Advertisement
ಬಬಲೇಶ್ವರ ತಾಲೂಕಿನ ಹೆಬ್ಬಾಳಟ್ಟಿ ಗ್ರಾಮದ ಭಾವನಾ ಪಾಟೀಲ್ ಸೈಕ್ಲಿಂಗ್ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ತೋರುತ್ತಿದ್ದು, ಸೈಕ್ಲಿಂಗ್ ಕ್ರೀಡಾ ಕೂಟಗಳಲ್ಲಿ ಸ್ವಂತ ಸೈಕಲ್ ಇಲ್ಲದೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಈ ವಿಷಯ ತಿಳಿದ ಎಂ.ಬಿ. ಪಾಟೀಲ್ ಅವರು 3 ಲಕ್ಷ ರೂ. ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
Related Articles
Advertisement
ಭಾವನಾ ತಾಯಿ ಶ್ರೀದೇವಿ ಪಾಟೀಲ್ ಮಾತನಾಡಿ, ”ನನ್ನ ಪತಿ ಮಹಾದೇವ ಪಾಟೀಲ್ ಪಿಕೆಪಿಎಸ್ನಲ್ಲಿ ಕೆಲಸ ಮಾಡುತ್ತಾರೆ. ಮೂರು ಮಕ್ಕಳ ನಮ್ಮ ಕುಟುಂಬದಲ್ಲಿ ಹಿರಿಯ ಮಗಳೇ ಭಾವನಾ. ಆಕೆಗೆ ಬಾಲ್ಯದಿಂದಲೇ ಸೈಕಲ್ ಎಂದರೆ ಇಷ್ಟ. ಈಗ ಉತ್ತಮ ಸಾಧನೆ ಮಾಡುತ್ತಿದ್ದರೂ, ಮುಂದಿನ ತಿಂಗಳು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಸ್ವಂತ ಸೈಕಲ್ ಇರಲಿಲ್ಲ. ಹೊಸ ಸೈಕಲ್ ಕೊಡಿಸಲು ನಮ್ಮಲ್ಲಿ ಆರ್ಥಿಕ ಶಕ್ತಿ ಇರಲಿಲ್ಲ. ನಮ್ಮ ಮಗಳ ವಿಷಯ ತಿಳಿದ ಎಂ.ಬಿ.ಪಾಟೀಲ ಅವರು ನಮಗೆ 3 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದಾರೆ. ಈ ಮೂಲಕ ಸೈಕ್ಲಿಂಗ್ ಕ್ಷೇತ್ರದಲ್ಲಿ ನಮ್ಮ ಮಗಳು ಹೆಚ್ಚಿನ ಸಾಧನೆ ಮಾಡಲು ನೆರವಾಗಿದ್ದಾರೆ” ಎಂದು ಆನಂದಭಾಷ್ಪ ಸುರಿಸಿದರು.
ಬಿಎಲ್ ಡಿಇ ಮುಖ್ಯ ಆಡಳಿತಾಧಿಕಾರಿ ಡಾ.ಆರ್.ವಿ.ಕುಲಕರ್ಣಿ, ನಿರ್ದೇಶಕ ಸಂ.ಗು.ಸಜ್ಜನ, ಕ್ರೀಡಾ ನಿರ್ದೇಶಕ ಎಸ್.ಎಸ್.ಕೋರಿ, ಕೈಲಾಸ ಹಿರೇಮಠ, ಅಶೋಕ ಕಾಖಂಡಕಿ, ಶ್ರೀಶೈಲ ತಪಸೆ, ಸಿದ್ದರಾಯ ಪ್ರಧಾನಿ, ಈಶ್ವರಪ್ಪ ಬಂಗಾರಿ, ಹೊನಮಲಪ್ಪ ಹಟ್ಟಿ, ಈಶ್ವರ ಅಳ್ಳಗಿ, ಮಲ್ಲು ತುಂಗಳ ಸೇರಿದಂತೆ ಇತರರು ಉಪಸ್ಥಿತರಿದ್ದರು.