Advertisement

ಸೈಕ್ಲಿಂಗ್‌ ದುರಂತ: ಬ್ರಿಟನ್‌ನ ಸೈಕ್ಲಿಸ್ಟ್‌ ಮೈಕ್‌ ಹಾಲ್‌ ದುರ್ಮರಣ

03:04 PM Apr 02, 2017 | |

ಸಿಡ್ನಿ: ಬ್ರಿಟನ್‌ನ ಅಲ್ಟ್ರಾ ಡಿಸ್ಟೆನ್ಸ್‌ ಸೈಕ್ಲಿಸ್ಟ್‌ ಮೈಕ್‌ ಹಾಲ್‌ ಆಸ್ಟ್ರೇಲಿಯಾದಲ್ಲಿ ನಡೆದ ಸೈಕಲ್‌ ರೇಸ್‌ವೊಂದರ ವೇಳೆ ದುರಂತ ಸಾವಿಗೀಡಾದ ಘಟನೆ ಶುಕ್ರವಾರ ನಡೆದಿದೆ.

Advertisement

35 ವರ್ಷದ ಅವರು 5,300 ಕಿ.ಮೀ. ಸವಾಲನ್ನು ಒಳಗೊಂಡ ಇಂಡಿಯನ್‌ ಫೆಸಿಪಿಕ್‌ ವೀಲ್‌ ಸೈಕ್ಲಿಂಗ್‌ ರೇಸ್‌ನಲ್ಲಿ ಪಾಲ್ಗೊಂಡಿದ್ದರು.

ಪರ್ಥ್ನಿಂದ ಸಿಡ್ನಿವರೆಗೆ ಕ್ರಮಿಸುವ ಸವಾಲಿನ ರೇಸ್‌ ಅದಾಗಿತ್ತು.ಈ ರೇಸ್‌ ವೇಳೆ ಕ್ಯಾನ್‌ಬೆರ್ರಾ ಬಳಿ ಎದುರಿನಿಂದ ರಭಸದಿಂದ ಬಂದ ಕಾರೊಂದು ಹಾಲ್‌ ಅವರ ಸೈಕಲ್‌ಗೆ ಗುದ್ದಿದೆ. ಘರ್ಷಣೆ ವೇಗಕ್ಕೆ ಹಾಲ್‌ ಗಂಭೀರ ಗಾಯಗೊಂಡರು. ಬಳಿಕ ಅಸುನೀಗಿದರು ಎಂದು ಸಂಘಟಕರು ತಿಳಿಸಿದ್ದಾರೆ. ಸಾವಿಗೀಡಾಗುವ ಮೊದಲು ರೇಸ್‌ನಲ್ಲಿ ಹಾಲ್‌ 2ನೇ ಸ್ಥಾನಿಯಾಗಿದ್ದರು ಎನ್ನಲಾಗಿದೆ. ಅಪಘಾತಕ್ಕೆ ಸ ಬಂಧಪಟ್ಟಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.ಎಲ್ಲ ರೀತಿಯಲ್ಲೂ ತನಿಖೆಗೆ ಸಹಕಾರ ನೀಡುವುದಾಗಿ ಸಂಘಟಕರು ತಿಳಿಸಿದ್ದಾರೆ. ಅಲ್ಲದೆ ಘಟನೆ ನಡೆದ ತಕ್ಷಣ ಕೂಟವನ್ನು ಸ್ಥಗಿತಗೊಳಿಸಲಾಗಿದ್ದು ಮುಂದಿನ ರೇಸ್‌ ಯಾವಾಗ ನಡೆಸಬೇಕು ಎನ್ನುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ಸೂಕ್ತ ಭದ್ರತೆ ವ್ಯವಸ್ಥೆ ಮಾಡಿದ ಬಳಿಕ ರೇಸ್‌ ನಡೆಸಲು ಸಂಘಟಕರು ಚಿಂತನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next