ನಾಲ್ಕು ದಿನ, ಮೇ 14ರ ವರೆಗೆ ಮಳೆ ಯಾಗುವ ಸಾಧ್ಯತೆಗಳಿವೆ ಎಂದು ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ನೆರೆಯ ರಾಜ್ಯಗಳಂತೆ ಭಾರೀ ಮಳೆಯಾಗದು ಎಂದು ಇಲಾಖೆ ತಿಳಿಸಿದೆ.
Advertisement
ಒಂದು ವಾರದಿಂದ ರಾಜ್ಯದ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡು ಪ್ರದೇಶದಲ್ಲಿ ಮಳೆಯಾಗುತ್ತಿದೆ. ಇದು ಮುಂದಿನ ನಾಲ್ಕು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Related Articles
ರಾಜ್ಯಕ್ಕೆ ಚಂಡಮಾರುತದ ಪರಿಣಾಮ ದೊಡ್ಡ ಮಟ್ಟದಲ್ಲಿ ಇರುವುದಿಲ್ಲ. ಆದರೆ ಸಾಧಾರಣ ಮಳೆಯಾಗಲಿದೆ. ಮೋಡ ಕವಿದ ವಾತಾವರಣ ಇರಲಿದೆ, ಗರಿಷ್ಠ 5 ಸೆಂ.ಮೀ.ವರೆಗೆ ಮಳೆಯಾಗಬಹುದು ಎಂದು ತಿಳಿಸಿದ್ದಾರೆ.
Advertisement
ಮುಂಗಾರು ಆಗಮನಕ್ಕೆ ಪೂರಕಬೇಸಗೆಯ ಕೊನೆಯ ಅವಧಿಯಲ್ಲಿ ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದರೆ ಅದರಿಂದ ಮುಂಗಾರು ಮಾರುತಗಳ ಆಗಮನಕ್ಕೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ. ಈಗ ವಾಯುಭಾರ ಕುಸಿತವಾಗಿ ಅಸಾನಿ ಚಂಡಮಾರುತ ಉದ್ಭವಿಸಿರುವುದರಿಂದ ಮುಂಗಾರು ಮಳೆ ತರುವ ಮೋಡಗಳು ಆಗಮಿಸಲು ಉತ್ತಮ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಮೂಲಗಳು ತಿಳಿಸಿವೆ.