Advertisement

Cyclone Dana: 10ಲಕ್ಷ ಜನ ಸ್ಥಳಾಂತರ… ಅಪಾಯದ ಭೀತಿಯಲ್ಲಿ ಒಡಿಶಾದ 3,000 ಗ್ರಾಮಗಳು

09:13 AM Oct 24, 2024 | Team Udayavani |

ಭುವನೇಶ್ವರ: ಬಂಗಾಲಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ದಿಂದಾಗಿ ಸೃಷ್ಟಿಯಾಗುತ್ತಿರುವ ದಾನಾ ಚಂಡಮಾರುತದಿಂದಾಗುವ ಅಪಾಯ ತಪ್ಪಿಸಲು ಒಡಿಶಾ ಸರಕಾರ ಸಕಲ ಸಿದ್ಧತೆ ಆರಂಭಿಸಿದೆ. ಇದಕ್ಕಾಗಿ 14 ಜಿಲ್ಲೆಗಳ 3,000 ಗ್ರಾಮಗಳಲ್ಲಿನ 10 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲು ಯೋಜನೆ ರೂಪಿಸುತ್ತಿದೆ.

Advertisement

ದಾನಾ ಚಂಡಮಾರುತ ಗುರುವಾರ(ಅ.24) ತಡರಾತ್ರಿ ಅಥವಾ ಶುಕ್ರವಾರ ಬೆಳಗ್ಗಿನ ವೇಳೆ ಒಡಿಶಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ. ರಾಜ್ಯದ ಅರ್ಧದಷ್ಟು ಜನ ಮಳೆಗೆ ತುತ್ತಾಗುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ. ಇವರೆಲ್ಲರಿಗೂ ಅಗತ್ಯ ಆಹಾರ ಹಾಗೂ ಇತರ ವ್ಯವಸ್ಥೆಗ ಳನ್ನು ಕಲ್ಪಿಸಲು ರಾಜ್ಯ ಸರಕಾರ ಸೂಚಿ ಸಿದೆ. ಪಶ್ಚಿಮ ಬಂಗಾಲದಲ್ಲಿ ಕೂಡ ಮುನ್ನೆಚ್ಚರಿಕೆ ವಹಿಸಲಾಗಿದೆ.

300ಕ್ಕೂ ಹೆಚ್ಚು ರೈಲು ರದ್ದು: ಆಗ್ನೇಯ ಮತ್ತು ಪೂರ್ವ ಕರಾವಳಿ ರೈಲ್ವೇ ವಿಭಾಗದಲ್ಲಿ ಸಂಚರಿಸುವ 300ಕ್ಕೂ ಹೆಚ್ಚು ರೈಲುಗಳನ್ನು ಮುನ್ನೆ ಚ್ಚರಿಕೆ ಕ್ರಮವಾಗಿ ರದ್ದು ಮಾಡಲಾಗಿದೆ. ಕರಾವಳಿ ಕಾವಲು ಪಡೆಯನ್ನು ಎಚ್ಚರ ದಿಂದಿರುವಂತೆ ಸೂಚಿಸಲಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಲು ಸಿದ್ಧವಾಗಿರಲು ಸೂಚಿಸಲಾಗಿದೆ. ನಿರ್ವಹಣ ಪಡೆಯ 288 ತಂಡಗಳನ್ನು ನೇಮಿಸಲಾಗಿದೆ.

ಇದನ್ನೂ ಓದಿ: Mangaluru: ವಿಧಾನ ಪರಿಷತ್‌ ಉಪ ಚುನಾವಣೆ… ಮತ ಎಣಿಕೆ ಪ್ರಕ್ರಿಯೆ ಆರಂಭ

Advertisement

Udayavani is now on Telegram. Click here to join our channel and stay updated with the latest news.

Next