Advertisement

Cycling; ಗ್ಲಿಯೋನಾ ಡಿ’ಸೋಜಾಗೆ ಸ್ವರ್ಣ ಪದಕ

11:03 PM May 31, 2024 | Team Udayavani |

ಮಂಗಳೂರು: ಭಾರತದ ಸುದೀರ್ಘ‌ ಸೈಕ್ಲಿಂಗ್‌ ರೇಸ್‌ ಆಗಿರುವ “ಬೆಂಗಳೂರು ಕ್ಲಾಸಿಕ್‌ ರೋಡ್‌ ರೇಸ್‌-ಬೆಂಗಳೂರು ಬೆ„ಸಿಕಲ್‌ ಚಾಂಪಿಯನ್‌ಶಿಪ್‌’ನಲ್ಲಿ (ಬಿಬಿಸಿಎಚ್‌) ಮಂಗಳೂರಿನ ಸೈಕ್ಲಿಸ್ಟ್‌ ಗ್ಲಿಯೋನಾ ಡಿ’ಸೋಜಾ ಅವರು ಚಿನ್ನದ ಪದಕ ಜಯಿಸಿದ್ದಾರೆ.

Advertisement

ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದ ಈ ಚಾಂಪಿಯನ್‌ಶಿಪ್‌ನ ವಿವಿಧ ವಿಭಾಗಗಳಲ್ಲಿ ದೇಶದ ಇನ್ನೂರರಷ್ಟು ಸ್ಪರ್ಧಿಗಳು ಪಾಲ್ಗೊಂಡಿದ್ದರು. ಎರಡನೇ ಬಾರಿಗೆ ಈ ರೇಸ್‌ನಲ್ಲಿ ಪಾಲ್ಗೊಳ್ಳುತ್ತಿರುವ ಗ್ಲಿಯೋನಾ ಅವರು ಮಹಿಳಾ ವಿಭಾಗದ 83 ಕಿ.ಮೀ. ಅಂತರದ ದೂರವನ್ನು 2 ಗಂಟೆ, 43 ನಿಮಿಷಗಳಲ್ಲಿ ಪೂರ್ಣಗೊಳಿಸಿ ಅಗ್ರಸ್ಥಾನಿಯಾದರು. ಈ ವಿಭಾಗದಲ್ಲಿ 25 ಸ್ಪರ್ಧಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next