ತೆಕ್ಕಟ್ಟೆ: ರಾಜ್ಯಾದ್ಯಂತ ಕೋವಿಡ್ 19 ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಸರಕಾರ ಕೋವಿಡ್ ನಿಯಂತ್ರಿಸುವ ನಿಟ್ಟಿನಿಂದ ಮೇ.10 ರಂದು ರಾಜ್ಯಾದ್ಯಂತ ಬಿಗಿ ಲಾಕ್‌ಡೌನ್ ಕಟ್ಟುನಿಟ್ಟಿನ ನಿಯಮ ಜಾರಿಗೆ ಬಂದಿದೆ.
ಆತಂಕದಲ್ಲಿದ್ದ ಜನತೆ ಅಂಗಡಿ ಮಂಗಟ್ಟು ತೆರೆಯುತ್ತದೋ ಇಲ್ಲವೋ ಎನ್ನುವ ಗೊಂದಲದ ನಡುವೆ ಸೈಕಲ್ ಸವಾರನೋರ್ವ ಪೇಟೆಗೆ ಅಗತ್ಯ ವಸ್ತುಗಳನ್ನು ತರಲು ತೆರಳುವ ದೃಶ್ಯವನ್ನು ಇಲ್ಲಿನ ಕುಂಭಾಸಿಯ ವಿನೇಂದ್ರ ಆಚಾರ್ಯ ಅವರು ತನ್ನದೆಯಾದ ಕ್ರಿಯಾತ್ಮಕ ವೀಡಿಯೋ ಒಂದನ್ನು ಸೆರೆಹಿಡಿದ್ದಾರೆ.
ಕಳೆದೆರಡು ದಿನಗಳಿಂದ ದೃಶ್ಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಪೊಲೀಸರ ಲಾಟಿ ಪ್ರಹಾರದ ದೃಶ್ಯ ಕಂಡು ವ್ಯಕ್ತಿಯೋರ್ವ ತಲೆಗೆ ಹೆಲ್ಮೆಟ್ ಧರಿಸಿ, ಬೆನ್ನಿಗೆ ತಗಡಿನ ಶೀಟ್ ಕಟ್ಟಿಕೊಂಡು ತೆರಳುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
-ವರದಿ : ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ