೆ ಮನವಿ ಮಾಡಿದೆ. ಇದೇ ವೇಳೆ, ಚಂಡಮಾರುತದ ಪ್ರಭಾವದಿಂದಾಗಿ ಝಾರ್ಖಂಡ್‌ನ‌ಲ್ಲಿಯೂ ಧಾರಾಕಾರ ಮಳೆಯಾಗಲಿದೆ. ಹೀಗಾಗಿ ಅಲ್ಲಿಯೂ ಕೂಡ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ.

ಒಡಿಶಾದಲ್ಲಿ ಮಳೆ ಶುರು: ಸೈಕ್ಲೋನ್‌ ಹಿನ್ನೆಲೆಯಲ್ಲಿ ಒಡಿಶಾದಲ್ಲಿ ಮಳೆ ಆರಂಭವಾಗಿದೆ. ಒಡಿಶಾದ ಬಾಲಸೋರ್‌, ಭದ್ರಕ್‌ ಮತ್ತು ಪುರಿಗಳಲ್ಲಿ ಭಾರೀ ಗಾಳಿಗೆ ಮರಗಳು ಉರುಳಿ ಬಿದ್ದಿವೆ. ಪಾರಾದೀಪದಲ್ಲಿ 6.2 ಸೆಂ.ಮೀ. ಮಳೆಯಾಗಿದೆ.

ಸಹಾಯವಾಣಿ ಆರಂಭ: ಚಂಡಮಾರುತ ಕಿನಾರೆಗಪ್ಪಳಿಸಿದ ಬಳಿಕ ಸಂಭವಿಸುವ ಅಪಾಯದ ಸಮಯದಲ್ಲಿ ಸೂಕ್ತ ನಿರ್ವಹಣೆಗಾಗಿ 2 ರಾಜ್ಯಗಳಲ್ಲೂ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಕೋಲ್ಕತಾದಲ್ಲಿ ಆರಂಭಿಸಲಾಗಿರುವ ಕೇಂದ್ರ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

7,285 ಸೈಕ್ಲೋನ್‌ ಸೆಂಟರ್‌: ಒಡಿಶಾದಲ್ಲಿ 7,285 ಸೈಕ್ಲೋನ್‌ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲದೇ 91 ವೈದ್ಯಕೀಯ ತಂಡಗಳನ್ನು ನಿಯೋಜನೆ ಮಾಡಲಾಗಿದೆ. 2 ರಾಜ್ಯಗಳಲ್ಲಿ ಎನ್‌ಡಿಆರ್‌ಎಫ್ ಮತ್ತು ರಾಜ್ಯ ವಿಪತ್ತು ನಿರ್ವಹಣ ಪಡೆಯ 70ಕ್ಕೂ ಹೆಚ್ಚು ತಂಡಗಳನ್ನು 2 ರಾಜ್ಯಗಳಲ್ಲಿ ನಿಯೋಜನೆ ಮಾಡಲಾಗಿದೆ. ಬಂಗಾಲ ಕೊಲ್ಲಿಯಲ್ಲಿ ಭಾರತೀಯ ನೌಕಾಪಡೆಯ 2 ಹಡಗುಗಳನ್ನು ನಿಯೋಜನೆ ಮಾಡಲಾಗಿದೆ.

Advertisement

ಸೈಕ್ಲೋನ್‌ ಹಿನ್ನೆಲೆ: 350 ರೈಲುಗಳ ರದ್ದು
ಸೈಕ್ಲೋನ್‌ ಹಿನ್ನೆಲೆಯಲ್ಲಿ ಒಡಿಶಾ, ಪಶ್ಚಿಮ ಬಂಗಾಲ ಮೂಲಕ ಸಂಚರಿಸಲಿರುವ 350ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದು ಮಾಡಲಾಗಿದೆ. ಹೌರಾ- ಸಿಕಂದಾರಾಬಾದ್‌, ಸಂಭಾಲ್ಪುರ-ಪುರಿ ಎಕ್ಸ್‌ಪ್ರೆಸ್‌ ಸೇರಿದಂತೆ 350ಕ್ಕೂ ಹೆಚ್ಚು ರೈಲುಗಳನ್ನು ರದ್ದು ಮಾಡ ಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ಕರ್ನಾಟಕದ 2 ರೈಲುಗಳೂ ರದ್ದು
ಚಂಡಮಾರುತ ಹಿನ್ನೆಲೆಯಲ್ಲಿ ಪುರಿ- ಯಶವಂತ­ಪುರ ಗರೀಬ್‌ ರಥ ಸಾಪ್ತಾಹಿಕ ಎಕ್ಸ್‌ ಪ್ರಸ್‌, ಅ. 26ರಂದು ಯಶವಂತಪುರದಿಂದ ಹೊರಡುವ ಯಶವಂತಪುರ-ಪುರಿ ಗರೀಬ್‌ ರಥ ಸಾಪ್ತಾಹಿಕ ಎಕ್ಸ್‌ಪ್ರೆಸ್‌, ಅ.27ರಂದು ಗುವಾಹಾಟಿಯಿಂದ ಹೊರಡುವ ಗುವಾ ಹಾಟಿ- ಎಸ್‌ಎಂವಿಟಿ ಬೆಂಗಳೂರು ಟ್ರೆ„-ವೀಕ್ಲಿ ಎಕ್ಸ್‌ ಪ್ರಸ್‌ ಸಂಚಾರ ರದ್ದು ಮಾಡಲಾಗಿದೆ.

ಬಂಗಾಲದಲ್ಲಿ 3.5 ಲಕ್ಷ, ಒಡಿಶಾದಲ್ಲಿ 10 ಲಕ್ಷ ಮಂದಿ ಸ್ಥಳಾಂತರ
ಪಶ್ಚಿಮ ಬಂಗಾಲದಲ್ಲಿ ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು 3.5 ಲಕ್ಷ ಮಂದಿಯನ್ನು ಸ್ಥಳಾಂತರ ಮಾಡಲು ಸರಕಾರ ಸೂಚಿಸಿದೆ. ಸಮರೋಪಾದಿಯಲ್ಲಿ ಈ ಕೆಲಸ ಕೈಗೊಂಡಿರುವ ವಿಪತ್ತು ನಿರ್ವಹಣ ದಳ ಹಾಗೂ ಪೊಲೀಸರು, ಎಲ್ಲರನ್ನೂ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ಪೊಲೀಸರಿಗೆ ಸ್ಥಳಾಂತರಕ್ಕೆ ಸಹಕರಿಸಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮನವಿ ಮಾಡಿದ್ದಾರೆ. ಇದೇ ವೇಳೆ, ಒಡಿಶಾದ 14 ಜಿಲ್ಲೆಗಳಲ್ಲಿ 10 ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.

ಕೋಲ್ಕತಾ ವಿ.ನಿಲ್ದಾಣದಲ್ಲಿ 15 ಗಂಟೆ ಹಾರಾಟ ಸ್ಥಗಿತ
ಚಂಡಮಾರುತ ಹಿನ್ನೆಲೆಯಲ್ಲಿ ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಗುರುವಾರ ಸಂಜೆ 5 ಗಂಟೆಯಿಂದ ಶುಕ್ರವಾರ ಬೆಳಗ್ಗೆ 9 ಗಂಟೆಯವರೆಗೆ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next