Advertisement

ಸೈಕ್ಲಿಂಗ್‌: ವಿಶ್ವದಾಖಲೆ ನಿರ್ಮಿಸಿದ 105ರ ಅಜ್ಜ

03:45 AM Jan 06, 2017 | Team Udayavani |

ಪ್ಯಾರಿಸ್‌: ಸೈಕ್ಲಿಂಗ್‌ನ 105 ಪ್ಲಸ್‌ ವಿಭಾಗದ ಸ್ಪರ್ಧೆಯಲ್ಲಿ, ಒಂದು ಗಂಟೆ ಅವಧಿಯಲ್ಲಿ 22.547 ಕಿ.ಮೀ. ಗುರಿ ತಲುಪಿದ 105ರ ಅಜ್ಜ ರಾಬರ್ಟ್‌ ಮರ್ಚಂಡ್‌ ವಿಶ್ವದಾಖಲೆ ನಿರ್ಮಿಸಿದ್ದಾರೆ. ಫ್ರಾನ್ಸ್‌ನಲ್ಲಿ ಮೂರು ವರ್ಷಕ್ಕೂ ಮುನ್ನ ಇದೇ ಟ್ರಾÂಕ್‌ನಲ್ಲಿ ನಡೆದ 100 ಪ್ಲಸ್‌ ವಿಭಾಗದಲ್ಲಿ ರಾಬರ್ಟ್‌ ಮರ್ಚಂಡ್‌ 1 ಗಂಟೆಯಲ್ಲಿ 26.927 ಕಿ.ಮೀ ಗುರಿ ತಲುಪಿ ವಿಶ್ವದಾಖಲೆ ನಿರ್ಮಿಸಿದ್ದರು.

Advertisement

92 ಲ್ಯಾಪ್ಸ್‌ಗಳನ್ನು ಯಶಸ್ವಿಯಾಗಿ ಪೂರೈಸಿದ ರಾಬರ್ಟ್‌ ತಾನು ಈಗ ಪ್ರತಿಸ್ಪರ್ಧಿಗಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಒಟ್ಟಾರೆ ವಿಭಾಗದಲ್ಲಿ ಅತಿ ವೇಗದಲ್ಲಿ ಗುರಿ ತಲುಪಿ ವಿಶ್ವದಾಖಲೆ ನಿರ್ಮಿಸಿದ ಖ್ಯಾತಿ ಇಂಗ್ಲೆಂಡ್‌ನ‌ ಬ್ರಾಡ್ಲಿ ವಿಗ್ಸ್‌ ಹೆಸರಲ್ಲಿದೆ. ವಿಗ್ಸ್‌ 2005ರಲ್ಲಿ ಗಂಟೆಗೆ 54.526 ಕಿ.ಮೀ. ಗುರಿ ತಲುಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next